ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ತಳಕು ಹೋಬಳಿಯ ಕೋಡಿಹಳ್ಳಿ ಗ್ರಾಮದಲ್ಲಿ ಜೈ ಭೀಮ್ ಶ್ರೀ ಯುವ ವಿನಾಯಕ ಸಂಘ ಹಾಗೂ ಡಾ.ಬಿ.ಆರ್ ಅಂಬೇಡ್ಕರ್ ಯುವಕ ಸಂಘ ಇವರ ಸಹಯೋಗದೊಂದಿಗೆ ಈ ಬಾರಿ ದಲಿತ ಸಮುದಾಯದ ಶಕ್ತಿ ದೇವತೆಯಾದ ಶ್ರೀ ದುರ್ಗಾಂಬಿಕ ದೇವಸ್ಥಾನದ ಆವರಣದಲ್ಲಿ ಶ್ರೀ ಗೌರಿ ಗಣೇಶನನ್ನು ಪ್ರತಿಷ್ಟಾಪಿಸಿ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು..
ಪ್ರತಿ ದಿನ ಸಂಜೆ ಯುವಕ ಯುವತಿಯರು ಹಾಗೂ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತಿದ್ದವು ಅಲ್ಲದೆ ಪ್ರತಿ ದಿನವೂ ವಿವಿಧ ಕುಟುಂಬಗಳಿಂದ ವಿಶೇಷ ಪೂಜೆ ಹಾಗೂ ಪ್ರಸಾದ ವಿನಿಯೋಗ ಕಾರ್ಯಕ್ರಮ ಮಾಡಲಾಗಿದೆ.
ಇನ್ನೂ ಕೊನೆಯ ದಿನ 10 ಅಡಿ ಎತ್ತರ ವಿರುವ ಸಿಂಹಾದಿಪತಿಯಾದ ಶ್ರೀ ಗಣೇಶನಿಗೆ ವಿಶೇಷ ಪೂಜೆಯನ್ನು ಸಲ್ಲಿಸಿ ವಿಸರ್ಜನೆಗೆ ಚಾಲನೆ ನೀಡಲಾಯಿತು,
ಇನ್ನೂ ಗ್ರಾಮದ ರಾಜ ಬೀದಿಗಳಲ್ಲಿ ಪಟಾಕಿ ಸಿಡಿಸುತ್ತಾ ಡಿ.ಜೆ ಸೌಂಡ್ ನೊಂದಿಗೆ ನೂರಾರು ಯುವಕ, ಯುವತಿಯರು, ಹಿರಿಯರು ಕುಣಿದು ಕುಪ್ಪಳಿಸಿದರು.
ಮೆರವಣಿಗೆಯು ಅತ್ಯಂತ ವಿಜೃಂಭಣೆಯಿಂದ ಕೂಡಿದ್ದು ,ಗ್ರಾಮದ ಜನರು ಗಣಪನಿಗೆ ವಿಶೇಷ ಪೂಜೆಯನ್ನು ಮಾಡಿಸಿದರೆ, ಸಾವಿರಾರು ಭಕ್ತರು ಗಣೇಶನ ಕೃಪೆಗೆ ಪಾತ್ರರಾದರು,
ಯಾವುದೇ ಅಹಿತಕರ ಘಟನೆಗಳು ನಡೆಯದೆ ಸುರಕ್ಷಿತವಾಗಿ ಗಣಪತಿಯನ್ನು ಪೂಜಿಸಿ ಗ್ರಾಮದ ಕೆರೆಯಲ್ಲಿ ಅತ್ಯಂತ ಭಕ್ತಿಪೂರ್ವಕವಾಗಿ ವಿಸರ್ಜನೆ ಮಾಡಲಾಯಿತು..
ಈ ಬಾರಿಯ ಗೌರಿ ಗಣೇಶೋತ್ಸವ ಆಚರಣೆಯ ನೇತೃತ್ವವನ್ನು ಶ್ರೀಧರ್.ಏಚ್ , ರಾಜು.ಡಿ , ವಿಜಯ್ ಕುಮಾರ್.ಡಿ, ತಿಪ್ಪೇಸ್ವಾಮಿ.ಯು, ರಮೇಶ್.ಎಂ, ಶಿವಮೂರ್ತಿ.ಟಿ , ರುದ್ರಮುನಿ.ಏಚ್, ಮಲ್ಲಿಕಾರ್ಜುನ್.ಜಿ, ಅರುಣ್ ಕುಮಾರ್.ಟಿ, ಡ್ಯಾನ್ಸ್ ಮಾಸ್ಟರ್ ವೆಂಕಟೇಶ್, ತಿಪ್ಪೇಶ್.ಎನ್ , ಮನೋಜ್ ಕುಮಾರ್.ಟಿ, ಕಿರಣ್, ಸ್ವಾಮಿ.ಆರ್ ವಹಿಸಿಕೊಂಡಿದ್ದರು. ಹಾಗೂ ಸಮುದಾಯದ ಮುಖಂಡರು, ಯಜಮಾನರು ಸಮಸ್ತ ಯುವಕ ಯುವತಿಯರು, ಸರ್ವ ಸದಸ್ಯರ ಸಹಕಾರದೊಂದಿಗೆ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಗೊಳಿಸಿದರು..