ಚಳ್ಳಕೆರೆ: ಮಣಿಪುರದಲ್ಲಿ ನಡೆದ
ಬೆತ್ತಲೆ ಮೆರವಣಿಗೆ ಮತ್ತು ಸಾಮೂಹಿಕ ಅತ್ಯಾಚಾರ ಖಂಡಿಸಿ, ಚಳ್ಳಕೆರೆಯ
ಸಿ.ಪಿ.ಐ.(ಎಂ) ಕಾರ್ಯಕರ್ತರು ನೆಹರು ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು.

ಇನ್ನೂ ಮಣಿಪುರದಲ್ಲಿ ಮೇ 3 ರಂದು ಜನಾಂಗೀಯ ಹಿಂಸಾಚಾರ ಪ್ರಾರಂಭವಾದ ಮರುದಿನವೇ ಮೇ-4
ರಂದು ನಡೆದ ಸಾಮೂಹಿಕ ಅತ್ಯಚಾರ ಆಘಾತಕಾರಿ ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಂಡಿವೆ.

ಇವು
ಒಂದೆಡೆಯಲ್ಲಿ ಅಮಾನುಷ ಕ್ರೌರ್ಯವನ್ನು ಮತ್ತು ಇನ್ನೊಂದೆಡೆಯಲ್ಲಿ ಮಣಿಪುರದಲ್ಲಿ ಮಹಿಳೆಯರ
ಮೇಲೆ ದೌರ್ಜನ್ಯವನ್ನು ನಡೆಸುವ ಅಪರಾಧಿಗಳ ಭಂಡತನವನ್ನು ನಾಚಿಕೆಗೇಡಿತನವನ್ನು ಪ್ರದರ್ಶಿಸಿದೆ,
ಎಂದು ಸಿ.ಪಿ.ಐ. (ಎಂ). ಚಳ್ಳಕೆರೆ ಶಾಖೆಯ ಪಧಾಧಿಕಾರಿ ತಿಪ್ಪೆಸ್ವಾಮಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಈ ಘಟನೆಯಲ್ಲಿ ಪುರುಷರ ಗುಂಪು,
ಮಹಿಳೆಯರನ್ನು
ಇಬ್ಬರು
ಬೆತ್ತಲೆಯಾಗಿ ಬೀದಿಗಳಲ್ಲಿ ಮೆರವಣಿಗೆ
ಇದರ
ಮಾಡಲಾಗಿತ್ತು,
ವೀಡಿಯೋಗಳನ್ನು ರೆಕಾರ್ಡ್ ಮಾಡಿರುವುದು ಮಾತ್ರವಲ್ಲದೆ ಡಿಜಿಟಲ್ ಪ್ಲಾಟ್ ಫಾರ್ಮಗಳಲ್ಲಿ ಪೋಸ್ಟ್
ಮಾಡಿ ಈ ಮಹಿಳೆಯರ ಗುರುತನ್ನು ಬಹಿರಂಗ ಪಡಿಸಿರುವುದು ತುಂಬಾ ಆಘಾತಕಾರಿ.
ಇದು ಸಂತ್ರಸ್ತರ ಘನತೆ ಮತ್ತು ಹಕ್ಕುಗಳನ್ನು ಉಲ್ಲಂಘಿಸಿರುವ ಕೃತ್ಯ ಎಂದು ನಾವು
ಖಂಡಿಸುತ್ತಿದ್ದೇವೆ, ಎಂದಿದ್ದಾರೆ.

ಈ ಘಟನೆ ನಡೆದು ಮೂರು ತಿಂಗಳು ಆಗುತ್ತಾ ಬಂದಿದೆ ಆದರೆ ಕೇವಲ ಶೂನ್ಯ ಎಫ್ ಐ
ಆರ್ ಗಿಂತ ಹೆಚ್ಚಿನ ಕ್ರಮವನ್ನು ತೆಗೆದುಕೊಂಡಿರುವುದು ಪೊಲೀಸರಿಗೆ ಸಂತ್ರಸ್ತರ ಬಗ್ಗೆ ನಿರಾಸಕ್ತಿ ಮತ್ತು
ಅಪರಾಧಿಗಳೊಂದಿಗೆ ಅವರ ಶಾಮೀಲನ್ನು ಹೇರಳವಾಗಿ ಸ್ಪಷ್ಟಗೊಳಿಸುತ್ತಿದೆ. ಇದರೊಂದಿಗೆ ರಾಜ್ಯದ
ಮುಖ್ಯ ಮಂತ್ರಿ ಮತ್ತು ಪ್ರಧಾನ ಮಂತ್ರಿಗಳ ಭಾರೀ ಮೌನ ಅತ್ಯಂತ ಖಂಡನೀಯ ಆ ರಾಜ್ಯದಲ್ಲಿ
ನಡೆಯುತ್ತಿರುವ ಜನಾಂಗೀಯ ಹಿಂಸಾಚಾರಕ್ಕೆ ಮಾರ್ಕ್ಸ್ ವಾದಿ ಕಮ್ಯೂನಿಸ್ಟ್ ಪಕ್ಷ ಅಪಾದಿಸುತ್ತಿದೆ ಎಂದರು.

ಇನ್ನೂ ಕಮ್ಯುನಿಸ್ಟ್ ಪಕ್ಷದ ಮಲಿಯಪ್ಪ ಮಾತನಾಡಿ,

ದೇಶದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ. ಈ ಘಟನ ದೇಶಾದ್ಯಂತ
ಆಘಾತದ ಅಲೆಗಳನ್ನು ಎಬ್ಬಿಸಿದೆ ನಾಗರೀಕರ ಹಕ್ಕುಗಳನ್ನು ರಕ್ಷಿಸುವುದು ಸರ್ಕಾರದ ಕರ್ತವ್ಯ ಆದರೆ ಈ
ವಿಚಾರದಲ್ಲಿ ಮೌನ ವಹಿಸಿರುವ ಪ್ರಧಾನಿ ವಿಧೇಶಿ ಪ್ರವಾಸದಲ್ಲಿ ಮಗ್ನರಾಗಿದ್ದಾರೆ, ಮಹಿಳೆಯರ ಮೇಲೆ
ಗೌರವ ಇಲ್ಲದ ನಮ್ಮ ದೇಶದ ಪ್ರಧಾನಿ ಕೂಡಲೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸುತ್ತೇವೆ.

  • ಅಪರಾಧಿಗಳನ್ನು ತಕ್ಷಣವೇ ಬಂಧಿಸಬೇಕು ಮತ್ತು ಈ ಪ್ರಕರಣವನ್ನು ಫಾಸ್ಟ್ ಟ್ರಾಕ್ ಮಾಡಬೇಕು.
  • ಕರ್ತವ್ಯ ಲೋಪ ಎಸಗಿರುವ ಪೋಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು.
  • ಬೀರೇನ್ ಸಿಂಗ್ ರಾಜೀನಾಮೆ ಕೊಡಬೇಕು,
  • ಮಣಿಪುರದಲ್ಲಿ ಶಾಂತಿ ಮರುಸ್ಥಾಪಿಸಲು ತಕ್ಷಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಪ್ರತಿಭಟನೆ ಮೂಲಕ
    ಆಗ್ರಹಿಸುತ್ತಿದ್ದೇವೆ ಎಂದು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.

About The Author

Namma Challakere Local News
error: Content is protected !!