ಮಾಧ್ಯಮಗಳು ಎಲ್ಲಿಯವೆಗೆ ಸತ್ಯವನ್ನು ಬರೆಯುವುದಿಲ್ಲವೋ ಅಲ್ಲಿಯವರೆಗೆ ದೇಶದಲ್ಲಿ ಸುಳ್ಳಿನ ರಾಜಾಕರಣ ಇರುತ್ತದೆ
ಚಳ್ಳಕೆರೆ : ಪತ್ರಿಕೆಗಳು ಮತ್ತು ಸಂಪಾದಕರು ಸಮಾಜದ ಏಳಿಗೆಗೆ ಶ್ರಮಿಸುವ ಮುಖವಾಣಿಗಳಾಗಿ ಕೆಲಸ ಮಾಡುತ್ತಿರುವುದು ಉತ್ತಮ ಬೆಳವಣಿಗೆ ಎಂದು ಶಾಸಕ ಟಿ.ರಘುಮೂರ್ತಿ ಮೆಚ್ಚುಗೆ ವ್ಯಕ್ತಪಡಿಸಿದರು.
ನಗರದ ಸರ್ಕಾರಿ ನೌಕರ ಭವನದಲ್ಲಿ ಕರ್ನಾಟಕ ರಾಜ್ಯ ಪತ್ರಿಕಾ ಸಂಪಾದಕರ ಚಳ್ಳಕೆರೆ ಶಾಖೆ ಉದ್ಘಾಟನೆ ಹಾಗೂ ಪತ್ರಿಕಾ ದಿನಾಚರಣೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ನಾಡಿನ ಎಲ್ಲಾ ಸರ್ವ ಜನಾಂಗದ ಅಭಿವೇದ್ದಿಗೆ ಪೂರಕವಾದಂತಹ ಜನತೆಯೊಟ್ಟಿಗೆ ಸಾಮರಸ್ಯ ಉಳಿಸಿಕೊಂಡು ಸಮುದಾಯಗಳ ಏಳಿಗೆಗೆ ಪತ್ರಿಕೆ ಶ್ರಮಿಸುತ್ತಿದೆ. ಸಾಮಾಜದ ಅಂಕುಡೊAಕುಗಳನ್ನು ತಿದ್ದುವ ಮೂಲಕ ಸಾಮಾಜಮುಖಿ ಕಾರ್ಯ ಮಾಡುವ ಮೂಲಕ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ತಾಲೂಕು ಅಧ್ಯಕ್ಷ ಗಂಗಾಧರ್ ಮಾತನಾಡಿ, ಇಂದಿನ ದಿನಮಾನಗಳಲ್ಲಿ ಪತ್ರಿಕೆ ನಶಿಸಿ ಹೊಗುತ್ತದೆ ಅದನ್ನು ಉಳಿಸಿ ಬೆಳೆಸುವುದು ನಮ್ಮ ಕರ್ತವ್ಯ ಆದ್ದರಿಂದ ಸಂವಿಧಾನ ನಾಲ್ಕನೆ ಅಂಗವಾಗಿರುವ ಪತ್ರಿಕಾ ರಂಗ ಉತ್ತಮ ಕಾರ್ಯ ಮಾಡುವ ಮೂಲಕ ಪಕ್ಷ ಬೇಧ ಭಾವ ಮಾಡದೆ ಸಮಾನ ಸ್ಥಿತಿಯಲ್ಲಿ ಸಮಾಜದಲ್ಲಿ ಅನ್ಯಾಯಕ್ಕೆ ಒಳಗಾದವರ ನಿಲುವಿಗೆ ನಿಲ್ಲಬೇಕು, ಎಂದು ಹೇಳಿದರು.
ಸಂಪಾದಕರಾದ ಸಂಪಿಗೆ ತಿಪ್ಪೆಸ್ವಾಮಿ ಮಾತನಾಡಿ, ಮಾಧ್ಯಮಗಳು ಎಲ್ಲಿಯವೆಗೆ ಸತ್ಯವನ್ನು ಬರೆಯುವುದಿಲ್ಲವೋ ಅಲ್ಲಿಯವರೆಗೆ ದೇಶದಲ್ಲಿ ಸುಳ್ಳಿನ ರಾಜಾಕರಣ ಇರುತ್ತದೆ, ಆದರೆ ನಿಖರವಾಗಿ ಸತ್ಯವನು ಬರೆಯುವ ಪತ್ರಿಕೆಗಳು ಎಂದರೆ ಕೇವಲ ಸ್ಥಳೀಯ ಪತ್ರಿಕೆಗಳು ಮಾತ್ರ, ಇಂತಹ ಮುದ್ರಣ ಮಾಧ್ಯಮ ಇಂದಿನ ಕಾಲದಲ್ಲಿ ನಶಿಸಿ ಹೊಗುತ್ತದೆ ಎಂದು ವಿಷಾದ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯ ಪತ್ರಿಕಾ ಸಂಘದ ತಾಲೂಕು ಅಧ್ಯಕ್ಷ ಪಿ.ಗಂಗಾಧರ್, ಉಪಾಧ್ಯಕ್ಷ ಎಸ್.ಟಿ.ಮಾರಣ್ಣ, ಡಿ.ತಿಪ್ಪೆಸ್ವಾಮಿ, ಕೆ.ಟಿ.ರಾಜಣ್ಣ, ಟಿ.ತಿಪ್ಪೆಸ್ವಾಮಿ, ಡಿ.ನಿಂಗಪ್ಪ. ಟಿ.ತಿಪ್ಪೆಸ್ವಾಮಿ, ನಗರಸಭೆ ಮಾಜಿ ಉಪಾಧ್ಯಕ್ಷ ಟಿ.ವಿಜಯ್‌ಕುಮಾರ್, ಇತರರು ಇದ್ದರು.