ಪ್ರಮಾಣಿಕತೆ ಮೆರೆದ ಕೋಟೆ ಪ್ರವಾಸಿ ಮಿತ್ರರು : ಕಳೆದುಹೊದ ಮೊಬೈಲ್ ಹಿಂತಿರುಗಿಸಿದ ಯುವಕರು

ಚಳ್ಳಕೆರೆ : ಐತಿಹಾಸಿಕ ಏಳು ಸುತ್ತಿನ ಕೋಟೆ ವೀಕ್ಷಣೆಗೆ ಬಂದಿದ್ದ ಪ್ರವಾಸಿಗರು ಕಳೆದುಕೊಂಡಿದ್ದ ಮೊಬೈಲ್ ಅನ್ನು ಕೋಟೆಯ ಪ್ರವಾಸಿ ಮಿತ್ರರು ಹಿಂತಿರುಗಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ.
ಪಾವಗಡದ ಪ್ರವಾಸಿ ವಿದ್ಯಾರ್ಥಿನಿಯೊಬ್ಬರು ಪೋಟೊ ತೆಗೆದುಕೊಳ್ಳುವ ವೇಳೆ ಮೊಬೈಲ್ ಹಾಗೂ ಹಣದ ಪರ್ಸ್ ಪಕ್ಕಕ್ಕಿಟ್ಟಿದ್ದರು. ಆನಂತರ ಅಲ್ಲಿಯೇ ಮರೆತು ಮುಂದೆ ಹೋಗಿದ್ದಾರೆ. ಈ ವೇಳೆಗೆ ರಕ್ಷಣೆಗಾಗಿ ಆಗಮಿಸಿದ ಪ್ರವಾಸಿ ಮಿತ್ರ ಸಿಬ್ಬಂದಿ ತಮಗೆ ಪಾಯಿಂಟ್ ಗೆ ಆಗಮಿಸಿದಾಗ ಪೋನ್ ರಿಂಗ್ ಆಗಿದೆ. ತಕ್ಷಣ ರಿಸೀವ್ ಮಾಡಿ, ಗಾಬರಿ ಮಾಡಿಕೊಳ್ಳಬೇಡಿ. ಕೋಟೆಯ ಪ್ರವಾಸಿ ಮಿತ್ರರ ಬಳಿ ಮೊಬೈಲ್ ಹಾಗೂ ಹಣ ಇದೆ. ನಿಧಾನವಾಗಿ ಬಂದು ತೆಗೆದುಕೊಂಡು ಹೋಗಿ ಎಂದು ಹೇಳಿದ್ದಾರೆ.
ಸ್ಥಳಕ್ಕೆ ಬಂದು ಹಣ ಹಾಗು ಮೊಬೈಲ್ ಸ್ವೀಕರೀಸಿದ ಪಾವಗಡದ ವಿದ್ಯಾರ್ಥಿನಿ, ಪ್ರವಾಸಕ್ಕಾಗಿ ಬಂದಾಗ ಈ ಘಟನೆ ನಡೆಯಿತು. ಆದರೆ, ಕರೆ ಮಾಡಿದ ತಕ್ಷಣ ಮೊಬೈಲ್ ಸಿಕ್ಕಿದೆ. ಕೋಟೆ ಹಾಗೂ ಇಲ್ಲಿನ ಪ್ರವಾಸಿ ಮಿತ್ರರ ಕಾರ್ಯದ ಬಗ್ಗೆ ಹೆಮ್ಮೆ ಅನ್ನಿಸುತ್ತಿದೆ. ಸುರಕ್ಷತೆಯ ಭಾವ ಮೂಡಿದೆ ಎಂದು ವಿದ್ಯಾರ್ಥಿನಿ ತಿಳಿಸಿದ್ದಾರೆ.
ಕೋಟೆಯ ಪ್ರವಾಸಿ ಮಿತ್ರರಾದ ಕೆ.ಮಲ್ಲಿಕಾರ್ಜುನ, ಆರ್.ಮಾರುತಿ, ಜಿ.ಮಲ್ಲಿಕಾರ್ಜುನ, ಬಿ.ಶ್ರೀನಿವಾಸ ಸುಮಾರು 25 ಸಾವಿರ ಮೊತ್ತದ ಮೊಬೈಲ್ ಹಾಗೂ 450 ರೂ.ಹಣ ಹಿಂತಿರುಗಿಸಿದ್ದಾರೆ. ಇಂತಹ ಪ್ರಾಮಾಣಿಕ ವ್ಯಕ್ತಿಗಳನ್ನು ಎಲ್ಲರೂ ಅಭಿನಂದಿಸಲೆಬೇಕು ಎಂದು ಕೋಟೆ ಪ್ರವಾಸಿ ಮಿತ್ರರ ಮಾತಾಗಿದೆ.

About The Author

Namma Challakere Local News
error: Content is protected !!