ಚಳ್ಳಕೆರೆ : ಹಾಡಹಗಲೆ ಕಣ್ಣಿಗೆ ಖಾರದ ಪುಡಿ ಎರಚಿ ಬಂಗಾರದ ಸರ ಕದ್ದೊಯ್ದುದ ಪ್ರಕರಣ ಚಳ್ಳಕೆರೆ ನಗರದ ನೆಹರು ವೃತ್ತದಲ್ಲಿ ನಡೆದಿದೆ.
ಹೌದು ಚಳ್ಳಕೆರೆ ನಗರ ಪ್ರದೇಶ ಈಡೀ ಜಿಲ್ಲೆಯಲ್ಲಿ ದೊಡ್ಡದಾದ ಬಹು ವಿಸ್ತೀರ್ಣ ಹೊಂದಿದ ಪ್ರದೇಶವಾಗಿ ಮಾರ್ಪಟ್ಟಿದೆ ಆದರೆ ಇಲ್ಲಿಗೆ ಸುತ್ತಲಿನ ಸಾರ್ವಜನಿಕರು ದಿನವೊಂದಕ್ಕೆ ಸಾವಿರಾರು ಸಂಖ್ಯೆಯಲ್ಲಿ ಬಂದುಹೊಗುತ್ತಾರೆ.
ಆದರೆ ಇಲ್ಲಿನ ಪೊಲೀಸ್ ಸಿಬ್ಬಂದಿ ಸಂಖ್ಯೆ ಮಾತ್ರ ಬೆರಳಣೆಕೆಷ್ಟು, ಆದರೆ ಕಳ್ಳರನ್ನು ಮಟ್ಟ ಹಾಕುವಲ್ಲಿ ಪ್ರತಿನಿತ್ಯ ಗಸ್ತು ಹೊಡೆಯುವ ಪೊಲೀಸ್ ರ ಸಹಾಸ ನಿಜಕ್ಕೂ ಮೆಚ್ಚುವಂತಹದು.
ಆದರೆ ಕಳೆದ ದಿನಗಳಲ್ಲಿ ನಗರದ ಹೃದಯ ಭಾಗದಲ್ಲಿ ನಡೆದ ಘಟನೆ ಪೊಲೀಸ್ ರಿಗೆ ತಲೆನೊವು ತಂದಿತ್ತು, ನಗರದ ಹೃದಯ ಭಾಗದಲ್ಲಿ ಇಂತಹ ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಕಳ್ಳರ ಎಡೆಮುರೆ ಕಟ್ಟಿದ ಪೊಲೀಸರು ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಜಿಲ್ಲಾ ವರಿಷ್ಠಾಧಿಕಾರಿಗಳ ಮಾರ್ಗದರ್ಶನದಲ್ಲಿ ಡಿವೈಎಸ್ ಪಿ ಬಿ.ಟಿ.ರಾಜಣ್ಣ, ಹಾಗೂ ಇನ್ಸ್ಪೆಕ್ಟರ್ ಆರ್ ಎಪ್.ದೇಸಾಯಿ ರವರು ಸರಗಳ್ಳರ ಬಂಧಿಸಿ ಅವರಿಂದ 45 ಗ್ರಾಂ ತೂಕದ ಬಂಗಾರದ ಕೊರಳು ಸರ ಮತ್ತು
ಕೃತ್ಯಕ್ಕೆ ಬಳಸಿದ 2 ಮೋಟಾರ್ ಸೈಕಲ್‌ಗಳು ಸೇರಿ ಒಟ್ಟು 7 ಲಕ್ಷ ಮೌಲ್ಯದ ಮಾಲು ವಶಪಡಿಸಿಕೊಂಡಿದ್ದಾರೆ.
ಚಳ್ಳಕೆರೆ ಟೌನ್ ಪಾವಗಡ ರಸ್ತೆಯಲ್ಲಿರುವ ದವನಂ ಟೆಕ್ಸ್
ಟೈಲ್ಸ್ ಅಂಗಡಿಗೆ 3 ಜನ ಅಪರಿಚಿತ ವ್ಯಕ್ತಿಗಳು ಟೀ ಶರ್ಟ್ ತೋರಿಸುವಂತೆ ಕೇಳಿದ್ದು
ಅಂಗಡಿಯ ಮಾಲೀಕರಾದ ಡಿ.ಸಿ.ಗೋವಿಂದರಾಜ್ ರವರು ಟೀ ಶರ್ಟ್ ತೋರಿಸುತ್ತಿರುವಾಗ 3 ಜನರಲ್ಲಿ
ಒಬ್ಬ ವ್ಯಕ್ತಿ ತಾನು ತಂದಿದ್ದ ಖಾರದ ಪುಡಿಯನ್ನು ಗೋವಿಂದರಾಜ್ ರವರ ಕಣ್ಣುಗಳಿಗೆ ಹಾಕಿ ಸರ ಕದಯ್ದೋದಿದ್ದಾರೆ.
ಈ ಪ್ರಕರಣದ ಕಾರ್ಯಚರಣೆಯಲ್ಲಿ ತೊಡಗಿದ ಇನ್ಸ್ಪೆಕ್ಟರ್ ಆರ್.ಎಪ್.ದೇಸಾಯಿ,
ಪಿ.ಎಸ್.ಐ ಶಿವರಾಜ್ ಹಾಗೂ ಸಿಬ್ಬಂದಿಗಳಾದ ಹಾಲೇಶ, ಸತೀಶ್, ಶ್ರೀಧರ ವಸಂತ ಧರಣ್ಣವರ್,
ಶಿವರಾಜ್, ರಮೇಶ್ ಬಾರ್ಕಿ ರವರನ್ನು ಒಳಗೊಂಡ ತಂಡವನ್ನು ಮೇಲಾಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿ ನಗದು ಬಹುಮಾನ ಘೋಷಣೆ ಮಾಡಿದ್ದಾರೆ.