ನಾಳೆ ಪವರ್ ಕಟ್ ಎಲ್ಲಲ್ಲಿ..? ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ..!
ಚಳ್ಳಕೆರೆ : ಆ.12ರ ಶನಿವಾರದಂದು ಚಳ್ಳಕೆರೆ ಉಪವಿಭಾಗದ ವ್ಯಾಪ್ತಿಯಲ್ಲಿ ಬರುವ 66/11ಕೆವಿ ವಿದ್ಯುತ್ ವಿತರಣಾ ಕೇಂದ್ರದ ಎಂ.ಯು.ಎಸ್.ಎಸ್.ನಲ್ಲಿ ಕೆ.ಪಿ.ಟಿ.ಸಿ.ಎಲ್.ವತಿಯಿಂದ ಎರಡನೇ ತ್ರೈಮಾಸಿಕ ನಿರ್ವಹಣೆ ಕಾಮಗಾರಿ ಇರುವುದರಿಂದ 66/11ಕೆವಿ ವಿದ್ಯುತ್ ವಿತರಣಾ ಕೇಂದ್ರ ಚಳ್ಳಕೆರೆಯಿಂದ ವಿದ್ಯುತ್ ಸರಬರಾಜಾಗುವ 11ಕೆ ಮಾರ್ಗಗಳಾದ ಎಫ್-01 ಪಾವಗಡ ರಸ್ತೆ, ಎಫ್-02 ಬೆಂಗಳೂರು ರಸ್ತೆ, ಎಫ್-03 ದುರ್ಗಾವರ, ಎಫ್-04 ರೆಡ್ಡಿಹಳ್ಳಿ, ಎಫ್-05 ಸಿದ್ದಾಪುರ, ಎಫ್-06 ನನ್ನಿವಾಳ, ಎಫ್-07 ಸೂಮಗುದ್ದು ರಸ್ತೆ, ಎಫ್-08 ಬಳ್ಳಾರಿ ರಸ್ತೆ, ಎಫ್-09 ಗಾಂಧಿನಗರ, ಎಫ್-11ವೀರದಿಮ್ಮನಹಳ್ಳಿ ಎನ್.ಜೆ.ವೈ., ಮತ್ತು ಎಫ್-12 ಕುಡಿಯುವ ನೀರು 11ಕೆ.ಮಾರ್ಗಗಳ ಈ ಕೆಳಕಂಡ ಸ್ಥಳಗಳಲ್ಲಿ ಬೆಳಿಗ್ಗೆ 10:00 ಗಂಟೆಯಿAದ ಮಧ್ಯಾಹ್ನ 03:00 ಗಂಟೆವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ. ಅದ್ದರಿಂದ ತಾವುಗಳು ಸಹಕರಿಸಬೇಕೆಂದು ಬೆಸ್ಕಾಂ ಎಇಇ ರಾಜು ಪ್ರಕರಟಣೆಯಲ್ಲಿ ಕೋರಿದ್ದಾರೆ.
ವಿದ್ಯುತ್ ಸರಬರಾಜು ಅಡಚಣೆಯಾಗುವ ಸ್ಥಳಗಳು:
ಚಳ್ಳಕೆರೆ ನಗರ ವ್ಯಾಪ್ತಿಯ ಪ್ರದೇಶಗಳು ಮತ್ತು ಬೆಂಗಳೂರು ರಸ್ತೆ, ಬಳ್ಳಾರಿ ರಸ್ತೆ, ಪಾವಗಡ ರಸ್ತೆ ಹಾಗೂ ಬುಡ್ನಹಟ್ಟಿ ಪಂಚಾಯ್ತಿ, ನಗರಂಗೆರೆ ಪಂಚಾಯ್ತಿ, ನನ್ನಿವಾಳ ಪಂಚಾಯ್ತಿ, ವ್ಯಾಪ್ತಿಯ ಗ್ರಾಮಗಳು ಮತ್ತು ಸುತ್ತಮುತ್ತಲಿನ ಪ್ರದೇಶಗಳು.