ನಗರಸಭೆ ವತಿಯಿಂದ ಜನ ಜಾಗೃತಿ ಜಾತ,

ಕಲುಷಿತ ನೀರು ಮತ್ತು ಆಹಾರ ಸೇವನೆಯಿಂದ ಹರಡುವ ರೋಗಗಳಾದ ಕರುಳು ಬೇನೆ ಕಾಲರಾ ಕಾಮಾಲೆ ರೋಗ ಟೈಪಡ್ ರೋಗಗಳಂತಹ ವೈರಾಣುವಿನಿಂದ ಮನುಷ್ಯನ ದೇಹ ಸೇರಿ ಕಾಯಿಲೆಗಳು ಉಲ್ಬಣಗಳುತ್ತವೆ ಎಂದು ನಗರಸಭೆ ಪೌರಾಯುಕ್ತ ಚಂದ್ರಪ್ಪ ಹೇಳಿದರು,

ಇವರು ಶಾಂತಿ ನಗರದಿಂದ ಐದು ವಾರ್ಡುಗಳಿಗೆ ತಾಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ನಗರಸಭೆ ಸಹಯೋಗದೊಂದಿಗೆ ಸಾರ್ವಜನಿಕರಿಗೆ ಜನಜಾಗೃತಿ ಮೂಡಿಸಿ ಮಾತನಾಡಿದ ಇವರು,

ಸಾಮಾನ್ಯವಾಗಿ ಬೇಸಿಗೆ ಕಾಲದಲ್ಲಿ ಹೆಚ್ಚಾಗಿ ಕಂಡುಬರುವ ರೋಗಗಳು ಸಾರ್ವಜನಿಕರ ಅನಾರೋಗ್ಯದ ಜೊತೆಗೆ ಮಾನಸಿಕ ನೆಮ್ಮದಿಗೆ ಭಂಗ ತರುತ್ತದೆ,

ಅಲ್ಲದೆ ಸಾರ್ವಜನಿಕರು ಕಲುಷಿತ ನೀರು ಕುಡಿಯುವುದರಿಂದ ಕಣ್ಣಿಗೆ ಕಾಣದ ಸೂಕ್ಷ್ಮಾಣುಗಳು ಮತ್ತು ಆಹಾರ ಸೇವನೆಯ ಮೂಲಕ ಆರೋಗ್ಯವಂತ ಶರೀರಕ್ಕೆ ಸೇರಿ ಕರುಳುಬೇನೆ ಕಾಲರಾ ಬಲೇರಿಯ ಕಾಮಾಲೆ ರೋಗ ಟೈಪಡಿನಂತಹ ಮರಣಾಂತಿಕ ರೋಗಗಳು ಉಲ್ಬಣಗೊಂಡು,

ಆರೋಗ್ಯವನ್ನು ಹದಗೆಡಿಸುತ್ತದೆ ಇದರಿಂದಾಗಿ ಸಾರ್ವಜನಿಕರು ತಮ್ಮ ಮನೆಯಲ್ಲಿರುವ ನೀರು ಶೇಖರಣೆಯ ತೊಟ್ಟೆ ಗಳನ್ನು ಸ್ವಚ್ಛಗೊಳಿಸಿ ಕಾಯಿಲೆಯಿಂದ ದೂರವಿರಿ ,

ಅಲ್ಲದೆ ಸಾರ್ವಜನಿಕರು ನೀರು ಕುಡಿಯುವಾಗ ಕಾಯಿಸಿ ಆರಿಸಿದ ನೀರು ಕುಡಿರಿ ರಸ್ತೆ ಬದಿಯಲ್ಲಿ ತೆರೆದಿಟ್ಟ ಪದಾರ್ಥಗಳನ್ನು ಸ್ವೀಕಾರ ಮಾಡಬೇಡಿ ಶುದ್ಧ ಮತ್ತು ಬಿಸಿಯಾದ ಆಹಾರ ಸೇವನೆ ಉತ್ತಮ ,

ಅಲ್ಲದೆ ನಿಮ್ಮ ಮನೆಯ ಸುತ್ತಮುತ್ತ ಸ್ವಚ್ಛತೆಯನ್ನು ಕಾಪಾಡಿಕೊಳ್ಳಿ ಕಾಯಿಲೆಯಿಂದ ದೂರವಿರಿ ಎಂದು ಸಾರ್ವಜನಿಕರಿಗೆ ಜನಜಾಗೃತಿ ಮೂಡಿಸಿದರು,

ಇನ್ನು ಜಾತಾದ ವೇಳೆ ಎಂಟನೇ ವಾರ್ಡಿನ ಸದಸ್ಯ ಮಂಜುಳಾ ಪ್ರಹ್ಲಾದ್ ನಗರ ಸಭೆ ಆರೋಗ್ಯ ನಿರೀಕ್ಷಕ ಮಹಾಲಿಂಗಪ್ಪ ಗೀತಾ ಗಣೇಶ್ ಮಂಜುನಾಥ್ ತಿಪ್ಪೇಸ್ವಾಮಿ ಏಳನೇ ವಾರ್ಡಿನ ಕೌನ್ಸಿಲರ್ ವೆಂಕಟೇಶ್ ಸೇರಿದಂತೆ ಅನೇಕ ನಗರಸಭೆ ಸದಸ್ಯರು ಹಾಜರಿದ್ದರು ,

About The Author

Namma Challakere Local News
error: Content is protected !!