ಪಟ್ಟಣದ ಮುಖ್ಯ ರಸ್ತೆಗಿಲ್ಲ ದುರಸ್ತಿ ಭಾಗ್ಯ ದುರಸ್ತಿ ಮಾಡಿಸುವವರು ಯಾರು …?
ನಾಯಕನಹಟ್ಟಿ:: ಪಟ್ಟಣದ ಅಂಬೇಡ್ಕರ್ ವೃತ್ತದ ಬಳಿ ಇರುವ ಗರಣಿ ಮುಖ್ಯ ರಸ್ತೆ ಪ್ರತಿದಿನವೂ ಪಟ್ಟಣಹರಿಸಿ ರೈತರೂ ಕೂಲಿಕಾರ್ಮಿಕರು ವಿದ್ಯಾರ್ಥಿಗಳು ಸೇರಿದಂತೆ ಸಾವಿರಾರು ಜನರು ಈ ರಸ್ತೆಯಲ್ಲಿ ಗರಣಿ ಮಾರ್ಗವಾಗಿ ಎನ್ ಮಹದೇವಪುರ, ಗಿಡ್ಡಾಪುರ ,ಗಜ್ಜುಗಾನಹಳ್ಳಿ, ರಾಮಸಾಗರ, ಜಂಬಯ್ಯನಹಟ್ಟಿ, ಕೆರೆಯಾಗಲಹಳ್ಳಿ ಗ್ರಾಮಗಳಿಂದ ಸಾವಿರಾರು ಜನರು ಓಡಾಡುತ್ತಾರೆ ರಸ್ತೆಯ ಮಧ್ಯದಲ್ಲಿ ಆಳವಾದ ತಗ್ಗು ಗುಂಡಿಗಳು ಬಿದ್ದು ಮಳೆ ಬಂದರೆ ಕೆರೆಯಂತೆ ನಿಲ್ಲುವ ನೀರು ಇಲ್ಲಿದೆ.
ಸಂಬಂದಿಸಿದ ಇಲಾಖೆಗೆ ಸಾಕಷ್ಟು ಬಾರಿ ಮನವಿ ಮಾಡಿದ್ದರು ಸಹ ಯಾವುದೇ ಅಧಿಕಾರಿಗಳಾಗಲಿ ಜನಪ್ರತಿನಿಧಿಗಳಾಗಲಿ ಗಮನ ಹರಿಸಿಲ್ಲ ಈ ರಸ್ತೆಯನ್ನು ದುರಸ್ತಿ ಪಡಿಸುವವರು ಯಾರು…? ಎಂಬ ಪ್ರಶ್ನೆ ಕಾಡುತ್ತಿದೆ.
ಇನ್ನೂ ಓಬಯ್ಯನಹಟ್ಟಿ ಗ್ರಾಮದ ಕುಮಾರ್ ಈ ಅದಗೆಟ್ಟ ರಸ್ತೆ ಬಗ್ಗೆ ಆರೋಪಿಸಿದ್ದಾರೆ.
ರಸ್ತೆಯಲ್ಲಿ ಪ್ರತಿದಿನವೋ ವಿದ್ಯಾರ್ಥಿಗಳು ಕೂಲಿಕಾರ್ಮಿಕರು ರೈತರು ಸೇರಿದಂತೆ ಸಾವಿರಾರು ಜನ ಸಂಚಾರ ಮಾಡುತ್ತಾರೆ ಕ್ಷೇತ್ರದ ಶಾಸಕರು ಶೀಘ್ರದಲ್ಲೇ ರಸ್ತೆಯನ್ನು ದುರಸ್ತೆ ಪಡಿಸಬೇಕು ಎಂದು ಆಗ್ರಹಿಸಿದ್ದಾರೆ