ನಗರದ ಎಸ್.ಜೆ.ಎಂ.ತಾAತ್ರಿಕ ಮಹಾವಿದ್ಯಾಲಯದಲ್ಲಿ ಐ.ಐ.ಸಿ & ಐ.ಕ್ಯೂ.ಎ.ಸಿ ಹಾಗೂ ಗಣಕ ಯಂತ್ರ ವಿಭಾಗದ ಸಹಯೋಗದಲ್ಲಿ ಎರಡನೇ ವರ್ಷದ ವಿದ್ಯಾರ್ಥಿಗಳಿಗೆ “ಒಥಿ-Sಣoಡಿಥಿ ಒoಣivಚಿಣioಟಿಚಿಟ Sessioಟಿ bಥಿ Suಛಿಛಿessಜಿuಟ ಇಟಿಣಡಿeಠಿಡಿeಟಿeuಡಿ/Sಣಚಿಡಿಣ-uಠಿ ಜಿouಟಿಜeಡಿ“ ಎನ್ನುವ ಒಂದು ದಿನದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ನೊರ ಅಗ್ರಿಟೆಕ್ನ ಸಂಸ್ಥಾಪಕರು ಮತ್ತು ಸಿ.ಇ,ಓ ಆದ ಶ್ರೀಯುತ ಕುಮಾರ ಎಂ.ಡಿ ಯವರು ಭಾಗವಹಿಸಿದ್ದರು. ಸವಾಯವ ಕೃಷಿ, ಸಮತೋಲನ ಆಹಾರ ಮತ್ತು ಉತ್ತಮ ಉದ್ಯಮಿಯಾಗುವ ವಿಷಯವನ್ನು ವಿದ್ಯಾರ್ಥಿಗಳೋಂದಿಗೆ ಹಂಚಿಕೊAಡರು. ಸವಾಯವ ಕೃಷಿ, ಸಮತೋಲನ ಆಹಾರಕ್ಕೆ ಅಂತರಾಷ್ಟಿçಯ ಮಟ್ಟದಲ್ಲಿ ಉತ್ತಮ ಬೇಡಿಕೆಯಿದ್ದು, ಈ ದಿಸೆಯಲ್ಲಿ ನಮ್ಮ ರೈತರನ್ನು ಉತ್ತೇಜಿಸುವುದು ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು. ಉದ್ಯಮಿಯಾಗಿ ಯಶಸ್ಸು ಹೊಂದಿದ ತಮ್ಮ ಜೀವನದ ಯೋಶೋಗಾಥೆಯನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊAಡರು.
ಕಾರ್ಯಕ್ರಮದ ಸಂಯೋಜಕರಾದ ಪ್ರೋ.ಬಿ.ಇ.ರಮೇಶ್ ರವರು ಮಾತನಾಡಿ, ವಿದ್ಯಾರ್ಥಿಗಳು ಹೊಸದಾಗಿ ಉದ್ಯಮಕ್ರಿಯಶಿಲತೆಯನ್ನು ಹೇಗೆ ಅಳವಡಿಸಿಕೊಳ್ಳಬೇಕು, ಇದ್ದಕ್ಕೆ ಬೇಕಾಗುವ ಆರ್ಥಿಕ ಸಂಪನ್ಮೂಲ, ಕಚ್ಚಾವಸ್ತು ಸಂಗ್ರಹ ಬಗ್ಗೆ ವಿವರವಾದ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರಾಂಶುಪಾಲರಾದ ಡಾ.ಪಿ.ಬಿ.ಭರತ್ ರವರು ವಿದ್ಯಾರ್ಥಿಗಳಿಗೆ ಶುಭ ಆರೈಸಿದರು.
ಕಾರ್ಯಕ್ರಮದÀಲ್ಲಿ ಇಲಾಖೆ ಪ್ರಭಾರೆ ಮುಖ್ಯಸ್ಥರಾದ ಡಾ.ಅರವಿಂದ್.ಟಿ.ವಿ ಮತ್ತು ಐ.ಐ.ಸಿ ಮುಖ್ಯ ಸಂಚಾಲಕರಾದ ಡಾ.ಕೃಷ್ಣರೆಡ್ಡಿ.ಕೆ.ಅರ್, ಸಂಯೋಜಕರಾದ ಪ್ರೋ. ಕುಮಾರಸ್ವಾಮಿ ಹೆಚ್. ಮತ್ತು ಇಲಾಖೆಯ ಭೋದಕ, ಭೋದಕೇತರ ಸಿಬ್ಬಂದಿ ಉಪಸ್ಥಿರಿದ್ದರು.
ವಿದ್ಯಾರ್ಥಿಗಳಾದ ದಿಪ್ತಿ ಪ್ರಾರ್ಥಿಸಿದರೆ, ನಾಗಸಾರಿಕ ಕಾರ್ಯಕ್ರಮದಲ್ಲಿ ಸ್ವಾಗತಿಸಿ, ನಿರ್ವಹಿಸಿದರು ಹಾಗೂ ನಾಗಶ್ರೀ ವಂದಿಸಿದರು.