ಚಳ್ಳಕೆರೆ : ತಾಲ್ಲೂಕಿನ ಹಿರೇಹಳ್ಳಿ ಗ್ರಾಮದ ಆರೋಪಿ ತಿಪ್ಪೇಸ್ವಾಮಿ ತಮ್ಮ ಗ್ರಾಮದ ರಿ.ಸ.ನಂ. 77 ರ ಜಮೀನಿನಲ್ಲಿ ಗಾಂಜಾ ಗಿಡ ಬೆಳಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಅಬಕಾರಿ ನಿರೀಕ್ಷಕರಾದ ನಾಗರಾಜು ಗಸ್ತುನಲ್ಲಿ ಇರುವಂತ ಸಂದರ್ಭದಲ್ಲಿ ಜಮೀನಿನಲ್ಲಿ ಶೋಧನೆ ನಡೆಸಿದಾಗ ಹೂ, ತೆನೆ, ಕಾಂಡ ಬೀಜಗಳಿಂದ ಕೂಡಿದ 01 ಹಸಿ ಗಾಂಜಾ ಗಿಡ ಬಳಸಿರುವುದು ಕಂಡುಬಂದಿದೆ.
ಗಿಡದ ಬೇರು ಸಮೇತ ಕಿತ್ತು ಜಪ್ತಪಡಿಸಿಕೊಂಡು. ತೂಕ ಯಂತ್ರದ ಸಹಾಯದಿಂದ ತೂಕ ಮಾಡಿ ನೋಡಲಾಗಿ 1.972 ಕೆ.ಜಿ ತೂಕವಿದ್ದು ಮಾಲು ಸಮೇತ ಆರೋಪಿಯನ್ನು ವಶಪಡಿಸಿಕೊಂಡಿದ್ದು ಪ್ರಕರಣವನ್ನು ದಾಖಲಿಸಿಕೊಂಡು ಆರೋಗ್ಯ ತಪಾಸಣೆಗೆ ಒಳಪಡಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದೆ ಎಂದು ತಿಳಿಸಿದ್ದಾರೆ.
ದಾಳಿ ಸಮಯದಲ್ಲಿ ಅಬಕಾರಿ ನಿರೀಕ್ಷಕರಾದ ನಾಗರಾಜು, ಉಪನಿರೀಕ್ಷಕರರಾದ ರಂಗಸ್ವಾಮಿ, ಮತ್ತು ತಿಪ್ಪಯ್ಯ ಅಬಕಾರಿ ಪೇದೆಗಳಾದ ಶಾಂತಣ್ಣ ,ಸೋಮಶೇಖರ್, ನಾಗರಾಜ ತೋಳಮಟ್ಟಿ ಹಾಜರಿದ್ದರು.