ಚಳ್ಳಕೆರೆ : ಸ್ವಾತಂತ್ರö್ಯಕ್ಕಾಗಿ ಹೋರಾಡಿ ಪ್ರಾಣವನ್ನು ತೆತ್ತ ಅದೇಷ್ಠೋ ವೀರ ಯೋಧರು ನಮ್ಮ ಕಣ್ಣಾ ಮುಂದೆ ಇದ್ದಾರೆ ಅಂತವರಿಗೆ ನಾವು ತೋರುವ ಗೌರವೊಂದೆ ಅವರ ಆತ್ಮಕ್ಕೆ ಶಾಂತಿ ಎಂದು ಸ್ಥಳೀಯ ಶಾಸಕ ಟಿ.ರಘುಮೂರ್ತಿ ಹೇಳಿದರು.
ಚಳ್ಳಕೆರೆ ನಗರದ ಹೆಚ್.ಪಿ.ಪಿ.ಸಿ. ಕಾಲೇಜ್‌ನ ಬಯಲು ರಂಗಮAದಿರದಲ್ಲಿ ನಡೆದ ಆಯೋಜಿಸಿದ್ದ ನಗರಸಭೆ ಕಾರ್ಯಾಲಯ ಹಾಗೂ ಯುವ ಜನ ಕ್ರೀಡಾ ಇಲಾಖೆ ಇವರ ಸಹಯೋಗದೊಂದಿಗೆ 77ನೇ ಸ್ವಾತಂತ್ರ‍್ಯ ದಿನಾಚರಣೆ ಅಂಗವಾಗಿ ನನ್ನ ಮಣ್ಣು ನನ್ನ ದೇಶ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಸ್ವಾತಂತ್ರö್ಯಕ್ಕಾಗಿ ಹೋರಾಡಿ ಹುತ್ಮಾತಮರಾದ ಹಾಗೂ ಹೋರಾಟದಲ್ಲಿ ಭಾಗವಹಿಸಿದ ನಾಯಕರನ್ನು ನೆನೆಯುವ ಸಲುವಾಗಿ ಆವರಣದಲ್ಲಿ ಹುತ್ಮಾತರ ಸ್ಮಾರಕವನ್ನು ಪ್ರತಿಷ್ಠಾಪಿಸಿದೆ ಇಂದು ವೀರ ಸೇನಾನಿಗಳ ತ್ಯಾಗ ಬಲಿದಾನಗಳ ಮೂಲಕ ನನ್ನ ಮಣ್ಣು ನನ್ನ ದೇಶ ಕಾರ್ಯಕ್ರಮದಲ್ಲಿ ಅಮೃತ ಮಟ್ಟಿ ಮೂಲಕ ದೇಶ ಭಕ್ತಿ ಮೆರೆಯೋಣ, ಮೇರಿ ಮಾಟಿ ಮೇರಿ ದೇಶ ಎಂಬ ಅರ್ಥದಲ್ಲಿ ಉದ್ಘಾಟನೆಯಾದ ಈ ಕಾರ್ಯಕ್ರಮ ಕಳೆದ ಆ.9 ರಿಂದ 30 ರವರೆಗೆ ನಡೆಯುವ ಈ ಕಾರ್ಯಕ್ರಮವಾಗಿದೆ.
ಅದರಂತೆ ಸ್ವಾತಂತ್ರ‍್ಯಕ್ಕಾಗಿ ಚಳ್ಳಕೆರೆ ಚಿತುದುರ್ಗ ತಾಲೂಕಿನ ತುರುವನೂರು ಗ್ರಾಮದಲ್ಲಿ ಈಚಲು ಮರವನ್ನು ಕಡಿಯುವುದರ ಮೂಲಕ ಪ್ರತಿಭಟನೆ ಮಾಡಿ ಜೈಲುವಾಸ ಮಾಡಿದ ಅಂದಿನ ದಿನವನ್ನು ಈ ದಿನ ನೆನೆಯುವಂತಾಗಿದೆ ಎಂದರು.

ಇನ್ನೂ ಪ್ರಾಶುಂಪಾಲರಾದ ರಂಗಪ್ಪ ಮಾತನಾಡಿದರು, ನಗರಸಭೆ ಸದಸ್ಯರಾದ ಸುಮಕ್ಕ, ಸಾವಿತ್ರಮ್ಮ, ಸುಮಭರಮಯ್ಯ, ಕವಿತಾ ಬೋರಯ್ಯ, ಆಯ್ಕಲ್ ವಿರೂಪಾಕ್ಷ, ಮಾಜಿ ಸೈನಿಕರಾದ ಗೋವಿಂದರೆಡ್ಡಿ, ತಿಮ್ಮಣ್ಣ, ಕರಿಯಣ್ಣ, ಮಧುಸೂಧನ್, ಮಧು ಬಾಲೇನಹಳ್ಳಿ, ಮಂಜುನಾಥ್‌ರೆಡ್ಡಿ, ಮುಕ್ತರಹಾಮದ್, ತಿರುಮಲೇಶ್, ಬೋರಾಜ್, ವಿಶ್ವನಾಥ್, ಅಂಗನವಾಡಿ ಕಾರ್ಯಕರ್ತರು, ನಗರಸಭೆ ಸಿಬ್ಬಂದಿ ಇತರರು ಪಾಲ್ಗೊಂಡಿದ್ದರು.

Namma Challakere Local News
error: Content is protected !!