ಚಳ್ಳಕೆರೆ : ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವುದರ ಮೂಲಕ ಮಕ್ಕಳ ವ್ಯಾಸಂಗದ ಕಡೆ ಹೆಚ್ಚಿನ ಗಮನಹರಿಸಿ ಶೈಕ್ಷಣಿಕವಾಗಿ ಮುಂದೆ ಬರುವಂತೆ ಶ್ರಮಿಸುವೆ ಎಂದು ನೂತನ ಎಸ್ ಡಿಎಂಸಿ ಅಧ್ಯಕ್ಷ ಎಚ್ .ಮಧುಕುಮಾರ್ ಹೇಳಿದರು.

ಅವರು ತಾಲೂಕಿನ ದ್ಯಾವರನಹಳ್ಳಿ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಅಭಿವೃದ್ಧಿ ಸಮಿತಿಯ ಆಯ್ಕೆಗಾಗಿ‌ ನಡೆಸಿದ ಚುನಾವಣೆಯಲ್ಲಿ ಶಾಲೆಯ ಪೋಷಕರಾದ ಎಚ್.ಮಧು ಕುಮಾರ್ ಸರ್ವಾನುಮತದಿಂದ ಎಸ್ ಡಿಎಂಸಿ ಅಧ್ಯಕ್ಷರಾಗಿ ಆಯ್ಕೆಯಾಗಿ ಮಾತನಾಡಿದರು,

ಗ್ರಾಮದ ಎಲ್ಲಾರ ಸಹಕಾರ ಹಾಗೂ ಸಲಹೆ ಮೇರೆಗೆ ಶಾಲೆಯ ಸರ್ವಂಗೀಣ ಅಭಿವೃದ್ದಿ ಪಥದತ್ತ ಕೊಂಡುಯ್ಯುವ ಮೂಲಕ ಕಂಕಣ ಬದ್ಧನಾಗಿದ್ದೆನೆ ಅದರಂತೆ ಶಾಲೆಯಲ್ಲಿ ನಡೆಯುವ ಪ್ರತಿಯೊಂದು ಕಾರ್ಯಕ್ರಮಗಳಿಗೂ ನನ್ನ ಸಹಕಾರ, ಪ್ರೋತ್ಸಾಹ ಸದಾ ಇರುತ್ತದೆ, ಒಟ್ಟಾರೆ ಶೈಕ್ಷಣಿಕವಾಗಿ ಶಾಲೆ ಅಭಿವೃದ್ಧಿ ಹೊಂದಲು ಶ್ರಮಿಸುವೆ ಎಂದರು.

ಈ ಸಂಧರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕಿ ಸುನಿತಾ, ಗ್ರಾಮ ಪಂಚಾಯಿತಿ ಸದಸ್ಯ ಬಿ.ಆನಂದ್ ಕುಮಾರ್, ಡಿ.ಟಿ ಭೂತ ಲಿಂಗಪ್ಪ, ಜಿ ಎಚ್ ಲಕ್ಷೀ ನಾರಾಯಣ, ಧನಂಜಯ್ , ಲಕ್ಷ್ಮಣ, ಶಿವಣ್ಣ, ಮಾರುತಿ, ಮಂಜಣ್ಣ, ರವಿ, ತಿಪ್ಪೇಸ್ವಾಮಿ, ಹರೀಶ್, ಪ್ರದೀಪ್, ಗಿಡ್ಡ ರಾಜ್ ಇತರರು ಪಾಲ್ಗೊಂಡಿದ್ದರು

About The Author

Namma Challakere Local News
error: Content is protected !!