ಸರಕಾರದಿಂದ ಸರಳವಾಗಿ ಸೆ.17ಕ್ಕೆ. ಅದ್ದೂರಿಯಾಗಿ ಸೆ.22ಕ್ಕೆ ವಿಶ್ವಕರ್ಮ ಜಯಂತಿ

ಚಳ್ಳಕೆರೆ : ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಶ್ರೀ ಭಗವಾನ್ ವಿಶ್ವಕರ್ಮನ ಜಯಂತೋತ್ಸವ ಕಾರ್ಯಕ್ರಮವನ್ನು ಸೆ.17ರಂದು ತಾಲೂಕ ಆಡಳಿತ ವತಿಯಿಂದ ಆಚರಿಸಲಾಗುತ್ತದೆ ಎಂದು ತಹಶಿಲ್ದಾರ್ ರೇಹಾನ್ ಪಾಷ ಹೇಳಿದ್ದಾರೆ.
ಇವರು ನಗರದ ತಾಲೂಕು ಕಚೇರಿಯಲ್ಲಿ ಆಯೋಜಿಸಿರುವ ತಾಲೂಕ ಆಡಳಿತ ಹಾಗೂ ವಿಶ್ವಕರ್ಮ ಸಮುದಾಯದ ಜನಾಂಗದ ಪೂರ್ವಭಾವಿ ಸಭೆ ಉದ್ದೇಶಿಸಿ ಮಾತನಾಡಿದ ಇವರು ಸರಕಾರದ ನಿಯಮಗಳ ಪ್ರಕಾರ ಸಮುದಾಯದ ಮುಖಂಡರ ಸಮ್ಮುಖದಲ್ಲಿ ಸರಳವಾಗಿ ಆಚರಣೆ ಮಾಡಲಾಗುತ್ತಿದೆ ಎಂದರು.
ವಿಶ್ವಕರ್ಮ ಸಮುದಾಯದ ತಾಲೂಕು ಅಧ್ಯಕ್ಷ ವೆಂಕಟೇಶ್ ಆಚಾರ್ ಮಾತನಾಡಿ, ಶ್ರೀ ಭಗವಾನ್ ವಿಶ್ವಕರ್ಮ ಜಯಂತೋತ್ಸವ ಕಾರ್ಯಕ್ರಮವನ್ನು 17ನೇ ತಾರೀಖಿನಂದು ಆಚರಿಸಬೇಕಾಗಿತ್ತು ‘ ಆದರೆ ಗಣಪತಿ ಹಬ್ಬ ಇರುವುದರಿಂದ 22ನೇ ತಾರೀಕು ಶ್ರೀ ಭಗವಾನ್ ವಿಶ್ವಕರ್ಮ ಜಯಂತೋತ್ಸವದ ಕಾರ್ಯಕ್ರಮವನ್ನು ಸಮುದಾಯದವತಿಯಿಂದ ಅರ್ಥಗರ್ಭಿತವಾಗಿ ಆಚರಣೆ ಮಾಡಲಾಗುತ್ತಿದೆ ಎಂದರು.

ಕಾರ್ಯಕ್ರಮವು ಬೆಳಗಿನ ಜಾವ 9:30ರಿಂದ 11 ಗಂಟೆವರೆಗೆ ಪೂಜಾ ಕಾರ್ಯಕ್ರಮ 11:30 ರಿಂದ ಸಮಾರಂಭ ಕಾರ್ಯಕ್ರಮ 12:30 ರಿಂದ ಶ್ರೀ ಭಗವಾನ್ ವಿಶ್ವಕರ್ಮನ ಪ್ರತಿಮೆಯನ್ನು ಇಟ್ಟು ನಗರದ ಪ್ರಮುಖ ಬೀದಿಗಳಲ್ಲಿ ಜಯಂತೋತ್ಸವ ಕಾರ್ಯಕ್ರಮವನ್ನು ಮಾಡಲಿದ್ದೇವೆ ಎಂದು ತಿಳಿಸಿದರು
ಇನ್ನು ಈ ಸಂದರ್ಭದಲ್ಲಿ ವಿಶ್ವಕರ್ಮ ಪರಿಷತ್ ರಾಜ್ಯಾಧ್ಯಕ್ಷ ಆರ್ ಪ್ರಸನ್ನ ಕುಮಾರ್, ತಾಲೂಕ ವಿಶ್ವಕರ್ಮ ಅಧ್ಯಕ್ಷ ಶಶಿಧರಾಚಾರ್, ಉಪಾಧ್ಯಕ್ಷ ಬ್ರಹ್ಮಚಾರ್, ಕಾರ್ಯದರ್ಶಿ ಮಂಜುನಾಥ ಆಚಾರ್, ಮಹಿಳಾ ಸಂಘದ ಅಧ್ಯಕ್ಷ ಕಮಲಮ್ಮ, ಸರಸ್ವತಮ್ಮ, ರಾಜಕ್ಕ, ಸುಜಾತ ಸುಮಾ, ಸರೋಜಮ್ಮ, ಉಮ್ಮಕ್ಕ ಸೇರಿದಂತೆ ಅನೇಕ ವಿಶ್ವಕರ್ಮ ಬಾಂಧವರು ಹಾಜರಿದ್ದರು

About The Author

Namma Challakere Local News
error: Content is protected !!