ಚಳ್ಳಕೆರೆ : ನಗರಸಭೆ ಪೌರಾಯುಕ್ತೆ ಟಿ.ಲೀಲಾವತಿ ಲೊಕಾಯುಕ್ತ ಬಲೆಗೆ

ಚಳ್ಳಕೆರೆ ನಗರಸಭೆ ಪೌರಾಯುಕ್ತರಾದ ಟಿ.ಲೀಲಾವತಿ ಹಾಗೂ ಓರ್ವ ಸಿಬ್ಬಂದಿ ನಿಶಾನೆ ಕಾಂತರಾಜ್ ಲೋಕಾಯುಕ್ತ ಬಲೆಗೆ ಸಿಲುಕಿ ರೆಡ್ ಹ್ಯಾಂಡ್ ಹಾಗಿ ಸಿಕ್ಕಿ ಬಿದ್ದಿದ್ದಾರೆ.
ಚಳ್ಳಕೆರೆ ನಗರದ ಬೆಂಗಳೂರು ರಸ್ತೆಯ ಎಲ್‌ಪಿ ಡಾಬಾ ಬಳಿ ಕಾರಿನಲ್ಲಿ ಸುಮಾರು 3 ಲಕ್ಷ ನಗದು ಹಣವನ್ನು ನಗರಸಭೆ ಸಿಬ್ಬಂದಿ ನಿಶಾನೆ ಕಾಂತರಾಜ್‌ಗೆ ನೀಡುವಾಗ ರೆಡ್ ಹ್ಯಾಂಡ್‌ಗಿ ಹಿಡಿದ ಲೊಕಾಯುಕ್ತ ಪೊಲೀಸ್‌ರು ನಗದು ಹಾಗೂ ನಗರಸಭೆ ಸಿಬ್ಬಂದಿ ನಿಶಾನೆ ಕಾಂತರಾಜ್‌ನನ್ನು ಹಾಗೂ ಕಛೇರಿಯಲ್ಲಿ ಅಕ್ರಮ ವ್ಯವಾರಕ್ಕೆ ದೂರವಾಣೆ ಮೂಲಕ ಸಂಭಾಷಣೆ ಮಾಡಿದ ಪೌರಾಯುಕ್ತೆ ಟಿ.ಲೀಲಾವತಿಯನ್ನು ರೆಡ್ ಹ್ಯಾಂಡ್ ಹಾಗಿ ಹಿಡಿದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇನ್ನೂ ಪ್ರಕರಣದ ಬಗ್ಗೆ ಲೋಕಾಯುಕ್ತ ಜಿಲ್ಲಾ ವರಿಷ್ಠಾಧಿಕಾರಿ ವಾಸುದೇವ್ ಮಾಧ್ಯಮದೊಂದಿಗೆ ಮಾತನಾಡಿದ್ದಾರೆ

ಏನಿದು ಪ್ರಕರಣ :
ಚಳ್ಳಕೆರೆ ನಗರದ ನಗರಸಭೆ ವ್ಯಾಪ್ತಿಯಲ್ಲಿ ಮನೆ ಖಾತೆ ಬದಲಾವಣೆ ಮಾಡಿಕೊಡಲು ನಾಗರಾಜಚಾರಿ ಎಂಬುವವರು ಕಳೆದ ಹಲವು ದಿನಗಳಿಂದ ನಗರಸಭೆಗೆ ಅಲೆದು ಕೊನೆಗೆ ಲೋಕಾಯುಕ್ತರ ಮೊರೆ ಹೊಗಿದ್ದರು ಎನ್ನಲಾಗಿದೆ.
ಈ ಪ್ರಕರಣ ದಾಖಲಿಸಿಕೊಂಡ ಲೋಕಾಯುಕ್ತ ಪೊಲೀಸರು ನಗರಸಭೆ ಮೇಲೆ ಹದ್ದಿನ ಕಣ್ಣು ಇಡುವುದರ ಮೂಲಕ ಪೌರಾಯುಕ್ತರನ್ನು ರೆಡ್ ಹ್ಯಾಂಡ್ ಹಾಗಿ ಇಂದು ಹಿಡಿದಿದ್ದಾರೆೆ.
ನಗರದಲ್ಲಿ ಮನೆಯೊಂದನ್ನು ಎರಡನೇ ಪಾರ್ಟಿಯಾಗಿ ಖರೀದಿಸಿದ ನಾಗರಾಜ್ ಎಂಬುವವರು ಮಾಲೀಕನಿಂದ ಮನೆ ಖಾತೆ ಬದಲಾಸಿಕೊಳ್ಳುಲು ಹಾಗೂ ಮನೆ ಇಸ್ವತ್ತು ಮಾಡಿಸಿಕೊಳ್ಳಲು ನಗರಸಭೆಗೆ ಕಳೆದ ಹಲವು ತಿಂಗಳುಗಳಿAದ ಅಲೆದರು ಖಾತೆ ಮಾಡಿರಲಿಲ್ಲ ಇನ್ನೂ ಕಳೆದ ತಿಂಗಳಷ್ಟೆ ನೂತನವಾಗಿ ಎರಡನೇ ಬಾರಿಗೆ ಅಧಿಕಾರಿ ವಹಿಸಿಕೊಂಡ ಪೌರಾಯುಕ್ತೆ ಟಿ.ಲೀಲಾವತಿ ಈ ಪ್ರಕರಣಕ್ಕೆ ಕಡತ ಪರೀಶಿಲಿಸಿದಾಗ ಆ ಮನೆಯಲ್ಲಿ ಎರಡು ಗೃಹಪಯೋಗಿ (ರೂಂ)ಗಳು ಇರುವುದು ಬೆಳಕಿಗೆ ಬಂದಿದೆ ಇದನ್ನೆ ಬಂಡವಾಳನ್ನಾಗಿಸಿಕೊAಡ ಪೌರಾಯುಕ್ತರು ನೀವು ನಗರಸಭೆ ವಂಚನೆ ಮಾಡಿದ್ದಿರೀ ಮನೆ ನಿರ್ಮಾಣವಾದಗಿನಿಂದ ನಿಮ್ಮ ಕಂದಾಯ ಡಬಲ್ ಕಟ್ಟಬೇಕಾಗುತ್ತದೆ ಅದ್ದರಿಂದ ಅದರ ಬದಲಾಗಿ ನೀವು ಮೂರು ಲಕ್ಷ ಹಣ ನೀಡಿ ಎಂಬ ಉತ್ತರಕ್ಕೆ ಇಂದು ಸಿಕ್ಕ ಮೂರು ಲಕ್ಷ ನಗದು ಹಣವೇ ಸಾಕ್ಷಿಯಾಗಿದೆ.
ಇನ್ನೂ ಸ್ಥಳಕ್ಕೆ ಲೋಕಾಯುಕ್ತ ಜಿಲ್ಲಾ ವರಿಷ್ಠಾಧಿಕಾರಿ ವಾಸುದೇವ್‌ರಾಮ್, ಇನ್ಸ್ಪೆಕ್ಟೆರ್ ಲತಾ, ಪ್ರಕರಣದ ತನಿಖಾ ಅಧಿಕಾರಿ ಡಿವೈಎಸ್‌ಪಿ ಮೃತ್ಯಂಜಯ್, ಇನ್ಸ್ಪೆಕ್ಟೆರ್ ಶಿಲ್ಪ, ವಸಂತ್ ಕುಮಾರ್, ಹಾಗೂ ಸಿಬ್ಬಂದಿಗಳ ತಂಡ ಸ್ಥಳದಲ್ಲಿ ಮೊಕಂ ಹೂಡಿ ನಗರಸಭೆ ಕಛೇರಿಯಲ್ಲಿ ಕಡತಗಳನ್ನು ಪರೀಶಿಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಪೌರಾಯುಕ್ತೆ ಟಿ.ಲೀಲಾವತಿ ಹಾಗೂ ಸಿಬ್ಬಂದಿ ನಿಶಾನೆ ಕಾಂತರಾಜ್‌ರನ್ನು ವಶಕ್ಕೆ ಪಡೆದ್ದಿದ್ದಾರೆ ಎನ್ನಲಾಗಿದೆ.

About The Author

Namma Challakere Local News
error: Content is protected !!