ಚಳ್ಳಕೆರೆ : ಚಳ್ಳಕೆರೆ ತಾಲೂಕು ಹೊನ್ನೂರು ಗ್ರಾಮದಲ್ಲಿ ಪ್ರತಿ ವರ್ಷದಂತೆ ಹಿಂದೂ ಮುಸ್ಲಿಂ ಸ್ನೇಹ ಸಂಕೇತವಾದ ಮೊಹರಂ ಹಬ್ಬವನ್ನು ಬಹಳ ಅದ್ದೂರಿಯಾಗಿ ಆಚರಿಸಲಾಯಿತು
ಇನ್ನೂ ಗ್ರಾಮ ಪಂಚಾಯತ್ ಸದಸ್ಯರು ಎಚ್. ವಿ.ನಾರಾಯಣರೆಡ್ಡಿ, ದೇವಶ ಆರ್ಶಿವಾರ ಪಡೆದು ನಂತರ ಮಾತನಾಡಿದ ಅವರು ಗ್ರಾಮ ಉದ್ಘಾಭವಿಸಿದ ಸಂಧರ್ಭದಿAದಲೂ ಇಲ್ಲಿನ ಪೀರಲ ದೇವರಿಗೆ ತನ್ನದೇ ಆದ ಮಹತ್ವವಿದೆ ಅದೇ ರೀತಿಯಲ್ಲಿ ಇಲ್ಲಿ ಮುಸ್ಲಿಂ ಹಾಗೂ ಹಿಂದೂಗಳು ಭಾವನಾತ್ಮಕವಾಗಿ ಹಾಸುಹೊಕ್ಕಾಗಿದ್ದಾರೆ ಆದ್ದರಿಂದ ಪ್ರತಿ ವರ್ಷವೂ ಕೂಡ ಇಲ್ಲಿನ ಪವಾಡ ತಪ್ಪದೆ ನಡೆಯುತ್ತದೆ ಎಂದರು.
ಈದೇ ಸಂಧರ್ಭದಲ್ಲಿ ಹೊನ್ನೂರು ಗೋವಿಂದಪ್ಪ, ಬಾಬು, ರವಿಕುಮಾರ್, ಎಚ್. ವಿ.ಪ್ರಕಾಶ್ರೆಡ್ಡಿ, ಜಿ.ಏನ್.ಜಯರಾಮ್ ಮಾಳಮ್ಮರ ರಾಮಪ್ಪ, ಬಿ.ಮಂಜುನಾಥ್ರೆಡ್ಡಿ, ಕೃಷ್ಣಪ್ಪ, ನರಸಿಂಹ, ಪತ್ರಕರ್ತರಾದ ಮಾರಣ್ಣ, ಇನ್ನು ಅನೇಕ ಮುಖಂಡರು ದೇವರ ದರ್ಶನ ಪಡೆದು ಮೊಹರಂ ಕಡೆ ದಿನವನ್ನು ಆಚರಿಸಿದರು