ಚಳ್ಳಕೆರೆ : ದಿ:29-09-2023 ರಂದು ಸರ‍್ವಜನಿಕ ಕುಂದು ಕೊರತೆಗಳ ಸಭೆಯನ್ನು ಪರಶುರಾಂಪುರ ಹೋಬಳಿ ವ್ಯಾಪ್ತಿಯ ಸಿದ್ದೇಶ್ವರನ ದರ‍್ಗದ. ಗ್ರಾಪಂ ಆವರದಲ್ಲಿ 10-30 ಸಮಕ್ಕೆ ಹಾಗೂ ಪಿ.ಮಹದೇವಪುರ ಗ್ರಾಮದ ಪ್ರೌಢಶಾಲೆ ಆವರಣದಲ್ಲಿ ಮಧ್ಯಾಹ್ನ 12.30ಕ್ಕೆ ಸರಿಯಾಗಿ ಸರ‍್ವಜನಿಕ ಕುಂದು ಕೊರತೆಗಳ ನಿವಾರಣೆಗಾಗಿ
ಸಭೆಯನ್ನು ಆಯೋಜಿಸಲಾಗಿರುತ್ತದೆ. ಸದರಿ ಸಭೆಗೆ ಯಾವುದೇ ಅಧೀನ ಸಿಬ್ಬಂದಿಯನ್ನು ನಿಯೋಜಿಸದೆ ಇಲಾಖಾ
ಮಾಹಿತಿಯೊಂದಿಗೆ ಕಡ್ಡಾಯವಾಗಿ ತಾಲ್ಲೂಕು ಮಟ್ಟದ ಪ್ರತಿಯೊಬ್ಬ ಅಧಿಕಾರಿಗಳು ಖುದ್ದಾಗಿ ಹಾಜರಾಗಲು ಕೋರಿದ್ದಾರೆ.

ಚಳ್ಳಕೆರೆ ವಿಧಾನಸಭಾ ಕ್ಷೇತ್ರವ್ಯಾಪ್ತಿಯ ಸಿದ್ದೇಶ್ವರನದರ‍್ಗ ಹಾಗೂ ಪಿ.ಮಹದೇಪುರ ಗ್ರಾಪಂ ಕೇಂದ್ರಗಳಲ್ಲಿ ಶಾಸಕ ಟಿ.ರಘುಮರ‍್ತಿ ಅಧ್ಯಕ್ಷತೆಯಲ್ಲಿ ಜನ ಸಂಪರ‍್ಕ ಸಭೆಯನ್ನು ಆಯೋಜಿಸಲಾಗಿದ್ದು ತಾಲೂಕು ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಅಗತ್ಯ ಮಾಹಿತಿಯೊಂದಿಗೆ ಸಭೆಗೆ ಹಾಜರಿಯಾಗುವಂತೆ ತಾಪಂ ಇಒ ಹೊನ್ನಯ್ಯ , ತಹಶೀಲ್ದಾರ್ ರೇಹಾನ್ ಪಾಷ ತಿಳಿಸಿದ್ದಾರೆ.

About The Author

Namma Challakere Local News
error: Content is protected !!