ಪುಣ್ಯ ಕೋಟಿ ಗೋ ಶಾಲೆಗೆ ಸ್ಥಳೀಯ ಶಾಸಕ ಟಿ.ರಘುಮೂರ್ತಿ ದಿಡೀರ್ ಭೇಟಿ..!
ಗೋವುಗಳನ್ನು ವೀಕ್ಷಿಸಿದ ಶಾಸಕರು
ಚಳ್ಳಕೆರೆ : ಚಳ್ಳಕೆರೆ ತಾಲ್ಲೂಕಿನ ಬಾಲೇನಹಳ್ಳಿ ಗೇಟ್‌ನಲ್ಲಿ ಇರುವ ಪುಣ್ಯ ಕೋಟಿ ಗೋ ಶಾಲೆಗೆ ಸ್ಥಳೀಯ ಶಾಸಕ ಟಿ.ರಘುಮೂರ್ತಿ ಭೇಟಿ ನೀಡಿ ಗೋವುಗಳನ್ನು ವೀಕ್ಷಿಸಿ ಪರಿಶೀಲನೆ ನಡೆಸಿದರು.
ಇನ್ನೂ ಮಾಧ್ಯಮದೊಂದಿಗೆ ಮಾತನಾಡಿದ ಅವರು ಸರಕಾರಿ ಪುಣ್ಯ ಕೋಟಿ ಗೋಶಾಲೆಯಲ್ಲಿ ಸಾರ್ವಜನಿಕರು ಗೋವುಗಳನ್ನು ಸಾಕದೆ ಇದ್ದ ಸಂಧರ್ಭದಲ್ಲಿ ತಂದು ಇಲ್ಲಿ ಬಿಡಬಹುದು ಗೋಮಾತೆಯನ್ನು ಉಳಿಸುವ ನಿಟ್ಟಿನಲ್ಲಿ ಸರಕಾರ ಸನ್ನದು ಹಾಗಿದೆ ಆದ್ದರಿಂದ ಬಯಲು ಸೀಮೆಯಲ್ಲಿ ಪುಣ್ಯಕೋಟಿ ಗೋಶಾಲೆ ತೆರೆದು ಗೋವುಗಳ ರಕ್ಷಣೆಗೆ ಮುಂದಾಗಳಾಗಿದೆ ಎಂದರು.
ಈದೇ ಸಂದರ್ಭದಲ್ಲಿ ಉಸ್ತುವಾರಿ ಪಶು ವೈದ್ಯಾಧಿಕಾರಿಗಳಾದ ಶ್ರೀನಿವಾಸ್, ಮಾಜಿ ತಾಲ್ಲೂಕು ಪಂಚಾಯತ್ ಸದಸ್ಯರಾದ ಹೆಚ್.ಆಂಜನೇಯ, ಮುಖಂಡರು ಹಾಗೂ ಕಾರ್ಯಕರ್ತರ ಮತ್ತು ಗೋಶಾಲೆ ಮೇಲ್ವಿಚಾರಕರು ಉಪಸ್ಥಿತರಿದ್ದರು.