ನಾಯಕನಹಟ್ಟಿ ಹೋಬಳಿಯನ್ನು ಬರಬೀಡಿತ ಪ್ರದೇಶವೆಂದು ಘೋಷಿಸುವಂತೆ ರಾಷ್ಟ್ರೀಯ ಕಿಸಾನ್ ಸಂಘ ಪಟ್ಟಣದ ನಾಡಕಚೇರಿ ಉಪ ತಹಶೀಲ್ದಾರ್ ಅವರಿಗೆ ಮನವಿ ನೀಡಿ ಒತ್ತಾಯಿಸಿದ್ದಾರೆ.
ನಾಯಕನಹಟ್ಟಿ :;: ಹೋಬಳಿಯ ನಾಯಕನಹಟ್ಟಿ ಉಪ ಉಪ ತಹಶೀಲ್ದಾರ್ ಅವರಿಗೆ ಕಿಸಾನ್ ಸಂಘದ ವತಿಯಿಂದ ಪ್ರಸಕ್ತ ವರ್ಷದ ಭೀಕರ ಬರಗಾಲದ ಪರಿಸ್ಥಿತಿಯನ್ನು ಹಾಗೂ ಪ್ರಸ್ತುತ ಪರಿಸ್ಥಿತಿಯಲ್ಲಿ ಬ್ಯಾಂಕಿನವರು ಸಾಲ ವಸೂಲಾತಿಗೆ ಹೋಗದಿರುವಂತೆ ಹಾಗೂ ಸಾಲ ಮರುಪಾವತಿಗೆ ಸಮಯಾವಕಾಶ ನೀಡುವಂತೆ ಪ್ರತಿ ಗ್ರಾಮ ಪಂಚಾಯಿತಿಗಳಿಗೆ ಒಂದರಂತೆ ಗೋಶಾಲೆಗಳನ್ನು ತೆರೆಯುವ ಬಗ್ಗೆ ರೈತರ ನೀರಿಲ್ಲದೆ ಪಡುತ್ತಿರುವ ಸಂಕಷ್ಟದ ಬಗ್ಗೆ ಇನ್ನೂ ಕೂಡ ಬರಗಾಲ ಎಂದು ಘೋಷಣೆ ಮಾಡದಿರುವ ಬಗ್ಗೆ ಸರ್ಕಾರದ ಸರ್ಕಾರಕ್ಕೆ ಎಚ್ಚರಿಕೆಯನ್ನು ಕೊಡುತ್ತಾ ಭೀಕರ ಬರಗಾಲ ಪರಿಸ್ಥಿತಿಯನ್ನು ಸಮಗ್ರವಾಗಿ ಶೀಘ್ರದಲ್ಲಿಯೇ ರೈತರಿಗೆ ಹಾಗೂ ಜಾನುವಾರುಗಳಿಗೆ ಮೇವಿನ ಕೊರತೆ ಎದುರಿಸುತ್ತಿದ್ದು ರೈತರು ಸಾವಿರಾರು ಕೋಟಿಗಳನ್ನು ಫಸಲ್ ಭೀಮಾ ಯೋಜನೆ ಅಡಿಯಲ್ಲಿ ಹಣವನ್ನು ಹೂಡಿದ್ದು ಮಳೆ ಇಲ್ಲದ ಪರಿಸ್ಥಿತಿಯಲ್ಲಿ ಬೆಳೆ ವಿಮೆಯನ್ನು ಸಮಯಕ್ಕೆ ತಕ್ಕಂತೆ ರೈತರಿಗೆ ಪರಿಹಾರವನ್ನು ಒದಗಿಸಬೇಕೆಂದು ಉಪತಾಶಿಲ್ದಾರ್ ರವರಲ್ಲಿ ಚಳ್ಳಕೆರೆ ತಾಲೂಕು ರಾಷ್ಟ್ರೀಯ ಕಿಸಾನ್ ಸಂಘದ ಅಧ್ಯಕ್ಷರಾದ ಎಂ ಪಾಲಯ್ಯ ರವರು ಹಾಗೂ ನಾಯಕನಹಟ್ಟಿ ಹೋಬಳಿಯ ಅಧ್ಯಕ್ಷರಾದ ಬಿ ಪ್ರಕಾಶ್ ರವರು ಹಾಗೂ
ನಾಯಕನಹಟ್ಟಿ ಹೋಬಳಿಯ ಯುವ ಘಟಕದ ಅಧ್ಯಕ್ಷರಾದ ಸಿ ಪಿ ಮಹೇಶ್ ಕುಮಾರ್ ರವರು ಸರ್ಕಾರವನ್ನು ಆಗ್ರಹಿಸಿದರು ಈ ಮನವಿ ಮನವಿ ಸಲ್ಲಿಸುವುದರಲ್ಲಿ ಭೀಮಗೊಂಡನಹಳ್ಳಿಯ ದೇವರ ಹೆಚ್ಚಿನ ಕಿಲಾರಿಗಳು ಚೌಳಕೆರೆಯ ಎಲ್ ಬಸವರಾಜ್ ಮಲ್ಲಿಕಾರ್ಜುನ್ ರವರು ಗ್ರಾಮ ಪಂಚಾಯತಿ ಸದಸ್ಯರು ಉಪ್ಪಾರಟ್ಟಿ ಮುಂತಾದ ಪ್ರಮುಖರು ಉಪಸಿತರಿದ್ದರು