ರಾಜ್ಯ ಮಟ್ಟದ ಶೈಕ್ಷಣಿಕ ಸಮಾವೇಶ, ಹಾಗೂ ಶಿಕ್ಷಕರ ದಿನಾಚರಣೆ ಸಮಾರಂಭಕ್ಕೆ ಶ್ರೀ ತರಳ ಬಾಳು ಜಗದ್ಗುರು ಶ್ರೀ ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ..!
ಚಳ್ಳಕೆರೆ : ಸೆ.27ರಂದು ನಡೆಯುವ ತಾಲೂಕು ಮಟ್ಟದ ಖಾಸಗಿ ಅನುದಾನ ರಹಿತ ಶಾಲಾ ಆಡಳಿತ ಮಂಡಳಿಗಳ ಟ್ರಸ್ಟ್ವತಿಯಿಂದ ರಾಜ್ಯ ಮಟ್ಟದ ಶೈಕ್ಷಣಿಕ ಸಮಾವೇಶ, ಹಾಗೂ ಶಿಕ್ಷಕರ ದಿನಾಚರಣೆ ಹಾಗೂ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಶ್ರೀ ತರಳ ಬಾಳು ಜಗದ್ಗುರು ಶ್ರೀ ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಲು ಆಹ್ವಾನ ನೀಡಲಾಗಿದೆ.
ಅದರಂತೆ ಖಾಸಗಿ ಅನುದಾನ ರಹಿತ ಆಡಳಿತ ಮಂಡಳಿಗಳ ಸಂಘದ ತಾಲೂಕು ಅಧ್ಯಕ್ಷ ಯಾದಲಗಟ್ಟೆ ಜಗನ್ನಾಥ್ ಇನ್ನಿತರೆ ಸಂಘದ ಸದಸ್ಯರು ಆಗಮಿಸಿ ಸ್ವಾಮಿಜಿಗಳಿಗೆ ಆಹ್ವಾನ ನೀಡಿದರು.
ಇನ್ನೂ ಸ್ವಾಮಿಜಿಗಳು ನಾಳೆ ನಡೆಯುವ ಕಾರ್ಯಕ್ರಮಕ್ಕೆ ಬರುವುದಾಗಿ ಸೂಚಿಸಿದ್ದಾರೆ.
ಇದೇ ಸಂಧರ್ಭದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅಧ್ಯಕ್ಷ ಯಾದಲಗಟ್ಟೆ ಜಗನ್ನಾಥ್, ಈಡೀ ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಅಸಂಘಟಿತವಾಗಿದ್ದ ಖಾಸಗಿ ಅನುದಾನ ರಹಿತ ಶಾಲಾ ಆಡಳಿತ ಮಂಡಳಿಗಳನ್ನು ಒಗ್ಗೂಡಿಸಿ ಒಂದು ವೇದಿಕೆಗೆ ತರುವ ಕಾರ್ಯ ಹಾಗುತ್ತಿದೆ, ಇನ್ನೂ ಖಾಸಗಿಯಾಗಿ ಜೀವನ ಪೂರ್ತಿ ಶಿಕ್ಷಕ ವೃತ್ತಿಯಲ್ಲಿ ಸೇವೆ ಸಲ್ಲಿಸಿ ಕೊನೆಗೆ ನಿವೃತ್ತಿ ಜೀವನ ಅನುಭವಿಸುವ ಅದೆಷ್ಟೋ ಶಿಕ್ಷಕರು ಭದ್ರತೆ ಇಲ್ಲದೆ ಇದ್ದಾರೆ, ಅದರಂತೆ ಇಂತಹ ಮಹತ್ವದ ವೇದಿಕೆಯಲ್ಲಿ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡುವ ಮೂಲಕ ಅವರ ಶಿಕ್ಷಕ ವೃತ್ತಿಗೆ ಇನ್ನಷ್ಟು ಪುಷ್ಟಿ ತುಂಬುವ ಕೆಲಸವಾಗಬೇಕಿದೆ ಎಂದರು.
ಇನ್ನೂ ಸಂಘದ ಕಾರ್ಯದರ್ಶಿ ಡಿ.ದಯಾನಂದ ಪ್ರಹ್ಲಾದ್ ಮಾತನಾಡಿ, ಸೆ.27 ರಂದು ನಡೆಯುವ ಕಾರ್ಯಕ್ರಮಕ್ಕೆ ಶಿಕ್ಷಣ ಸಚಿವ ಮಧುಬಂಗಾರಪ್ಪ, ಜಿಲ್ಲಾ ಉಸ್ತೂವಾರಿ ಸಚಿವ ಡಿ.ಸುಧಾಕರ್, ಸ್ಥಳೀಯ ಶಾಸಕ ಟಿ.ರಘುಮೂರ್ತಿ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವ ಎ.ನಾರಾಯಣಸ್ವಾಮಿ, ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಎನ್.ವೈ.ಗೋಪಾಲಕೃಷ್ಣ, ಹೊಸದುರ್ಗ ವಿಧಾನ ಸಭಾಕ್ಷೇತ್ರದ ಶಾಸಕ ಬಿಜಿ.ಗೋವಿಂದಪ್ಪ, ಚಿತ್ರದುರ್ಗ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ, ಹೊಳಲ್ಕೆರೆ ಶಾಸಕ ಎಂ.ಚAದ್ರಪ್ಪ, ಆಗ್ನೇಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ, ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್, ಹಾಗೂ ಸಂಘದ ಎಲ್ಲಾ ಪದಾಧಿಕಾರಿಗಳು, ಭಾಗವಹಿಸುವರು, ಬೆಳಿಗ್ಗೆ 8 ಗಂಟೆಗೆ ಶ್ರೀ ಸರ್ವಪಲ್ಲಿ ರಾಧಕೃಷ್ಣನ್‌ರವರ ಭಾವಚಿತ್ರದೊಂದಿಗೆ ಪ್ರವಾಸಿ ಮಂದಿರದಿAದ ರಾಗವೇಂದ್ರ ಕಲ್ಯಾಣ ಮಂಟಪದವರೆಗೆ ಶೈಕ್ಷಣಿಕ ಜಾಥಾ ನಡೆಸಲಾಗುವುದು ಎಂದರು.
ಈದೇ ಸಂಧರ್ಭದಲ್ಲಿ ಅನುದಾನ ರಹಿತ ಶಾಲಾ ಆಡಳಿತ ಮಂಡಳಿಯಗಳ ಸಂಚಾಲಕರಾದ ಹೆಚ್.ಎಸ್.ರಾಜೇಶ್‌ಗುಪ್ತ, ಡಿ.ಶಿವಪ್ರಸಾದ್, ವಾರಿಯ್ಸ್ ಶಾಲೆಯ ಮಾರುತಿ, ಇನ್ನಿತರು ಪಾಲ್ಗೊಂಡಿದ್ದರು.