ರಾಜ್ಯದಲ್ಲೇ ಮೊದಲ ಸ್ಥಾನ ಪಡೆದ ಚಿತ್ರದುರ್ಗ ಜಿಲ್ಲೆಯಲ್ಲಿ : ಶಾಲೆ ಬಿಟ್ಟ ಮಗುವಿನ ಘಟನೆಗೆ ಮುಖ್ಯಮಂತ್ರಿಗಳ ಸ್ಪಂಧನೆ
ಚಳ್ಳಕೆರೆ : ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕು ಬಸಾಪುರದ ಯೋಗೇಶ್ ಎಂಬ ಬಾಲಕನನ್ನು ಆತನ ತಂದೆ ತಾಯಿ ಆರ್ಥಿಕ ಪರಸ್ಥಿತಿಯಿಂದ ಶಾಲೆ ಬಿಡಿಸಿ ಕಳೆದ 2 ವರ್ಷದಿಂದ ಕುರಿ ಮೇಯಿಸಲು ತೊಡಗಿಸಿದ್ದರು ಎನ್ನಲಾಗಿದೆ ಆದರೆ ಈ ವಿಚಾರವು ಸ್ಥಳೀಯರಾದ ಮಹೇಂದ್ರ ಎಂಬುವರು ಮುಖ್ಯಮಂತ್ರಿ ಟ್ವಿಟರ್ ಖಾತೆಗೆ ಸಂದೇಶ ರವಾನಿಸಿದ್ದ ಕೆಲವೇ ಗಂಟೆಗಳಲ್ಲಿ ಸ್ವಂದಿಸಿದ ಕಛೇರಿಯ ಸಿಬ್ಬಂದಿಗಳು ಮಗುವನ್ನು ಶಾಲೆಗೆ ಕಳಿಸುವಲ್ಲಿ ಯಶಶ್ವಿಯಾಗಿದ್ದಾರೆ.
ಮಗುವಿನ ತಂದೆ ತಾಯಿಗೆ ಶಿಕ್ಷಣದ ಮಹತ್ವದ ಬಗ್ಗೆ ಅರಿವು ಮೂಡಿಸಿ, ಕೇವಲ 24 ಗಂಟೆಗಳ ಒಳಗೆ ಬಾಲಕನನ್ನು ಶಾಲೆಗೆ ಸೇರ್ಪಡೆ ಮಾಡಿಸಲಾಗಿದೆ. ಬಡತನದ ಕಾರಣಕ್ಕೆ ಶಿಕ್ಷಣದಿಂದ ವಂಚಿತನಾಗಿದ್ದ ಯೋಗೇಶ್ ಈಗ ಇತರ ಮಕ್ಕಳಂತೆ ಶಾಲೆಯಲ್ಲಿ ಕಲಿಯುತ್ತಾ, ನಲಿಯುತ್ತಾ ಉಜ್ವಲ ಭವಿಷ್ಯದೆಡೆಗೆ ಹೆಜ್ಜೆ ಹಾಕುತ್ತಿದ್ದಾನೆ.
ಇನ್ನೂ ಶಾಲೆಗೆ ಹೋಗುವಂತೆ ಸಹಕರಿಸಿದ ಗ್ರಾಮದ ಮಹೇಂದ್ರ ನಮ್ಮ ಚಳ್ಳಕೆರೆ ಟಿವಿಯೊಂದಿಗೆ ಮಾತನಾಡಿದ್ದಾರೆ.
ಇನ್ನೂ ಇದಕ್ಕೆ ಮುಖ್ಯಮಂತ್ರಿ ಟ್ವಿಟರ್ ಖಾತೆಯಲ್ಲಿ ಈ ಪೋಟೋ ವನ್ನು ಹಂಚಿಕೊAಡು, ಬಾಲ್ಯದಲ್ಲಿ ನಾನು ಕೂಡ ಯೋಗೇಶ್ ನಂತೆ ಶಾಲೆಯಿಂದ ವಂಚಿತನಾಗಿದ್ದೆ, ರಾಜಪ್ಪ ಮೇಸ್ಟ್ರು ನನ್ನನ್ನು ನೇರವಾಗಿ 5ನೇ ತರಗತಿಗೆ ದಾಖಲಾತಿ ಮಾಡಿ ಶಿಕ್ಷಣ ಸಿಗುವಂತೆ ಮಾಡಿದ್ದರಿಂದ ಇಂದು ಮುಖ್ಯಮಂತ್ರಿಯಾಗಲು ಸಾಧ್ಯವಾಗಿದೆ. ಮರಳಿ ಶಿಕ್ಷಣದತ್ತ ಮುಖಮಾಡಿರುವ ಈ ಬಾಲಕನ ಭವಿಷ್ಯವೂ ಉಜ್ವಲವಾಗಲಿ ಎಂಬ ಹಾರೈಕೆ ನನ್ನದು. ಇಂತಹ ಸಾರ್ವಜನಿಕ ಹಿತಾಸಕ್ತಿಯ ಸಮಸ್ಯೆಗಳು ನಿಮಗೂ ಕಂಡು ಬಂದರೆ ನಮ್ಮ ಕಚೇರಿಯ ಟ್ವಿಟರ್ ಮಾಡಲು ತಿಳಿಸಿದ್ದಾರೆ.
ಒಟ್ಟಾರೆ ರಾಜ್ಯದಲ್ಲೇ ಶೈಕ್ಷಣಿಕ ವರ್ಷದ ಫಲಿತಾಂಶದಲ್ಲಿ ಮೊದಲ ಸ್ಥಾನ ಪಡೆದ ಚಿತ್ರದುರ್ಗ ಜಿಲ್ಲೆಯಲ್ಲಿ ಇಂತಹ ಶಾಲೆ ಬಿಟ್ಟ ಮಗುವಿನ ಘಟನೆಗೆ ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿರುವುದು ಬೆಳಕಿಗೆ ಬಂದಿದೆ.