ಚಿತ್ರದುರ್ಗ : ಇಂದಿನ ಅಧುನಿಕ ಕಾಲಘಟ್ಟದ ಶಾಲಾ ಮಕ್ಕಳಿಗೆ ಜಪನದ ಸಾಹಿತ್ಯ, ಕಲೆಗಳ ಕುರಿತು ಸರ್ಕಾರ ಪಠ್ಯದಲ್ಲಿ ಸೇರ್ಪಡೆಗೊಳಿಸಿ ಮಾರ್ಗದರ್ಶಿಸಿದರೆ ಜನಪದ ಸಾಹಿತ್ಯ ಕಲೆಗಳು ಉಳಿಯುತ್ತವೆ ಎಂದು ಚಿತ್ರದುರ್ಗ ತಾಲೂಕು ಜನಪದ ಕಲಾವಿದ ಆಯಿತೋಳು ಪಾಂಡುರAಗಪ್ಪ ಹೇಳಿದರು
ಚಿತ್ರದುರ್ಗ ತಾಲೂಕು ಕಸಬಾ ಹೋಬಳಿ ವ್ಯಾಪ್ತಿಯ ಜೋಡಿಚಿಕ್ಕೇನಹಳ್ಳಿ ಗೊಲ್ಲರಹಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಶಾಲಾ ಶಿಕ್ಷಣ ಇಲಾಖೆ, ಶಾಲಾ ಸಮಿತಿ ಹಾಗೂ ಸಹಿಪ್ರಾ ಶಾಲೆಯ ವತಿಯಿಂದ ಶಾಲಾ ಮಕ್ಕಳಿಗೆ ಆಯೋಜಿಸಿದ್ದ ಜನಪದ ಗೀತ ಗಾಯನ ಕಾರ್ಯಕ್ರಮದಲ್ಲಿ ಜನಪದ ವಾದ್ಯಗಳ ಮೂಲಕ ದೇಶಭಕ್ತಿಗೀತೆ, ಜನಪದಗೀತೆ ಮತ್ತು ಶಿಶುನಾಳ ಶರೀಫರ ತತ್ವಪದಗಳನ್ನು ಹಾಡಿ ಮಾತನಾಡಿದರು
ಸಂದರ್ಭದಲ್ಲಿ ಶಿಕ್ಷಕರಾದ ಓ ಚಿತ್ತಯ್ಯ, ಅತಿಥಿ ಶಿಕ್ಷಕಿ ಮೇಘಾ, ಗ್ರಾಮದ ಶಿಕ್ಷಕ ರಾಜು, ಅಡುಗೆ ಸಿಬ್ಬಂದಿ ಸರೋಜಾ, ತಿಪ್ಪಮ್ಮ, ಶಾಲಾ ಮುಖ್ಯಮಂತ್ರಿ ತ್ರಿವೇಣಿ, ಸಿದ್ದೇಶ, ಚಂದನಾ, ಸ್ಪೂರ್ತಿ, ಸ್ವಾಮಿ, ದೀಕ್ಷಾ, ಕಿರಣ್, ಸಿದ್ದುಯಾದವ್, ಶಿಲ್ಪಾ, ಸುಚಿತ್ರಾ ವಿದ್ಯಾರ್ಥಿಗಳು ಇದ್ದರು