ರಾಮಾAಜನೇಯ ಕೆ.ಚನ್ನಗಾನಹಳ್ಳಿ

ಚಳ್ಳಕೆರೆ : ಬಯಲು ಸೀಮೆ ಚಳ್ಳಕೆರೆಯು ಬುಡಕಟ್ಟು ಸಂಪ್ರಾದಾಯಕ್ಕೆ ಹಾಸುಹೊದ್ದ ನೆಲೆಬೀಡು, ಇಲ್ಲಿನ ಜನರ ಮುಖ್ಯ ಕುಲಕಸುಬು ಗೋವುಗಳ ಆರಾಧನೆ, ಆದರೆ ಇತ್ತೀಚೀನ ದಿನಗಳಲ್ಲಿ ಗೋವುಗಳ ಸಂತತಿ ನಶಿಸಿಹೊಗುವುದು ಒಂದೆಡೆಯಾದರೆ ಗೋವುಗಳನ್ನು ಸಾಕುವುದೇ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಇಂತಹ ಪಶು ಆರಾಧಕರ ಕ್ಷೇತ್ರದಲ್ಲಿ ಗೋವುಗಳ ರಕ್ಷಣೆ ಇಲ್ಲದೆ ರಸ್ತೆ ಮೇಲೆ ಬಿಳುವ ಪರಿ ಈ ಭಾಗದಲ್ಲಿ ಮೇವಿನ ಕೊರೆತೆ ಪ್ರಮುಖ ಕಾರಣವಾಗಿದೆ.
ಹೌದು ನಗರದಲ್ಲಿ ವಾರಸುದಾರರಿಲ್ಲದೆ ಸುಮಾರು ಇನ್ನೂರಕ್ಕೂ ಹೆಚ್ಚು ಬಿಡಾಡಿ ದನಗಳು ರಸ್ತೆ ಮೇಲೆ ಮಲಗಿ ಸಾರ್ವಜನಿಕರಿಗೆ ಕಿರಿಕಿರಿ ಉಂಟುಮಾಡುತ್ತಿವೆ, ಇನ್ನೂ ವಾಹನಗಳ ಶಬ್ದಕ್ಕೆ ಗಾಬರಿಗೊಂಡು ಎಷ್ಟೋ ಬಾರಿ ಬೈಕ್ ಸವಾರರನ್ನು ಕೆಳಗೆ ಬಿಳಿಸಿ ಅಪಘಾತ ಮಾಡಿದ ಉದಾಹರಣೆಗಳು ಇವೆ, ಆದರೆ ನಗರದಲ್ಲಿ ಇಷ್ಟೆಲ್ಲ ಬಿಡಾಡಿ ದನಗಳು ರಸ್ತೆಯ ಮಧ್ಯೆ ಭಾಗದಲ್ಲಿ ಇದ್ದರು ಕೂಡ ನಗರಸಭೆ ಮಾತ್ರ ಮೌನ ವಹಿಸಿ ನಮಗೆ ಸಂಬAದವಿಲ್ಲ ಎಂಬAತೆ ತೋರುತ್ತಿದೆ.
ಶಾಲಾ ಮಕ್ಕಳಿಗೂ ತೊಂದರೆ :
ಇನ್ನೂ ಶಾಲಾ ಕಾಲೇಜುಗಳಿಗೆ ಗಡಿಬಿಡಿಯಿಂದ ತೆರಳುವ ವಿದ್ಯಾರ್ಥಿಗಳು ರಸ್ತೆಯಲ್ಲಿ ಹೋಗುವಾಗ ಬಿಡಾಡಿ ದನಗಳು ಹಾವಳಿಗೆ ಸಿಲುಕಿ ಅಪಘಾತಗಳು ಹಾಗಿವೆ, ಈಗೇ ದ್ವಿಚಕ್ರ ವಾಹನ ಸಾವರರು ಶಾಲೆಗೆ ತೆರಳುವ ವಿದ್ಯಾರ್ಥಿಗಳು ನಿತ್ಯ ಈ ಸಮಸ್ಯೆಯಿಂದ ಸಾಕಷ್ಟು ಕಿರಿಕಿರಿ ಅನುಭವಿಸುತ್ತಿದ್ದಾರೆ. ಬಿಡಾಡಿ ದನಗಳ ಕಡಿವಾಣ ಹಾಕಿ ದನಗಳನ್ನು ರಸ್ತೆಗೆ ಬಿಡುವ ಮಾಲೀಕರ ವಿರುದ್ದ ಕಾನೂನು ಕ್ರಮ ಜರುಗಿಸಬೇಕಿದೆ ಇಲ್ಲವೇ ನಗರದಿಂದ ಪುಣ್ಯಕೋಟಿ ಗೋಶಾಲೆಗೆ ಸ್ಥಳಾಂತರ ಮಾಡಬೇಕಾದ ನಗರಸಭೆ ಮಾತ್ರ ನಿದ್ರೆಗೆ ಜಾರಿದಂತೆ.
ದನಗಳ ಹಿಂಡುಗೆ ರೋಸಿ ಹೋದ ಸವಾರರು :
ದನಗಳು ಒಂದಲ್ಲ, ಎರಡಲ್ಲ ಹಿಂಡು ಹಿಂಡಾಗಿ ರಸ್ತೆ ಮಧ್ಯೆದಲ್ಲೆ ಮಲಗುವುದು ಹಾಗೂ ಒಂದಕ್ಕೊAದು ಹಾಯುತ್ತಾ ರಸ್ತೆಯಲ್ಲಿ ಕಾದಾಡಲು ಪ್ರಾರಂಭಿಸುತ್ತಾವೆ, ಇದರಿಂದ ವೇಗವಾಗಿ ಸಂಚಾರಿಸುವ ಸವಾರರು ಎಷ್ಟೋ ಬಾರಿ ದನಗಳ ಕಾಲ ಮೇಲೆ ಚಕ್ರ ಹತ್ತಿಸಿಕೊಂಡು ಹೋದ ಉದಾಹರಣೆಗಳು ಇವೆ ಈವುಗಳ ಹಿಂಡು ಬಂದರೆ ಆ ರಸ್ತೆಯಲ್ಲಿ ಸಂಚಾರವೇ ಸಂಪೂರ್ಣ ಬಂದ್ ಹಾಗುತ್ತದೆ, ಇನ್ನೂ ಪೊಲೀಸ್ ಇಲಾಖೆ ಸಿಬ್ಬಂದಿ ಬಂದರೂ ಕೂಡ ಕ್ಯಾರೆ ಮಾಡದ ಬಿಡಾಡಿ ದನಗಳಿಗೆ ಜನರು ರೋಸಿ ಹೋಗಿದ್ದಾರೆ.
ನಗರದಲ್ಲಿರುವ ಬಿಡಾಡಿ ದನಗಳು ಸಾರ್ವಜನಿಕರಿಗೆ ತೊಂದರೆ ಉಂಟು ಮಾಡುವುದು ಒಂದೆಡೆಯಾದರೆ, ಇನ್ನೂ ನಿತ್ಯವೂ ರಸ್ತೆಯಲ್ಲಿ ಸಂಚರಿಸುವ ರಸ್ತೆಯ ಅಕ್ಕಪಕ್ಕದಲ್ಲಿ ನಿಂತಿರುವ ಬಿಡಾಡಿ ದನಗಳು ವಾಹನಗಳು ಶಬ್ದ ಕೇಳುತ್ತಿದ್ದಂತೆಯೇ ದಿಡೀರ್ ಎದ್ದು ಎಷ್ಟೋ ಬೈಕ್ ಸವಾರರಿಗೆ ಗಾಯದ ನೋವನ್ನು ನೀಡಿವೆ, ಶಬ್ದ ಕೇಳಿದ ತಕ್ಷಣ ರಸ್ತೆಯ ಅಕ್ಕಪಕ್ಕದುದ್ದಕ್ಕೂ ಓಡಾಡುತ್ತವೆ ಇದರಿಂದ ರಸ್ತೆಯಲ್ಲಿ ಸಂಚಾರಿಸುವ ಸವಾರರಿಗೆ ತ್ರೀವ್ರ ತೊಂದರೆಯನ್ನುAಟು ಮಾಡಿವೆ.
ಎಲ್ಲೆಲ್ಲಿ ಬಿಡಾಡಿ ದನಗಳ ಸಮಸ್ಯೆ :
ಪ್ರಮುಖವಾಗಿ ನಗರದ ಹೃದಯ ಭಾಗವಾದ ನೆಹರು ವೃತ್ತ, ತ್ಯಾಗರಾಜ್ ನಗರ, ವಾಲ್ಮೀಕಿ ನಗರದಲ್ಲಿ, ಅಂಬೇಡ್ಕರ್ ವೃತ್ತದ ಪಕ್ಕದಲ್ಲಿ, ವಾಲ್ಮೀಕಿ ವೃತ್ತದ ಮುಂಬಾಗ, ಸೋಮಗುದ್ದು ರಸ್ತೆ, ಹಳೆ ನಗರ, ಚಿತ್ರದುರ್ಗ ರಸ್ತೆಯ ನಗರಸಭೆ ಮುಂಬಾಗ, ಬಿಎಂಜಿಹೆಚ್‌ಎಸ್ ಶಾಲಾ ಆವರಣ, ಹೆಚ್‌ಪಿಪಿಸಿ ಕಾಲೇಜ್ ಆವರಣ, ಬಳ್ಳಾರಿ ರಸ್ತೆ, ಬೆಂಗಳೂರು ರಸ್ತೆ, ಪಾವಗಡ ರಸ್ತೆ ಈಗೇ ನಗರದ ಪ್ರಮುಖ ಜನಸಂದಣಿ ಇರುವ , ಶಾಲಾ ಕಾಲೇಜು ಮಕ್ಕಳು ಓಡಾಡುವ ಸ್ಥಳಗಳಲ್ಲಿ ಹೆಚ್ಚಿನದಾಗಿ ಬಿಡಾಡಿ ದನಗಳ ವಾಸಸ್ಥಳವಾಗಿವೆ.
1.ಬಾಕ್ಸ್ ಮಾಡಿ :
ಬಿಡಾಡಿ ದನಗಳ ರಕ್ಷಣೆಗೆ ನಗರಸಭೆ ಅಧಿಕಾರಿಗಳು ಈ ಕೂಡಲೇ ಮುಂದಾಗಬೇಕು, ಸರಕಾರದಿಂದ ನಿರ್ಮಿಸಿದ ಪುಣ್ಯಕೋಟಿ ಗೋಶಾಲೆಗೆ ಬಿಡಾಡಿ ದನಗಳನ್ನು ಬಿಡುವ ವ್ಯವಸ್ಥೆಯಾಗಬೇಕು ಇದರಿಂದ ಸಾರ್ವಜನಿಕರಿಗೂ ಶಾಲಾ ಮಕ್ಕಳಿಗೆ, ವಾಹನ ಸವಾರರಿಗೆ ಅನುಕೂಲವಾಗುವುದಲ್ಲೆದೆ ಲಾರಿಗಳಿಗೆ, ದೊಡ್ಡ ವಾಹನಗಳಿಗೆ ಎಷ್ಟೋ ಗೋವುಗಳು ಕಾಲುಗಳನ್ನು ಮುರಿದುಕೊಂಡು ನೋವು ಅನುಭವಿಸುವುದು ತಪ್ಪಿಸಿಂದಾಗುತ್ತದೆ – ದೊಡ್ಡ ಉಳ್ಳಾರ್ತಿ ಕರಿಯಣ್ಣ
ಅಮೃತ ಕಾವಲ್ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ

2.ಬಾಕ್ಸ್ :
ದಿನ ನಿತ್ಯ ಇದೇ ಮಾರ್ಗದಲ್ಲಿ ನಮ್ಮ ಮಕ್ಕಳನ್ನು ಶಾಲೆಗೆ ಕಳಿಸಬೇಕು ಇಲ್ಲಿ ಗೋವುಗಳ ಹಿಂಡು ಹಿಂಡು ಇರುವುದರಿಂದ ಇಲ್ಲಿಂದ ಮುಂದೆ ಹೋಗುವುದು ದೊಡ್ಡ ಸವಾಲಾಗುತ್ತದೆ ಎಷ್ಟೋ ಸಲ ಓಡಿ ಹೋಗಿದ್ದೆವೆ, ಗೋವುಗಳು ಕಾದಟದಿಂದ ನಮ್ಮ ವಾಹನಗಳ ಮೇಲೆ ಹಾರುತ್ತಾವೆ, ಆದ್ದರಿಂದ ಬಿಡಾಡಿ ದನಗಳ ಬಗ್ಗೆ ಕ್ರಮ ಕೈಗೊಳ್ಳಲು ನಗರಸಭೆ ಮುಂದಾಗಬೇಕು.– ಪೂರ್ಣಿಮಾ ಗೃಹಿಣಿ

3.ಬಾಕ್ಸ್ :
ಬಿಡಾಡಿ ದನಗಳ ಮಾಲೀಕರು ಇದ್ದರೆ, ಒಮ್ಮೆ ಮಾಹಿತಿ ತಿಳಿಸಿ ನಂತರ ಮುಂದಿನ ಕ್ರಮ ಕೈಗೊಳ್ಳುತ್ತೆವೆ, ಮತ್ತೆ ಮತ್ತೆ ರಸ್ತೆಗೆ ದನಗಳನ್ನು ಬಿಡುವುದು ಸಾರ್ವಜನಿಕರಿಗೆ ವಾಹನ ಸವಾರರಿಗೆ ಕಿರಿಕಿರಿ ಮಾಡುವುದು ಕಂಡುಬAದರೆ ಸರಕಾರದ ಪುಣ್ಯಕೋಟಿ ಗೋಶಾಲೆಗೆ ಬಿಡಾಡಿ ದನಗಳನ್ನು ಬಿಡುವ ವ್ಯವಸ್ಥೆ ಹಾಗುತ್ತದೆ.- ವಿನಯ್ ಪ್ರಭಾರ ನಗರಸಭೆ ಪೌರಾಯುಕ್ತರು

ಪೋಟೋ ಚಳ್ಳಕೆರೆ ನಗರದ ವಾಲ್ಮೀಕಿ ವೃತ್ತದಲ್ಲಿ ಬಿಡಾಡಿ ದನಗಳ ಹಿಂಡು ಮಧ್ಯೆದಲ್ಲಿ ವಾಹನ ಸವಾರರು ಪಿಕಲಾಟ

Namma Challakere Local News

You missed

error: Content is protected !!