ಚಳ್ಳಕೆರೆ : ನಗರದಲ್ಲಿ ಸ್ವಚ್ಚತೆಗೆ ಮುನ್ನೆಚ್ಚರಿಗೆ ಕ್ರಮ ಕೈಗೊಂಡ ನಗರಸಭೆ ಅಧಿಕಾರಿಗಳು, ನಗರದ ಹೃದಯ ಭಾಗದ ನೆಹರು ವೃತ್ತದಲ್ಲಿ ಪೌರಕಾರ್ಮಿಕರಿಗೆ ತಲೆನೋವು ತಂದ ಚಿತ್ರದುರ್ಗ ಮಾರ್ಗದ ರಸ್ತೆಯ ಮೇಲೆ ನಿಲ್ಲುವ ಮಳೆ ನೀರನ್ನು ಬೇರೆಡೆ ಸಾಗಿಸುವುದೆ ದೊಡ್ಡ ಸವಾಲಾಗಿ ಪರಿಣಮಿಸಿತ್ತು ಆದರೆ ನಗರಸಭೆ ಕಿರಿಯ ಆರೋಗ್ಯ ನಿರೀಕ್ಷರಾದ ಗೀತಾ ಅಧಿಕಾರ ವಹಿಸಿಕೊಂಡ ಕೆಲವೇ ದಿನಗಳಲ್ಲಿ ಇಂತಹ ಜಾಲ್ವಂತ ಸಮಸ್ಯೆಗಳಿಗೆ ಇತ್ಯರ್ಥ ಪಡಿಸಿದ್ದಾರೆ.
ಇನ್ನೂ ರಸ್ತೆ ಮೇಲೆ ನಿಲ್ಲುವ ಮಳೆನೀರನ್ನು ಚರಂಡಿಗೆ ವರ್ಗಾಯಿಸುವ ಮೂಲಕ ನಗರದಲ್ಲಿ ಸ್ವಚ್ಚತೆಗೆ ಕೈಗನ್ನಡಿಯಾಗಿದ್ದಾರೆ.
ಅದರಂತೆ ಈಡೀ ನಗರದ ವಿವಿಧ ವಾರ್ಡಗಳಲ್ಲಿ ಚರಂಡಿ ಪಕ್ಕದಲ್ಲಿ ಬೆಳೆಯುವ ಹುಲ್ಲು ಗಿಡ ಗಂಟೆಗಳನ್ನು ಪ್ರತಿ ವಾರ ಪೌರಕಾರ್ಮಿಕರು ಸ್ವಚ್ಚಗೊಳಿಸವಬೇಕಿತ್ತು, ಸುಖ ಸುಮ್ಮನೆ ಪೌರಕಾರ್ಮಿಕರಿಗೆ ಹೊರೆಯಾಗುವುದನ್ನು ತಪ್ಪಿಸಲು ಕಳೆ ಬೆಳೆಯಬಾರದು ಎಂದು ಕಳೆ ನಾಶಕ ಸಿಂಪಡಿಸಿ, ಸಂಪೂರ್ಣವಾಗಿ ಸ್ವಚ್ಚ ನಗರಕ್ಕ ಪಣತೊಟ್ಟಿದ್ದಾರೆ ಅದರಂತೆ ನಗರದ ಜಾಲ್ವಂತ ಸಮಸ್ಯೆಗಳಿಗೆ ತೀಲಾಂಜಲಿ ಹಾಡಿದ ಪೌರಕಾರ್ಮಿಕರ ಕಾರ್ಯಕ್ಕೆ ಪೌರಾಯುಕ್ತೆ ಟಿ.ಲೀಲಾವತಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಇನ್ನೂ ಮಾಧ್ಯಮದೊಟ್ಟಿಗೆ ಮಾತನಾಡಿದ ಅವರು ನಗರದ 31 ವಾರ್ಡ್ಗಳಲ್ಲಿ ಮಳೆಗಾಲವಾದ್ದರಿಂದ ರಾಜ ಕಾಲುವೆ ಸ್ವಚ್ಚತೆ, ಚರಂಡಿಗಳು ಕಟ್ಟಿಕೊಂಡಿರುವ ಸ್ಥಳಗಳನ್ನು ನೋಡಿಕೊಂಡು ಅತೀ ತುರ್ತಾಗಿ ಸ್ವಚ್ಚತೆಗೆ ಕ್ರಮಕೈಗೊಂಡಿದ್ದೆವೆ ಇನ್ನೂ ನಗರದಲ್ಲಿ ಸಾಂಕ್ರಾಮಿಕ ರೋಗ ಹರಡದಂತೆ ನಿಗಧಿ ಪಡಿಸಿದ ಸ್ಥಳಗಳಲ್ಲಿ ಸೊಳ್ಳೆಗಳ ನಿಯಂತ್ರಣಕ್ಕೆ ಕ್ರಮಕೈಗೊಳ್ಳಲಾಗಿದೆ ಎಂದರು.

About The Author

Namma Challakere Local News
error: Content is protected !!