ಚಳ್ಳಕೆರೆ : ದಲಿತರು ಉಳುಮೆ ಮಾಡಿಕೊಳ್ಳುವ ಭೂಮಿಯಲ್ಲಿ ಸ್ಮಶಾನ ಮಾಡುವುದು ಸರಿಯಲ್ಲ ಸರಕಾರಿ ಗೋಮಾಳವು ಇದೆ ಅದರಲ್ಲಿ ಸ್ಮಶಾನ ಮಾಡಿ ನಮ್ಮ ಅನುಭವದಲ್ಲಿರುವ ಭೂಮಿಯನ್ನು ನಮಗೆ ಬಿಡಿ ಎಂದು ಪರಿ ಪರಿಯಾಗಿ ಬೇಡಿಕೊಳ್ಳುವ ದಲಿತ ವರ್ಗವೊಂದು.
ತಾಲ್ಲೂಕಿನ ಮಚ್ಚುಕುಂಟೆ ಗ್ರಾಮದ ದಲಿತ ಸಮುದಾಯದ ಸಣ್ಣ ದ್ಯಾಮಣ್ಣ ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.
ಇನ್ನೂ ಮಾಧ್ಯಮದೊಂದಿಗೆ ಮಾಹಿತಿ ಹಂಚಿಕೊAಡ ಅವರು ನಮ್ಮ ಜಮೀನು ನಮಗೆ ಬಿಡಿ, ನಮ್ಮನ್ನು ಬದುಕಲು ಅವಕಾಶ ಮಾಡಿಕೊಡಿ ಎಂದು ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.
ಕಳೆದ 50-60 ವರ್ಷಗಳಿಂದ ಹೊಸಮಚ್ಚುಕಂಟೆ ಗ್ರಾಮದ ರಿ.ಸರ್ವ ನಂಬರ್ ನ 134 ನ ಜಮೀನಿನಲ್ಲಿ ವ್ಯವಸಾಯ ಮಾಡಿಕೊಂಡು ಜೀವನ ಸಾಗಿಸುತ್ತಿದ್ದು ನಮ್ಮ ಕುಟುಂಬದಲ್ಲಿ ಸುಮಾರು 10ಕ್ಕಿಂತ ಹೆಚ್ಚು ಜನರಿದ್ದು ಈ ಪ್ರದೇಶದ ನಮ್ಮ ಜಮೀನಿನಲ್ಲಿ ವ್ಯವಸಾಯ ಮಾಡಿಕೊಂಡು ಜೀವನ ಸಾಗಿಸುತ್ತಿದ್ದು ನಮಗೆ ಇದು ಬಿಟ್ಟೆರೆ ಬೇರೆ ಕೃಷಿ ಜಮೀನು ಇಲ್ಲಾ ವ್ಯವಸಾಯ ಬಿಟ್ಟರೆ ಬೇರೆ ಯಾವ ಕೆಲಸವು ಗೊತ್ತಿಲ್ಲಾ, ನಾವು ಕಡುಬಡವರಾಗಿದ್ದು ನನಗೆ 3 ಜನಗಂಡು ಮಕ್ಕಳಿದ್ದು ಜೀವನ ಮಾಡಲು ಕಷ್ಟಕರವಾಗಿದೆ,
ಗ್ರಾಮದ ಸಮೀಪ ನಮ್ಮ ಜಮೀನು ಇರುವ ಕಾರಣ ದಲಿತರ ಮೇಲೆ ಇನ್ನಿಲ್ಲದ ಕುಂತ್ರದಲ್ಲಿ ಇತ್ತಿಚಿನ ದಿನಗಳಲ್ಲಿ ನಮ್ಮ ಜಮೀನಿನಲ್ಲಿ ಶವಸಂಸ್ಕಾರ ಮಾಡಲು ಹುನ್ನಾರ ಮಾಡುತ್ತಿದ್ದು ಸಾಕಷ್ಟು ಸರ್ಕಾರಿ ಜಾಗವಿದ್ದರೂ ನಮ್ಮ ಜಮೀನೆ ರುದ್ರ ಭೂಮಿ ಮಾಡಬೇಕಾ ಎಂದು ಮನವಿ ಮಾಡಿದ್ದಾರೆ.
ಈ ಸಮಯದಲ್ಲಿ ಸಣ್ಣ ದ್ಯಾಮಪ್ಪ, ಶಾಂತಮ್ಮ, ತಿಪ್ಪೇಸ್ವಾಮಿ, ಶಿವಣ್ಣ ಮಂಜಮ್ಮ, ನಾಗಮ್ಮ, ತಿಮ್ಮಣ್ಣ, ರೂಪಕ್ಕ ಇದ್ದರು.

About The Author

Namma Challakere Local News
error: Content is protected !!