ಚಳ್ಳಕೆರೆ : ಭೂ ಕಬಳಿಗೆ ಹಾಗೂ ಜಾತಿ ನಿಂದನೆ ಆರೋಪದಡಿ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ ಆದರೆ ಇಪ್ಪತ್ತು ನಾಲ್ಕು ಗಂಟೆಯಾದರೂ ಕೂಡ ಇನ್ನೂ ಕಷ್ಟಡಿಗೆ ತೆಗೆದುಕೊಂಡಿಲ್ಲ ಬಡವರಿಗೆ ಒಂದು ನ್ಯಾಯ ಜನಪ್ರತಿನಿಧಿಗಳಿಗೊಂದು ನ್ಯಾಯವೇ ಎಂದು ಜಿಲ್ಲಾ ಮಾದಿಗ ಮಹಾ ಸಭಾದ ಅಧ್ಯಕ್ಷ ಎಂ.ಶಿವಮೂರ್ತಿ ಉಘ್ರವಾಗಿ ಖಂಡಿಸಿದ್ದಾರೆ.
ಅವರು ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಚಿವ ಡಿ.ಸುಧಾಕರ್ ರವರು ಮೇಲೆ ಪ್ರರಕಣ ದಾಖಲಾಗಿರುವುದು ಸರಿಯಷ್ಠೆ ಆದರೆ ಪೊಲೀಸ್ ಇಲಾಖೆ ತನಿಖೆ ಮಾಡಿ ಕ್ರಮಕೈಗೊಳ್ಳುವುದು ವಾಡಿಕೆ ಆದರೆ ಸರಕಾರವೇ ಈ ಪಕ್ರರಣ ಮುಚ್ಚಿಹಾಕುವ ಹುನ್ನಾರ ಮಾಡುತ್ತಿದೆ ಎಂಬ ಅನುಮಾನ ಕಾಡುತ್ತಿದೆ, ಒಂದು ಕಡೆ ಗೃಹ ಸಚಿವರು ವರದಿ ತರಿಸಿಕೊಳ್ಳುತ್ತೆನೆ ಎನ್ನುತ್ತಾರೆ ಇನ್ನೋಂದೆಡೆ ಡಿಕೆ.ಶಿವಕುಮಾರ್ ರವರು ಹೇಳುತ್ತಾರೆ ಡಿ.ಸುಧಾಕರ್ ಇತರ ವರ್ತಿಸಿಲ್ಲ ಅವರನ್ನು ಪರೀಶಿಲನೆ ಮಾಡುತ್ತೆನೆ ಎನ್ನುತ್ತಾರೆ ಈಗಿದ್ದಾರೆ ಸಂವಿಧಾನದಲ್ಲಿ ಕಾಯ್ದೆಗಳನ್ನು ಯಾಕೆ ಮಾಡಬೇಕು..? ಸಚಿವರನ್ನು ಉಳಿಸಬೇಕು ಎನ್ನುವುದಾದರೆ ಕಾನೂನು ತಿರುಚಿ ದೌರ್ಜನ್ಯ ಕಾಯ್ದೆ ತೆಗೆದು ಹಾಕಲಿ ಎಂದು ಖಾರವಾಗಿ ಖಂಡಿಸಿದ್ದಾರೆ.
ಸಚಿವ ಡಿ.ಸುಧಾಕರ್ ಮೇಲೆ ಅಟ್ರಾಸಿಟಿ ಪ್ರಕರಣ ದಾಖಲಾಗಿರುವುದು ಇದೇ ಮೊದಲೆನಲ್ಲ ಈ ಹಿಂದೆ ಹಲವು ಬಾರಿ ಪ್ರಕರಣ ದಾಖಲಾಗಿವೆ, ಇನ್ನೂ ಸ್ಥಳೀಯವಾಗಿ ನಗರಸಭೆಗೆ ಸೇರಿದ ಆಸ್ತಿಯನ್ನು ಹೊಯ್ಸಳ ಬ್ಯಾಂಕ್ ನಡೆಸಲು ಬಾಡಿಗೆ ಪಡೆದು ಅವದಿ ಮುಗಿದಿದ್ದರೂ ಕೂಡ ಅವರು ರಾಜಾಕೀಯ ಬಳಸಿ ಆ ಕಟ್ಟಡವನ್ನು ಬೇರೆಯೊಬ್ಬರಿಗೆ ಬಾಡಿಗೆ ನೀಡಿರುವುದು ಇವರ ಕಾರ್ಯ ವೈಖರಿಗೆ ಇವರ ಹೆಸರು ಕೇಳಿ ಬಂದಿದೆ. ಎಂದು ತೀಕ್ಷ÷್ಣವಾಗಿ ಅವರ ಮೇಲೆ ಆರೋಪ ಮಾಡಿದ್ದಾರೆ.

About The Author

Namma Challakere Local News
error: Content is protected !!