ಚಳ್ಳಕೆರೆ ಶ್ರೀ ರಾಮ್ ಟಿವಿಎಸ್ ಗೆ ಬೆಸ್ಟ್ ಸಲ್ಲೆರ್ ಅವಾರ್ಡ್
ಚಳ್ಳಕೆರೆ : ಹೆಚ್ಚು ಹೆಚ್ಚು ಟಿವಿಎಸ್ ಬೈಕ್‍ಗಳ ಮಾರಾಟದ ಮೂಲಕ ಮುನ್ನುಗ್ಗುತ್ತಿರುವ ಚಳ್ಳಕೆರೆಯ ಶ್ರೀರಾಮ್ ಟಿವಿಎಸ್‍ಗೆ ಬೆಸ್ಟ್ ಸೆಲ್ಲರ್ ಅವಾರ್ಡ್ ಲಭಿಸಿದೆ.
ಉತ್ತರ ಕರ್ನಾಟಕ ಹಾಗೂ ಗೋವಾ ವಲಯದಲ್ಲಿ ಅತೀ ಹೆಚ್ಚು ಟಿವಿಎಸ್ ಬೈಕ್‍ಗಳ ಮಾರಾಟದ ದಾಖಲೆ ಮಾಡಿರುವ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯ ಶ್ರೀರಾಮ್ ಟಿವಿಎಸ್ ಎರಡೂ ವಲಯಗಳಲ್ಲಿ ಮೂರನೇ ಸ್ಥಾನದಲ್ಲಿದೆ.
ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಡೆನ್ನಿಸನ್ ಹೋಟೆಲ್‍ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಶ್ರೀರಾಮ್ ಟಿವಿಎಸ್ ಮಾಲಿಕ ಪಾಲಯ್ಯ ಕಾಲುವೆಹಳ್ಳಿ ಅವರಿಗೆ ಟಿವಿಎಸ್ ಸಂಸ್ಥೆಯ ನ್ಯಾಷನಲ್ ಸೇಲ್ಸ್ ಮ್ಯಾನೇಜರ್ ಕುಲದೀಪ್ ಶರ್ಮಾ ಅವಾರ್ಡ್ ನೀಡಿ ಪ್ರೋತ್ಸಾಹಿಸಿದ್ದಾರೆ. ಈ ವೇಳೆ ಪ್ರಾದೇಶಿಕ ಮಾರಾಟ ವ್ಯವಸ್ಥಾಪಕ ಹುಸೇನ್, ದಾವಣಗೆರೆ ವಲಯದ ವ್ಯವಸ್ಥಾಪಕಿ ಉಮಾ ಹಾಗೂ ಅಹೋಬಲ ಟಿವಿಎಸ್ ಮಾಲೀಕರಾದ ಪಿ ವಿ ಅರುಣ್ ಕುಮಾರ್ ಇದ್ದರು.