51 ದಿನಗಳ ದೇಶ ಪರ್ಯಟನೆ ಮುಗಿಸಿ ಸ್ವಂತ ನೆಲೆಗೆ ಮರಳಿದ ಕುಟುಂಬ
ಚಳ್ಳಕೆರೆ : ನಗರದ ಅಕ್ಕಸಾಲಿಕೆ ವೃತ್ತಿಜೀವನವನ್ನು ಸಾಗಿಸುತ್ತಿರುವ ಸಿ.ಎಲ್.ರಮೇಶಚಾರ್ ಎಸ್.ಶ್ರೀ ದೇವಿ ದಂಪತಿಗಳು, ಮಗ ಅರಣ್ ಜೊತೆಗೂಡಿ ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗೆ ಭಾರತ ಪರ್ಟನೆಯನ್ನು ಕೈಗೊಂಡು 51 ದಿನಗಳ ಪ್ರಯಾಣ ಮುಗಿಸಿ ತಮ್ಮ ಊರಿಗೆ ವಾಪಸ್ಸಾಗಿದ್ದಾರೆ ಇವರ ಈ ಇಚ್ಛಾಶಕ್ತಿಯನ್ನು ಸ್ಮರಿಸಿ ಅಖಿಲಭಾರತ ವಿಶ್ವಕರ್ಮ ಪರಿಷತ್ತಿನ ರಾಜ್ಯಾಧ್ಯಕ್ಷರಾದ ಆರ್.ಪ್ರಸನ್ನಕುಮಾರ್ ಚಳ್ಳಕೆರೆ ತಾ. ಅಧ್ಯಕ್ಷರಾದ ಡಿ.ವೆಂಕಟೇಶಚಾರ್ ಕಾರ್ಯದರ್ಶಿ ಸಿ.ಇ.ಪ್ರಸನ್ನ ಈ ಸಂಧರ್ಭದಲ್ಲಿ ಗೌರವಿಸಿದರು.