ರಾಮಾಂಜನೇಯ ಚನ್ನಗಾನಹಳ್ಳಿ

ಚಳ್ಳಕೆರೆ: ಬಯಲು ಸೀಮೆಯಲ್ಲಿ ಶೈಕ್ಷಣಿಕವಾಗಿ ಅಭಿವೃದ್ದಿ ಹೊಂದಲು ಶಿಕ್ಷಣ ಅತ್ಯಗತ್ಯ ಅಂತಹ ಶಿಕ್ಷಣ ಇಲಾಖೆ ಇಂದು ಅನುದಾನ ಇಲ್ಲದೆ, ತಾಲೂಕಿನಲ್ಲಿ ಶಿಥಿಲ ಕೊಠಡಿಗಳ ಮಧ್ಯೆ ಸೊರಗುತ್ತಿದೆ, ಇನ್ನೂ ಚಳ್ಳಕೆರೆ ತಾಲೂಕಿನ ಗೋಪನಹಳ್ಳಿ ಗ್ರಾಮದಲ್ಲಿ 1928ರಲ್ಲಿ ಸ್ಥಾಪಿಸಿರುವ ಸ್ವಾತಂತ್ರ‍್ಯ ಪೂರ್ವದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಓದಿ ಉನ್ನತ ಹುದ್ದೆಗಳಲ್ಲಿ ಸೇರಿ ಜೀವನ ರೂಪಿಸಿಕೊಂಡಿದ್ದಾರೆ.
ಆದರೆ ಶಾಲೆ ಮಾತ್ರ ಶಿಥಿಲವ್ಯವಸ್ಥೆಗೆ ಹೋಗಿರುವುದು ವಿಪಯಾರ್ಸವೇ ಸರಿ. ಇಂತಹ ಶಾಲೆಯಲ್ಲಿ ಸಮಸ್ಯೆಗಳ ಸರಮಾಲೆ ಹೆಚ್ಚಾಗಿದೆ, ಕಾಂಪೌAಡ್ ಸಮಸ್ಯೆ, ಕೊಠಡಿಗಳ ಸಮಸ್ಯೆ ಈಗೇ ಶಿಥಿಲಗೊಂಡಿರುವ ಕೊಠಡಿಗಳಿಂದ ವಿದ್ಯಾರ್ಥಿಗಳು ಭಯದ ವಾತಾವರಣದಲ್ಲಿ ಪಾಠ ಕೇಳುವ ಪರಿಸ್ಥಿತಿ ನಿರ್ಮಾಣಗೊಂಡಿದೆ.
ಗೋಪನಹಳ್ಳಿ ಗ್ರಾಮದ ಊರಿನ ಮಧ್ಯಭಾಗದಲ್ಲಿರುವ ಸರ್ಕಾರಿ ಶಾಲೆಯಲ್ಲಿ ಕೊಠಡಿಗಳೆಲ್ಲ ಶಿಥಿಲಗೊಂಡು ಬಿರುಕು ಬಿಟ್ಟಿದ್ದು ಇಂತಹ ಶಾಲೆಯಲ್ಲಿ ಶಿಕ್ಷಕರು ಮಕ್ಕಳಿಗೆ ಪಾಠ ಬೋಧಿಸಲು ಜೀವ ಕೈಯಲ್ಲಿ ಹಿಡಿದುಕೊಂಡು ಬೋಧನೆ ಮಾಡುತ್ತಿದ್ದಾರೆ. ಶಾಲೆಯಲ್ಲಿ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣವು ದೊರೆಯುತ್ತಿದೆ, ಆದರೆ ಕೊಠಡಿಗಳೆಲ್ಲ ಮಳೆ ಬಂದಾಗ ನೀರು ನಿಲ್ಲುತ್ತಿರುವುದು ಬೇಸರದ ಸಂಗತಿಯಾಗಿದೆ. ಶಾಲೆಯ ಮುಂಭಾಗ ಕಾಂಪೌAಡ್ ಇಲ್ಲದೆ ಇರುವುದರಿಂದ ಶಾಲೆಗೆ ಭದ್ರತೆ ಇಲ್ಲದಂತಾಗಿದೆ ಹಾಗೂ ರಸ್ತೆ ಬದಿಯಲ್ಲಿ ಇರುವ ಶಾಲೆಯ ಕಟ್ಟಡಕ್ಕೆ ಮುಳ್ಳಿನ ಗಿಡಗಳು ಬೆಳೆದು ಕೆಲ ಕೊಠಡಿಗಳು ಗಿಡಮರಗಳಿಂದ ಆವರಿಸಿವೆ.
ಶಾಲೆಯೂ ಸಂಪೂರ್ಣವಾಗಿ ಶಿಥಿಲಗೊಂಡಿದೆ ಇದರಿಂದ ಜಿನಿ ಜಿನಿ ಮಳೆ ಬಂದರು ಸಹ ಮಕ್ಕಳಿಗೆ ಕುಳಿತುಕೊಳ್ಳಲು ಜಾಗವಿಲ್ಲದೆ ಕೊಠಡಿಗಳು ಸೋರುತ್ತಿವೆ. ಶಾಲೆ ಕಾಂಪೌAಡ್ ತೆರವುಗೊಳಿಸಿ ಎಂಟು ತಿಂಗಳು ಕಳೆದರೂ ಕಾಂಪೌAಡ್ ನಿರ್ಮಾಣ ಮಾಡದೇ ಇರುವುದರಿಂದ ಸಂಜೆ ಸಮಯದಲ್ಲಿ ಕೆಲ ಕಿಡಿಗೇಡಿಗಳು ಅನೈತಿಕವಾಗಿ ಶಾಲಾ ಆವರಣದಲ್ಲಿ ಮಧ್ಯಪಾನ ಮಾಡಿ ಬಾಟಲಿಗಳನ್ನು ಇಲ್ಲೇ ಬಿಡುತ್ತಾರೆ ಎಂದು ಸ್ಥಾಳೀಯರು ದೂರಿದ್ದಾರೆ.
ಇದರಿಂದ ಮಕ್ಕಳಿಗೆ ಬಹಳ ತೊಂದರೆ ಆಗುತ್ತಿದೆ. ಇದರಿಂದ ಸಂಬAಧ ಪಟ್ಟ ಶಿಕ್ಷಣ ಇಲಾಖೆ ಹಾಗೂ ಅಧಿಕಾರಿಗಳು ಸುಸಜ್ಜಿತ ಕಟ್ಟಡಗಳು ಹಾಗೂ ಕಾಂಪೌAಡ್ ನಿರ್ಮಾಣ ಮಾಡಿಕೊಡಬೇಕೆಂದು ಶಾಲೆಯ ಹಳೆಯ ವಿದ್ಯಾರ್ಥಿಗಳು ವಿಶ್ವವಾಣಿ ಪತ್ರಿಕೆಯ ಮೂಲಕ ಮನವಿ ಮಾಡಿದ್ದಾರೆ.
ಸರ್ಕಾರಿ ಶಾಲೆಯ ಇತಿಹಾಸ : ಹಳೆ ವಿದ್ಯಾರ್ಥಿಗಳ ಸಾಧನೆ
1928 ರಲ್ಲಿ ಸ್ಥಾಪನೆಯದ ಶಾಲೆಯಲ್ಲಿ ಅನೇಕ ವಿದ್ಯಾರ್ಥಿಗಳು ಓದಿ ಉನ್ನತ ಹುದ್ದೆಯಲ್ಲಿದ್ದಾರೆ ಇಂತಹ ವಿದ್ಯಾರ್ಥಿಗಳಲ್ಲಿ ಪ್ರಸ್ತುತವಾಗಿ ನರೇಂದ್ರನಾಥ್ ಅವರು ಇಂಜಿನಿಯರಿAಗ್ ಇನ್ಸ್ಟಿಟ್ಯೂಟ್ ಅನ್ನು ಹಿಮಾಚಲ ಪ್ರದೇಶದಲ್ಲಿ ನಡೆಸುತ್ತಿದ್ದಾರೆ. ಹಾಗೆಯೇ ಪುನೀತ್ ಕುಮಾರ್ ಅವರು ಅರಣ್ಯ ಇಲಾಖೆಯಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿದ್ದಾರೆ. ಬಸವರಾಜ್ ಅಗ್ರಿಕಲ್ಚರ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಹೀಗೆ ಕೃಷಿ ಇಲಾಖೆ ನೀರಾವರಿ ಕೆಪಿಟಿಸಿಎಲ್ ಪೊಲೀಸ್ ಇಲಾಖೆ ಶಿಕ್ಷಣ ಇಲಾಖೆಯಲ್ಲಿ ಅನೇಕರು ಕಾರ್ಯನಿರ್ವಹಿಸುತ್ತಿದ್ದಾರೆ.
ಪ್ರಸ್ತುತ ಈ ಶಾಲೆಯಲ್ಲಿ 134 ವಿದ್ಯಾರ್ಥಿಗಳು ಓದುತ್ತಿದ್ದು ಏಳು ಜನ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ ಖಾಸಗಿ ಶಾಲೆಯನ್ನು ಮೀರಿಸುವಂತೆ ಶಾಲೆಯಲ್ಲಿ ಶಿಕ್ಷಣವನ್ನು ನೀಡುತ್ತಿದ್ದಾರೆ. ಶಾಲೆಯಲ್ಲಿ ಗ್ರಂಥಾಲಯ ಇದ್ದು ಇದರಲ್ಲಿ ಮೂರು ಸಾವಿರಕ್ಕೂ ಅಧಿಕ ಪುಸ್ತಕಗಳು ಇವೆ ಆದರೆ ಕೊಠಡಿಗಳು ಸರಿ ಇಲ್ಲದೆ ಇರುವುದರಿಂದ ಪ್ರತಿವರ್ಷ ಶಾಲೆಯ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಆಗುತ್ತಿದೆ ಇದರಿಂದ ಹಳೆಯ ವಿದ್ಯಾರ್ಥಿಗಳು ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು ಅಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲ. ಇದರಿಂದ ಸರ್ಕಾರಿ ಶಾಲೆ ಶಿಥಿಲಗೊಂಡು ಅವನತಿ ಆಗುತ್ತಿದ್ದು ಇದಕ್ಕೆ ಸರ್ಕಾರವೇ ಶಾಲೆಗಳ ಅಭಿವೃದ್ಧಿಯನ್ನು ಮಾಡಬೇಕು ಎಂದು ಶಾಲೆಯ ಹಳೆ ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

ಬಾಕ್ಸ್ ಮಾಡಿ :
1.@ ನಾನು ಶಾಸಕನಾದ ಅವಧಿಯಿಂದ ಇಲ್ಲಿಯವರೆಗೆ ಅತೀ ಹೆಚ್ಚಿನ ಅನುದಾನ ಶಾಲಾ ಕಾಲೇಜುಗಳಿಗೆ ನೀಡಿದ್ದೆನೆ, ಇನ್ನೂ ಬಯಲು ಸೀಮೆಯ ಮಕ್ಕಳು ಶೈಕ್ಷಣಿಕವಾಗಿ ಮುಂದೆ ಬರಬೇಕು ಎನ್ನುವ ಸದುಉದ್ದೇಶದಿಂದ ತಾಲೂಕಿನಲ್ಲಿ ಇರುವ ಎಲ್ಲಾ ಶಾಲಾ ಕಾಲೇಜುಗಳ ಕೊಠಡಿಗಳ ಮಾಹಿತಿ ಪಡೆದು ಶಿಥಿಲವಾದ ಕೊಠಡಿಗಳನ್ನು ಪರಿಗಣಿಸಿ ಅತೀ ಹೆಚ್ಚಿನ ಅನುದಾನ ನೀಡಿದ್ದೆನೆ, ಇನ್ನೂ 2020-21ನೇ ಸಾಲಿನಲ್ಲಿ ಗೊಪನಹಳ್ಳಿ ಸರಕಾರಿ ಶಾಲೆ ಹಾಗೂ ಹುಣಸೆಕಟ್ಟೆ ಸರಕಾರಿ ಶಾಲೆಯನ್ನು ದತ್ತು ಪಡೆದು ಈಗಾಗಲೇ ತಲಾ 15.ಲಕ್ಷ ಅನುದಾನ ನೀಡಿದ್ದೆನೆ ಇನ್ನೂ ಹೆಚ್ಚಿನ ಅನುದಾನ ನೀಡಲು ಈ ಬಾರಿ ಸುಮಾರು 2.ಕೋಟಿ ಅನುದಾನ ಶಾಲಾ ಕಾಲೇಜು ಕೊಠಡಿಗಳಿಗೆ ಮೀಸಲಿಟ್ಟಿದ್ದೆನೆ, ಮುಂದಿನ ದಿನಗಳಲ್ಲಿ ತಾಲೂಕಿನಲ್ಲಿ ಶಿಥಿಲಗೊಂಡ ಎಲ್ಲಾ ಕೊಠಡಿಗಳಿಗಳಿಗೂ ಕಾಯಕಲ್ಪ ಸಿಗಲಿದೆ.
ಶಾಸಕ ಟಿ.ರಘುಮೂರ್ತಿ ಚಳ್ಳಕೆರೆ ಕ್ಷೇತ್ರ.

2.@ 1928ರಲ್ಲಿ ಸ್ಥಾಪನೆಯಾದ ಶಾಲೆಯು ಸಾವಿರಾರು ವಿದ್ಯಾರ್ಥಿಗಳಿಗೆ ದಾರಿದೀಪವಾಗಿದೆ ಆದರೆ ಕೆಲ ವರ್ಷಗಳಿಂದ ಶಾಲೆ ಶಿಥಿಲಗೊಂಡಿದ್ದು ಅಭಿವೃದ್ಧಿ ಮಾಡಲು ಯಾವ ಅಧಿಕಾರಿಯೂ ಮುಂದಾಗಿಲ್ಲ ಇನ್ನು 5 ವರ್ಷ ಕಳೆದರೆ ಗೋಪನಹಳ್ಳಿ ಶಾಲೆಯು ಶತಮಾನಗಳನ್ನು ಆಚರಿಸುತ್ತದೆ. ಇದರಿಂದ ಸರ್ಕಾರವು ಶಾಲೆಯನ್ನು ಅಭಿವೃದ್ಧಿ ಮಾಡಲು ಮುಂದಾಗಬೇಕೆAದು ಮನವಿ ಮಾಡಿದ್ದಾರೆ.
ಮಣಿಕಂಠ ಶಾಲೆಯ ಹಳೆಯ ವಿದ್ಯಾರ್ಥಿ

3.@ ಶಾಲಾ ಕಾಂಪೌAಡ್ ಇಲ್ಲದೆ ಇರುವುದರಿಂದ ಶಾಲೆಯಲ್ಲಿರುವ ಕೊಠಡಿಗಳು, ಶೌಚಾಲಯ ಅಡುಗೆಕೋಣೆ, ಆಹಾರ ದಾಸ್ತಾನು ಕೊಠಡಿಗಳಿಗೆ ಭದ್ರತೆ ಇಲ್ಲದೆ ಹೊಗಿದೆ, ಇದರಿಂದ ಕಾಂಪೌAಡ್ ಹಾಗೂ ಶಿಥಿಲಗೊಂಡ ಕೊಠಡಿಗಳನ್ನು ವ್ಯವಸ್ಥೆ ಮಾಡಿಸಿದರೆ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ.
—- ಹೆಸರುಹೇಳಲಿಚ್ಚಿಸದ ಶಾಲೆಯ ಶಿಕ್ಷಕರೊಬ್ಬರು

Namma Challakere Local News
error: Content is protected !!