ಮುಂದಿನ ದಿನಗಳಲ್ಲಿ ಗ್ಲೋಬಲ್ ವಾರ್ಮಿಂಗ್ ಜೊತೆಗೆ ಗ್ಲೋಬಲ್ ಬರ್ನಿಂಗನ್ನೂ ಎದುರಿಸಬೇಕಾಗುತ್ತದೆ”

ಚಳ್ಳಕೆರೆ : “ಒಂದು ಒಳ್ಳೇ ಮರ ನಾಲ್ಕು ಜನಕ್ಕೆ ಬೇಕಾಗುವ ಆಮ್ಲಜನಕವನ್ನು ಒದಗಿಸುತ್ತದೆ, ಅದರಂತೆ ನಾವು ಬಹಳ ಹಿಂದಿನಿAದಲೂ ಹೇಳಿಕೊಂಡು ಬರುತ್ತಿರುವ ಮನೆಗೊಂದು ಮರ ಊರಿಗೊಂದು ವನ ಹೇಳಿಕೆಯನ್ನು ಸಾಕಾರಗೊಳಿಸಬೇಕಿದೆ. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಗ್ಲೋಬಲ್ ವಾರ್ಮಿಂಗ್ ಜೊತೆಗೆ ಗ್ಲೋಬಲ್ ಬರ್ನಿಂಗನ್ನೂ ಎದುರಿಸಬೇಕಾಗುತ್ತದೆ” ಎಂದು ವಲಯ ಅರಣ್ಯ ಅಧಿಕಾರಿಗಳಾದ ಶ್ರೀ ಭರತ್‌ರಾಜ್ ಹೇಳಿದರು.
ಚಿತ್ರದುರ್ಗ ನಗರದ ಎಸ್.ಜೆ.ಎಂ.ತಾAತ್ರಿಕ ಮಹಾವಿದ್ಯಾಲಯದ ಸರ್.ಎಂ.ವಿ ಸಭಾಂಗಣದಲ್ಲಿ ಅಂತರಾಷ್ಟಿçÃಯ ಜೈವಿಕ ಇಂಧನ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು, ನಮ್ಮ ದೇಶವು ಬಳಸುವ ಇಂಧನದಲ್ಲಿ ಶೇ17.9 ರಷ್ಟನ್ನು ನಮ್ಮ ದೇಶದಲ್ಲಿ ಉತ್ಪಾದಿಸಲಾಗುತ್ತದೆ. ಉಳಿಕೆ 83.1 ರಷ್ಟನ್ನು ಹೊರದೇಶಗಳಿಂದ ಆಮದು ಮಾಡಿಕೊಳ್ಳುತ್ತಿದ್ದೇವೆ. ಆದರೆ ಇಸ್ರೇಲ್ ದೇಶವು ಮುಂದಿನ ದಿನಗಳಲ್ಲಿ ಶೇ100 ರಷ್ಟು ಇಂಧನವನ್ನು ಸ್ವದೇಶದಲ್ಲಿಯೇ ಉತ್ಪಾದಿಸುವ ಗುರಿಯನ್ನು ಹೊಂದಿರುವAತೆ, ಜೈವಿಕ ಇಂಧನ, ಸೊಲಾರ್ ಮುಂತಾದ ಮರುಬಳಕೆಯ ಇಂಧನಗಳನ್ನು ಬಳಸಿಕೊಳ್ಳುವ ಮೂಲಕ ನಮ್ಮ ದೇಶವೂ ಇಂಧನÀ ಸ್ವಾವಲಂಬನೆ ಗುರಿಯನ್ನು ಹೊಂದಬೇಕಿದೆ ಎಂದರು.
ಎಸ್.ಜೆ.ಎA.ಐ.ಟಿ. ಕಾಲೇಜಿನ ಪ್ರಾಂಶುಪಾಲರಾದ ಡಾ. ಭರತ್.ಪಿ.ಬಿ ರವರು ಮಾತನಾಡಿ ಒಂದು ದೇಶದ ಅಬಿವೃದ್ಧಿಯು ಆ ದೇಶದ ಸಾರಿಗೆ ವ್ಯವಸ್ಥೆಯನ್ನು ಅವಲಂಬಿಸಿರುತ್ತದೆ. ಆ ಸಾರಿಗೆ ವ್ಯವಸ್ಥೆಗೆ ಮೂಲ ಇಂಧನ, ಆ ಇಂಧನವನ್ನು ನಮ್ಮ ದೇಶ 2018 ರ ವರದಿಯಂತೆ 210 ದಶಲಕ್ಷ ಮೆಟ್ರಿಕ್ ಟನ್‌ನ್ನು ಹೊರ ದೇಶಗಳಿಂದ ಆಮದುಮಾಡಿಕೊಳ್ಳುತ್ತದೆ. ಈ ಮೂಲಕ ದೇಶದ ಆರ್ಥಿಕತೆಗೆ ದೊಡ್ಡಮಟ್ಟದ ಹೊಡೆತ ಬೀಳುತ್ತಿದೆ ಎಂದರು.
ಅದಕ್ಕೆ ನಮ್ಮ ವಿದ್ಯಾರ್ಥಿಗಳೂ ಜೈವಿಕ ಇಂಧನದ ಕುರಿತಾಗಿ ಹೊಸ ಹೊಸ ಸಂಶೋಧನೆ, ಅವಿಷ್ಕಾರಗಳನ್ನು ಕೈಗೊಳ್ಳಬೇಕಿದೆ. ಜೈವಿಕ ಇಂಧನವು ಭವಿಷ್ಯದ ಇಂಧನವಾಗಿರುವುದರಿAದ ಮುಂದಿನ ಪೀಳಿಗೆಗಾಗಿ ಇದನ್ನು ಉಳಿಸಿ ಬೆಳಸಿ ಪ್ರೊತ್ಸಾಹಿಸಬೇಕೆಂದು ವಿಧ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರು.
ಸ್ಪೀಚ್ ಸಂಸ್ಥೆಯ ಶ್ರೀ ಹೆಚ್.ಶೇಷಪ್ಪನವರು ಮಾತನಾಡಿ ಇಂಜಿನಿಯರಿAಗ್ ವಿದ್ಯಾರ್ಥಿಗಳು ಜೈವಿಕ ಇಂಧನ ಕುರಿತಾಗಿ ಅಧ್ಯಯನ ಮಾಡುವ ಮೂಲಕ ಜೈವಿಕ ಇಂಧನದ ಉದ್ಯಮಿಗಳಾಗಬೇಕು ಎಂದರು.
ಕಾಲೇಜಿನ ಪ್ರಾಂಶುಪಾಲರಾದ ಡಾ.ಭರತ್.ಪಿ.ಬಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಅರಣ್ಯ ಇಲಾಖೆಯ ವಲಯ ಅರಣ್ಯ ಅಧಿಕಾರಿಗಳಾದ ಭರತ್‌ರಾಜ್, ಮೆಕ್ಯಾನಿಕಲ್ ಇಂಜಿನಿಯರಿAಗ್ ವಿಭಾಗದ ಮುಖ್ಯಸ್ಥರಾದ ಡಾ.ಎನ್.ಜಗನ್ನಾಥ್, ಸ್ಪೀಚ್ ಸಂಸ್ಥೆಯ ಕಾರ್ಯದರ್ಶಿ ಶ್ರೀ ಶೇಷಪ್ಪನವರು, ವಿದ್ಯಾರ್ಥಿಗಳಾದ ದೀಪ್ತಿ ಮತ್ತು ಹರ್ಷಿತಾ, ಕಾಲೇಜಿನ ಎಲ್ಲಾ ವಿಭಾಗದ ಮುಖ್ಯಸ್ಥರು, ವಿದ್ಯಾರ್ಥಿ/ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Namma Challakere Local News

You missed

error: Content is protected !!