ಮಹಿಳೆಯರ ಸಬಲೀಕರಣಕ್ಕಾಗಿ ಕಾಂಗ್ರೆಸ್ ಸರ್ಕಾರ ಬದ್ಧ : ನೂತನ ಗ್ರಾಪಂ.ಅಧ್ಯಕ್ಷ ಓಬಣ್ಣ ಚಳ್ಳಕೆರೆ : ಕರ್ನಾಟಕದ ಶಕ್ತಿ ಮಹಿಳೆಯರು, ಈ ಮಹಿಳೆಯರ ಸಬಲೀಕರಣಕ್ಕಾಗಿ ಕಾಂಗ್ರೆಸ್ ಸರ್ಕಾರ 5ಗ್ಯಾರೆಂಟಿ ಪೈಕಿ 4 ಯೋಜನೆಗಳನ್ನು ಮೀಸಲಿಟ್ಟಿದೆ ಎಂದು ನೂತನ ಗ್ರಾಪಂ.ಅಧ್ಯಕ್ಷ ಓಬಣ್ಣ ಹೇಳಿದ್ದಾರೆ. ಅವರು ತಾಲೂಕಿನ ಗೌರಸಮುದ್ರ ಗ್ರಾಮ ಪಂಚಾಯಿತಿಯಲ್ಲಿ ಆಯೋಜಿಸಿದ್ದ ಗೃಹಲಕ್ಷ್ಮಿ ಯೋಜನೆಗೆ ನೇರ ಪ್ರಸಾರದ ಮೂಲಕ ಚಾಲನೆಗೆ ಕೈ ಜೋಡಿಸುವ ಮೂಲಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಕ್ಷಾ ಬಂಧನ ದಿನದಂದು ರಾಜ್ಯ ಸರಕಾರ ಮಹಿಳೆಯರಿಗೆ ಕೊಟ್ಟ ಭರವಸೆಯನ್ನು ಈಡೇರಿಸಿದೆ, ಇನ್ನೂ ಶಕ್ತಿ ಯೋಜನೆ ಎಂಬ ಹೆಸರಿನಲ್ಲಿ ಜಾರಿಗೆ ಬಂದ ಉಚಿತ ಪ್ರಯಾಣ ಇಂದು ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಲು ಅವಕಾಶ ಮಾಡಿಕೊಟ್ಟಿದ್ದೆ ಇಂದು ಅನ್ನಭಾಗ್ಯ ಯೋಜನೆಯಡಿ 10ಕೆಜಿ ಅಕ್ಕಿ ಕೊಡುವ ಯೋಜನೆಯನ್ನೂ ಜಾರಿಗೆ ಬಂದಿದೆ, ಇನ್ನು ಗೃಹ ಜ್ಯೋತಿ ಯೋಜನೆಯಡಿ ಪ್ರತಿ ಮನೆಗೆ 200 ಯೂನಿಟ್ ವಿದ್ಯುತ್ ಉಚಿತ ಈಗೇ 5 ಯೋಜನೆ ಪೈಕಿ 4 ಯೋಜನೆ ಮಹಿಳಾ ಸಬಲೀಕರಣ ಯೋಜನೆಯಾಗಿದೆ ಎಂದು ಹೇಳಿದ್ದಾರೆ.ಈ ಸಂಧರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಶಶಿಕುಮಾರ್, ತಿಮ್ಮಾರೆಡ್ಡಿ, ಜಯಮ್ಮ, ಮಲ್ಲಯ್ಯ, ಗುರುಸ್ವಾಮಿ, ಸಂಜೆಯ್ ಗೌಡ, ತುಳಸಿಯಮ್ಮ, ಪಿಡಿಓ.ಹನುಮಂತರಾಜು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.

About The Author

Namma Challakere Local News
error: Content is protected !!