ಚಿತ್ರದುರ್ಗ, ಆ. 16 – ನಗರದ ಬಸವಕೇಂದ್ರ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ವತಿಯಿಂದ ಪ್ರತಿ ವರ್ಷದಂತೆ ಶ್ರಾವಣಮಾಸದ ವಿಶೇಷ ಚಿಂತನ ನಿತ್ಯಕಲ್ಯಾಣ ಕಾರ್ಯಕ್ರಮವನ್ನು ದಿ. 17-08-2023ರಿಂದ ದಿ. 15-09-2023ರವರೆಗೆ ಚಿತ್ರದುರ್ಗ ನಗರ ಸೇರಿದಂತೆ ದಾವಣಗೆರೆ, ಚನ್ನಗಿರಿ, ಮಾವಿನಹಳ್ಳಿ, ಬೆಂಗಳೂರು, ಮೈಸೂರು, ಕೊಡಗಿನ ಬೇಳೂರು ಮಠ, ವಿಜಯಮಹಾಂತೇಶ್ವರ ಮಠ, ಇಳಕಲ್ ಮೊದಲಾದ ಕಡೆಗಳಲ್ಲಿ ವಿವಿಧ ಚಿಂತನೆಗಳೊAದಿಗೆ ವಿಶೇಷ ಉಪನ್ಯಾಸಕರನ್ನು ಆಹ್ವಾನಿಸಿ ಆಯೋಜಿಸಲಾಗಿದೆ.
ದಿನಾಂಕ : 17-08-23ರ ಬೆಳಗ್ಗೆ 11 ಗಂಟೆಗೆ ವಿದ್ಯಾನಗರದಲ್ಲಿರುವ ಶಾಸಕರ ಕಾರ್ಯಾಲಯದಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ. ಶ್ರೀ ಬಸವಪ್ರಭು ಸ್ವಾಮಿಗಳು ನೇತೃತ್ವ ವಹಿಸುವರು. ಶ್ರೀ ಬಸವನಾಗೀದೇವ ಸ್ವಾಮಿಗಳು ಸಮ್ಮುಖ ವಹಿಸುವರು. ವಿಶೇಷ ಆಹ್ವಾನಿತರಾಗಿ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಭಾಗವಹಿಸಲಿದ್ದಾರೆ. ಪರಮಾರ್ಥ ದೃಷ್ಟಿ ವಿಷಯ ಕುರಿತು ಹಿರಿಯ ಪತ್ರಕರ್ತ ಜಿ.ಎಸ್. ಉಜ್ಜಿನಪ್ಪ ಮಾತನಾಡುವರು ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.