ಚಳ್ಳಕೆರೆ : ಬಯಲು ಸೀಮೆಯ ರೈತರಿಗೆ ಸರಿಯಾದ ಸಮಯಕ್ಕೆ ಮಳೆಯಿಲ್ಲದೆ ಬಿತ್ತನೆ ಮಾಡಿದ ಬೆಳೆಯು ಕೂಡ ಕೈಗೆ ಸಿಗದೆ ಸಂಕಷ್ಟದಲ್ಲಿ ಇದ್ದಾರೆ ಇಂತಹ ರೈತರು ಸಾಲ ಸೂಲ ಮಾಡಿ ಬೆಳೆ ವಿಮೆ ಕಟ್ಟಿದ್ದರು ಕೂಡ ಅವರಿಗೆ ಬರಬೇಕಾದ ಬೆಳೆ ನಷ್ಟ ಪರಿಹಾರ ಹಾಗೂ ಬೆಳೆ ವಿಮೆ ಅನ್ಯರ ಪಾಲಾಗುತ್ತಿರುವುದು ಶೋಷನೀಯ ಇಂತಹ ಅಕ್ರಮ ದಂಧೆಕೋರರನ್ನು ಮಟ್ಟ ಹಾಕುವ ಮೂಲಕ ರೈತರು ಕಟ್ಟಿದ ಬೆಳೆ ವಿಮೆಯನ್ನು ಸರಿಯಾದ ರೀಯಲ್ಲಿ ಜಮೆ ಮಾಡಬೇಕು ಯಾವ ರೈತರಿಗೆ ಅನ್ಯಾಯವಾಗಿದ ಯಾವ ಅಧಿಕಾರಿ ಈ ದಂಧೆಯಲ್ಲಿ ಬಾಗಿಯಾಗಿದ್ದಾರೆ ಎಂಬುದು ಸಂಪೂರ್ಣವಾದ ಮಾಹಿತಿ ಬೇಕು ಎಂದು ಸ್ಥಳೀಯ ಶಾಸಕ ಟಿ.ರಘುಮೂರ್ತಿ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.
ನಗರದ ತಾಲೂಕು ಕಛೇರಿಯಲ್ಲಿ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು,
ಕಳೆದ ಮೂರು ವರ್ಷದಲ್ಲಿ ವಿತರಣೆಯಾಗಿರುವ ಪರಿಹಾರದ ಬಗ್ಗೆ ಪರಿಶೀಲನೆ ನಡೆಸಿ ಸಮಗ್ರ ವರದಿ ಸಿದ್ಧಪಡಿಸಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ತಹಸೀಲ್ದಾರ್ ರೇಹಾನ್ ಪಾಷಾ, ಕೃಷಿ ಅಧಿಕಾರಿ ಜೆ.ಅಶೋಕ್, ತೋಟಗಾರಿಕೆ ಅಧಿಕಾರಿ ವಿರುಪಾಕ್ಷಪ್ಪ, ಇತರರಿದ್ದರು.