ಚಿತ್ರದುರ್ಗ ತಾಲ್ಲೂಕಿನ ತುರುವನೂರು ಹೋಬಳಿಯ ಬೆಳಗಟ್ಟ ಗ್ರಾಮದ ದೇವರ ಎತ್ತುಗಳಿಗೆ ಮೇವು ವಿತರಣೆ ಮಾಡಿದ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ನಂತರ ಮಾತನಾಡಿದರು.
ಈ ಭಾಗದಲ್ಲಿ ಗೋಪಾಲಕರು ಹೆಚ್ಚಿದ್ದು ಇಲ್ಲಿನ ಪ್ರಮುಖ ವೃತ್ತಿ ರೈತಾಪಿ ವರ್ಗವು ಕೃಷಿ ಭೂಮಿಯನ್ನು ಅವಲಂಬಿಸಿದ್ದಾರೆ ಆದ್ದರಿಂದ ಇಲ್ಲಿನ ಅರಾಧ್ಯ ದೈವ ಕೂಡ ಗೋವು ಎಂದು ಪ್ರತಿಬಿಂಬಿತವಾಗಿ, ದೇವರ ಗೋವುಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ ಎಂದರು
ಈ ಸಂದರ್ಭದಲ್ಲಿ ಪಶುವೈದ್ಯಾಧಿಕಾರಿಗಳಾದ. ಡಾ. ಇಂದ್ರಬಾಯಿ, ತಹಸೀಲ್ದಾರ್ ನಾಗವೇಣಿ , ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮಂಜುಶ್ರೀ, ಉಪಾಧ್ಯಕ್ಷರಾದ ರಾಮಚಂದ್ರರೆಡ್ಡಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಬಾಬುರೆಡ್ಡಿ, ಮುಖಂಡರಾದ ಶುಭಾಶ್ ರೆಡ್ದಿ , ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.