ಸಮಾಜಶಾಸ್ತç ವಿಭಾಗದಲ್ಲಿ ಕೇವಲ ಅಧ್ಯಯನ ಮಾಡಿದರೆ ಸಾಲದು ಸಮಾಜದಲ್ಲಿನ ದಿನನಿತ್ಯದ ಘಟನವಳಿಗಳನ್ನು ಅವಲೋಕಿಸುತ್ತಾ ಅವುಗಳನ್ನು ಪಟ್ಟಿ ಮಾಡುತ್ತಾ ನಿಜದವಾದ ಸನ್ನಿವೇಶಗಳನ್ನು ತಿಳಿಯುವುದು ನಿಜವಾದ ಸಮಾಜಶಾಸ್ತçದ ದ್ಯೇಯ ಉದ್ದೇಶ ಎಂದು ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಎಂ.ಕೆ. ದೇವಪ್ಪ ಹೇಳಿದ್ದಾರೆ.
ಅವರು ಚಿತ್ರದುರ್ಗ ನಗರದ ಜಿಲ್ಲಾ ಕಾರಾಗೃಹಕ್ಕೆ ಹೆಚ್.ಪಿ.ಪಿ.ಸಿ. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸ್ನಾತಕೋತ್ತರ ಸಮಾಜಶಾಸ್ತ್ರ ಅಧ್ಯಯನ ವಿಭಾಗ ಪ್ರಥಮ ಮತ್ತು ದ್ವಿತೀಯ ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿಗಳು ಭೇಟಿ ನೀಡಿ, ಜೈಲಿನ ವಿಚಾರಣಾಧೀನ ಖೈದಿಗಳು ಹಾಗೂ ಜೈಲಿನ ವಾಸ್ತವಿಕ ಚಿತ್ರಣವನ್ನು ವೀಕ್ಷಿಸಿದರು. ಜೈಲಿನ ಅಡುಗೆ ಕೋಣೆ ಮತ್ತು ಜೈಲಿನೊಳಗಿನ ಗ್ರಂಥಾಲಯವನ್ನು ಸೂಕ್ಷ್ಮವಾಗಿ ಅವಲೋಕಿಸಿ ವಿದ್ಯಾರ್ಥಿಗಳಿಗೆ ಸೂಚಿಸಿದರು.
ನಂತರದಲ್ಲಿ ಜೈಲರ್‌ರವರಾದ ಶ್ರೀಮಂತಗೌಡ ಪಾಟೀಲ್ ರವರು ಖೈದಿಗಳ ಬಗ್ಗೆ, ಜೈಲಿನ ಸುಧಾರಣೆ, ಖೈದಿಗಳ ನಡವಳಿಕೆ ಮತ್ತು ಶಿಕ್ಷೆಯ ಕುರಿತಾಗಿ ಹಾಗೂ ವಿಶೇಷವಾಗಿ ಕಾಯ್ದೆಗಳ ಬಗ್ಗೆ ಜೈಲುಗಳ ಪ್ರಕಾರಗಳ ಬಗೆಗೆ ಸವಿಸ್ತಾರವಾಗಿ ತಿಳಿಸಿದರು, ವಿದ್ಯಾರ್ಥಿಗಳಗಿದ್ದ ಸಂಶಯಗಳಿಗೆ ಸೂಕ್ತ ಮಾಹಿತಿ ನೀಡಿದರು.
ಈದೇ ಸಂಧರ್ಭದಲ್ಲಿ ಸಮಾಜಶಾಸ್ತ್ರ ಪ್ರಾಧ್ಯಾಪಕರಾದ ಡಾ. ಕೆ.ಸಿ. ಶರಣಪ್ಪನವರು ಜೈಲಿನ ಬಗ್ಗೆ ಮಾಹಿತಿ ನೀಡಿದರು, ಇನ್ನೂ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಎಂ.ಕೆ. ದೇವಪ್ಪ, 8 ನಾಗರಾಜ. ಡಾ. ಚಿತ್ತಯ್ಯ, ವಿದ್ಯಾರ್ಥಿಗಳಾದ ಆರ್.ರಾಕೇಶ್, ಭಿಮಣ್ಣ, ಕರಿಬಸವ, ಇನ್ನು ಹಲವು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.