ಚಳ್ಳಕೆರೆ : ಗ್ರಾಮೀಣ ಭಾಗದ ವಿದ್ಯಾರ್ಥಿಗಳು ನಮ್ಮ ದೇಶಕ್ಕೆ ವಿಜ್ಞಾನದಲ್ಲಿ ಅಭೂತಪೂರ್ವವಾದ ಕೊಡುಗೆ ನೀಡಲಿ ಹಾಗೂ ಶಿಕ್ಷಣ ಇಲಾಖೆಗೆ ಮೂಲ ಭೂತ ವ್ಯವಸ್ಥೆ ಕಲ್ಪಿಸಲು ಸದಾ ಶ್ರಮಿಸುತ್ತಿದ್ದೆನೆ ಎಂದು ಸ್ಥಳೀಯ ಶಾಸಕ ಟಿ.ರಘುಮೂರ್ತಿ ಹೇಳಿದರು.
ಅವರು ನಗರದ ಕುವೆಂಪು ಪ್ರೌಢಶಾಲಾ ಸಭಾಂಗಣದಲ್ಲಿ ಆಯೋಜಿಸಿದ್ದ ಪ್ರೌಢಶಾಲಾ ವಿದ್ಯಾರ್ಥಿಗಳ ತಾಲ್ಲೂಕು ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು, ಇಂದಿನ ಮಕ್ಕಳ ನಮ್ಮ ವಿಜ್ಞಾನ ರಂಗದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಈಡೀ ದೇಶಕ್ಕೆ ಮಾದರಿಯಾಗಬೇಕು, ಇನ್ನೂ ಯುವ ವಿಜ್ಞಾನಿಗಳು ನಮ್ಮ ಚಳ್ಳಕೆರೆ ಕ್ಷೇತ್ರದಲ್ಲಿ ಹೆಚ್ಚಿನದಾಗಿ ಹೊರ ಹೊಮ್ಮಬೇಕು, ರಾಜ್ಯದ 244 ಶೈಕ್ಷಣಿಕ ಕ್ಷೇತ್ರಗಳಲ್ಲಿ ಹಾಗೂ ಶಾಲೆಗಳಲ್ಲಿ ನಮ್ಮ ಚಳ್ಳಕೆರೆ ಮೊದಲ ಸ್ಥಾನ ಪಡೆದಿರುವುದು ನಮ್ಮ ಶಿಕ್ಷಕರ ಶ್ರಮ ಹೆಚ್ಚಿದೆ, ಅದರಂತೆ ಜಿಲ್ಲೆಗೆ ಮೊದಲ ಸ್ಥಾನ ಪಡೆದ ಗುಡಿಬಂಡೆ ಶಿಕ್ಷಕರಿಗೆ ಧನ್ಯವಾದಗಳು ಎಂದು ವಿಜ್ಞಾನ ವಿಭಾಗದಲ್ಲಿ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶಿಕ್ಷಕ ನಾಗಭೂಷಣ್ ರವರನ್ನು ಗೌರವಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ಸುರೇಶ್ ಮಾತನಾಡಿ, ವಿಜ್ಞಾನ ಮೂಲಕ ಮೌಡ್ಯವನ್ನು ತೊಲಗಿಸುವ ಮೂಲಕ ಇಂದಿನ ಮಕ್ಕಳ ನಮ್ಮ ವಿಜ್ಞಾನ ನಗರಲ್ಲಿ ಹೊರ ಹೊಮ್ಮಬೇಕು, ಅದರಂತೆ ಚಂದ್ರಯಾನ ಪಯಾಣ ಬೆಳೆಸಲು ನಮ್ಮ ಚಳ್ಳಕೆರೆ ನೆಲೆ ಮೂಲವಾಗಿದೆ ಆದ್ದರಿಂದ ಇಲ್ಲಿ ಶಿಕ್ಷಣ ಪಡೆದ ಪ್ರತಿಯೊಬ್ಬರು ಕೂಡ ವಿಜ್ಞಾನಿಗಳಾಗಬೇಕು ಎಂದರು.
ಇನ್ನೂ ನಿವೃತ್ತ ಪ್ರಾಂಶುಪಾಲ ಶಿವಲಿಂಗಪ್ಪ ಮಾತನಾಡಿ, ಕಲಿಕೆ ಮುನ್ನಡಿ ಬರೆದ ಚಳ್ಳಕೆರೆ ವಿಜ್ಞಾನ ನಗರಿ ಇಂತಹ ನಗರಿಯಲ್ಲಿ ಬೆಳೆದ ಮಕ್ಕಳಿಗೆ ವೈಜ್ಞಾನಿಕ ಪ್ರಜ್ಞೆ ಹಾಗೂ ವೈಚಾರಿಕ ವಿಚಾರದಲ್ಲಿ ಮುಂದಿನ ಯಶಸ್ವಿನಿ ಕ್ರಾಂತಿ ಪುರುಷರು ನಮ್ಮ ಸ್ಥಳೀಯ ಶಾಸಕ ಟಿ.ರಘುಮೂರ್ತಿ ಅವರು ಶಿಕ್ಷಣಕ್ಕೆ ಅಗತ್ಯವಾದ ಒತ್ತು ನೀಡಿ ಶ್ರಮಿಸುತ್ತಿದ್ದಾರೆ ಎಂದರು.
ಈದೇ ಸಂಧರ್ಭದಲ್ಲಿ ನಗರಸಭೆಸ್ಥಾಮಿ ಸಮಿತಿ ಅಧ್ಯಕ್ಷ ಎಂ.ಜೆ.ರಾಘವೇAದ್ರ, ಕ್ಷೇತ್ರ ಶಿಕ್ಷಾಧಿಕಾರಿ ಕೆಎಸ್.ಸುರೇಶ್, ನಿವೃತ್ತ ಪ್ರಾಂಶುಪಾಲರಾದ ಶಿವಲಿಂಗಪ್ಪ, ನಗರಸಭೆ ಪೌರಾಯುಕ್ತ ಸಿ.ಚಂದ್ರಪ್ಪ, ಶ್ರೀನಿವಾಸ್, ರಾಜ್ ಕುಮಾರ್, ಸಮಸನ್ವ ಅಧಿಕಾರಿ ತಿಪ್ಪೇಸ್ವಾಮಿ, ಬಸವರಾಜ, ರಂಗನಾಥ, ಮಂಜುನಾಥ್, ಶಿವರಾಜ್, ಶಿವಕುಮಾರ್, 101 ಪ್ರೌಢಶಾಲಾ ಶಿಕ್ಷಕರು, ಹಾಗು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.