ಚಳ್ಳಕೆರೆ : ಉದ್ಯೋಗ ಖಾತ್ರಿ ಗ್ರಾಮೀಣಾಭಿವೃದ್ಧಿಗೆ ವರದಾನವಾಗಿದ್ದು ಇದನ್ನೇ ಬಂಡವಾಳ ಮಾಡಿಕೊಂಡ ಕೆಲವರು ಕಾಮಗಾರಿ ಮಾಡದೆ ಕೂಲಿ ಕಾರ್ಮಿಕರ ಹೆಸರಿನಲ್ಲಿ ಹಣ ದುರುಪಯೋಗ ಮಾಡಿರುವುದು ತಡವಾಗಿ ಬೆಳಕಿಗೆ ಬಂದಿದೆ. ಹೌದು ಇದು ಚಳ್ಳಕೆರೆ ತಾಲೂಕಿನ ಗೋಪನಹಳ್ಳಿ ಗ್ರಾಪಮದ ಜಿಪಿ ರಂಗಪ್ಪ ಬಡಾವಣೆಲ್ಲಿರುವ ಅಜ್ಜಯ್ಯ ಪೂಜಾರಿ ಮನೆ ರಸ್ತೆ ಕೆಸರು ಗದ್ದೆಯಾಗಿದ್ದು ರಸ್ತೆ ದುರಸ್ಥಿ ಮಾಡಿಸುವಂತೆ ಮಹಿಳೆಯರು ಗ್ರಾಮ ಪಂಚಸಯತ್ ಕಚೇರಿಗೆ ವಿಚಾರಿಸಲು ಹೋದರಿ ಕಚೇರಿಯಲ್ಲಿ ಪಿಡಿಒ ಹಾಗೂ ಸದಸ್ಯರು ಯಾರು ಇಲ್ಲದ ಕಾರಣ ದೂರವಾಣಿ ಮೂಲಕ ಸಂಪರ್ಕಿಸಿದರೂ ಕರೆ ಸ್ವೀಕರಿಸದ ಅಧಿಕಾರಿಕಾರಿಗಳು ಸದಸ್ಯರನ್ನು ವಿಚಾರಿಸಿದರೆ ಒಬ್ಬರ ಮೇಲೆ ಒಬ್ಬರು ಹೇಳುತ್ತಾರೆ ಇನ್ಮು ಕೆಲವರು 2022 ನೇ ಸಾಲಿನಲ್ಲಿ ನರೇಗಾ ಯೋಜನೆಯಡಿಯಲ್ಲಿ ಈ ರಸ್ತೆಯ ಎರಡು ಬದಿಯಲ್ಲಿ ಬಾಕ್ಸ್ ಚರಂಡಿ ಕಾಮಗಾರಿ ಪ್ಲಾನ್ ನಲ್ಲಿ ಸೇರಿಸ ಲಾಗಿತ್ತು ಆದರೆ ಎನ್ ಎಂ ಆರ್ ಜೀರೋ ಮಾಡಲಾಗಿದೆ ಎಂಬ ಉತ್ತರ ನೀಡಿದ್ದಾರೆ ಆದರೆ ಅನ್ ಲೈನ್ ಚೆಕ್ ಮಾಡಿದಾಗ ಪಿಡ್ಲ್ಯು ರಸ್ತೆಯಿಂದ ಲಕ್ಷ್ಮಕ್ಕನ ಮನೆಯವರೆಗೆ ಬಾಕ್ ಚರಂಡಿ ಕಾಮಗಾರಿ ಮಾಡದೆ ಹೋಗಿ 12978 ರೂ ಗಳನ್ನು 29/6/2022 ರಿಂದ 5/7/2022 ರವರೆ ಕೂಲಿ ಕಾರ್ಮಿಕರು ಕೆಲಸ ಮಾಡಿದ್ದಾರೆ ಎಂದು ಕೂಲಿ ಕಾರ್ಮಿಕರ ಹೆಸರಿನಲ್ಲಿ ಹಣ ಡ್ರಾ ಮಾಡಿದ್ದರೂ ಸಹ ಈ ಜಾಗದಲ್ಲಿ ಯಾವುದೆದ ಕಾಮಗಾರಿ ನಿರ್ಮಾಣ ಮಾಡಿಲ್ಲಿ ಅಲ್ಲಿನ ನಿವಾಸಿಗಳೇ ನಮಗೆ ಚರಂಡಿ ಹಾಗೂ ರಸ್ತೆ ಅಭಿವೃದ್ಧಿ ಮಾಡಿಸಿ ರಸ್ತೆಯಲ್ಲಿ ಮಳೆ ನೀರು ಹಾಗೂ ತ್ಯಾಜ್ಯ ನೀರು ಹರಿಯುವುದರಿಂದ ಸಾಂಕ್ರಮಿಕ ರೋಗದ ಬೀತಿ ಎದುರಾಗಿದೆ ಮಳೆಗಾಲದಲ್ಲಂತೂ ಕೆಸರು ಗದ್ದೆಯಾಗಿ ಓಡಾಡಲು ಹರಸಹಾಸ ಪಡಬೇಕಾಗಿದೆ ಎಂದು ಮಹಿಳೆಯರು ಗ್ರಾಪಂ ಕಚೇರಿಗೆ ಅಲೆದಾಡುವಂತಾಗಿದೆ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಅವಶ್ಯಕತೆ ಇರುವ ಕಡೆ ಕಾಮಗಾರಿ ಮಾಡದೆ ಅಧಿಕಾರಿಗಳು ಹಾಗೂ ಜನಪ್ರತಿಧಿಗಳು ಉದ್ಯೋಗ ಖಾತ್ರಿ ಯೋಜನೆಯನ್ನು ದುರುಪಯೋಗ ಮಾಡಲಾಗುತ್ತಿದ್ದೆ ಕಾಮಗಾರಿ ಹೆಸರಿನಲ್ಲಿ ಕಾಮಗಾರಿ ನಡೆಸದೇ 12978 ರೂ ಗಳನ್ನು ಕಾಮಗಾರಿ ಮಾಡದೆ ಕೂಲಿ ಕಾರ್ಮಿಕರ ಹೆಸರಿನಲ್ಲಿ ಡ್ರಾ ಮಾಡಿ ಒಂದು ವರ್ಷಕಳೆದರೂ ಕಾಮಗಾರಿ ಮಾಡದೇ ಇರುವುದನ್ನು ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಹಾಗೂ ಚರಂಡಿ ರಸ್ತೆ ಕಾಮಗಾರಿ ಅಭುವೃದ್ಧಿ ಪಡಿಸುವಂತೆ ಇಲ್ಲಿನ ನಿವಾಸಿಗಳು ಒತ್ತಾಯಿಸಿದ್ದಾರೆ.