ಚಳ್ಳಕೆರೆ : ಸಚಿವ ಡಿ.ಸುಧಾಕರ್ ರವರು 10 ವರ್ಷಗಳ ಹಿಂದೆ ಸೆವೆನ್ ಹಿಲ್ಸ್ ಎಂಬ ಕಂಪನಿಯ ಮೂಲಕ ಜಮೀನು ಖರೀದಿ ಮಾಡಿದ್ದಾರೆ ಈಗ ಇದನ್ನು ಕೆಲವರು ವಿವಾದ ಸೃಷ್ಟಿಸಿದ್ದಾರೆ ಹಾಗೂ ಹಳೆಯ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಸಚಿವರ ತೇಜೋವದೆ ಮಾಡಲಾಗುತ್ತಿದೆ ಎಂದು ಪುರಸಭೆ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಟಿಜೆ ವೆಂಕಟೇಶ್ ಸಚಿವ ಡಿ ಸುಧಾಕರ್ ರವರ ಪರ ಎದುರಾಳಿಗಳಿಗೆ ಚಾಟಿ ಬೀಸಿದ್ದಾರೆ.
ಚಳ್ಳಕೆರೆ ನಗರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ವಿರೋಧ ಪಕ್ಷಗಳು ರಾಜೀನಾಮೆ ಕೇಳುತ್ತಿರುವುದು ಸರಿಯಲ್ಲ ಈಗಾಗಲೇ ಪೊಲೀಸರು ತನಿಖೆ ಕೈಗೊಂಡಿದ್ದು ಪ್ರಕರಣದ ಸತ್ಯ ಸತ್ಯತೆ ಹೊರಬಂದು ತಪ್ಪಿಸ್ತಸ್ಥರಿಗೆ ಶಿಕ್ಷೆ ಆಗಲಿದೆ ಸಚಿವ ಸುಧಾಕರ್ ರವರು ರಾಜೀನಾಮೆ ನೀಡುವ ಪ್ರಶ್ನೆ ಬರುವುದಿಲ್ಲ ಇವರು ರಾಜಕೀಯೇತರವಾಗಿ ವ್ಯವಹಾರಗಳನ್ನು ಮಾಡುತ್ತಾ ಬಂದಿದ್ದಾರೆ ಭೂಮಿ ಖರೀದಿಗೂ ರಾಜಕೀಯಕ್ಕೂ ಯಾವುದೇ ಸಂಬAಧ ಇಲ್ಲ ಸಚಿವರ ಪರವಾಗಿ ಎಂದಿಗೂ ನಾವು ಅವರ ಬೆನ್ನ ಹಿಂದೆ ಇರುತ್ತೇವೆ ಎಂದರು.
ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಮೋಹನ್ ಮಾತನಾಡಿ ಸಚಿವ ಡಿ.ಸುಧಾಕರ್ ರವರು ಕಳೆದ 20 ವರ್ಷಗಳಿಂದ ಶಾಸಕರಾಗಿ ಸಚಿವರಾಗಿ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ ಎಂದಿಗೂ ಜಾತಿ ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡುತ್ತಾ ಬಂದಿಲ್ಲ ಎಲ್ಲಾ ವರ್ಗದ ಜನರನ್ನು ತಮ್ಮ ಬಂಧು ಬಳಗವೆಂದು ಕಾಣುವ ಮನೋಭಾವವನ್ನು ಹೊಂದಿದ್ದಾರೆ ಎಂದರು.
ಚೆನ್ನಮ್ಮ ನಾಗತಿಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಆನಂದ್ ಕುಮಾರ್ ಮಾತನಾಡಿ ಸಚಿವ ಡಿ ಸುಧಾಕರ್ ರವರ ವಿರುದ್ಧ ಆರೋಪ ಮಾಡುವವರು ದಾಖಲೆಗಳನ್ನು ತಂದು ರಾಜ್ಯದ ಜನತೆಯ ಮುಂದೆ ಇಟ್ಟು ಕಾನೂನು ರೀತಿಯ ಹೋರಾಟ ನಡೆಸಲಿ ಕೇವಲ ಪ್ರಚಾರಕ್ಕಾಗಿ ಇಲ್ಲಸಲ್ಲದ ಆರೋಪಗಳನ್ನು ಮಾಡುವುದು ಸರಿಯಲ್ಲ ಎಲ್ಲಾ ವರ್ಗದ ಜನರನ್ನು ತಮ್ಮವರಂತೆ ಕಾಣುವ ಸಚಿವ ಡಿ ಸುಧಾಕರ್ ತಮ್ಮ ಶಾಸಕ ಸಚಿವರ ಅವಧಿಯಲ್ಲಿ ದೀನ ದಲಿತರ ಪರವಾಗಿ ಅನೇಕ ಕಾರ್ಯಕ್ರಮಗಳನ್ನು ರೂಪಿಸಿ ನ್ಯಾಯವನ್ನು ಒದಗಿಸಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಮಾಜಿ ನಗರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಚೇತನ್ ಕುಮಾರ್, ತಳಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಓಬಳೇಶ್, ಚೌಳೂರು ಪ್ರಕಾಶ್, ತಿಪ್ಪೇಸ್ವಾಮಿ, ಅಬುಬಕರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು

Namma Challakere Local News
error: Content is protected !!