ಚಿತ್ರದುರ್ಗ, ಜು. 28 – ಆಗಸ್ಟ್ 17ರಿಂದ ಆರಂಭವಾಗುವ ಶ್ರಾವಣಮಾಸದ ಪ್ರಯುಕ್ತ ಶ್ರೀ ಮುರುಘಾಮಠದ ಕರ್ತೃಗದ್ದುಗೆಗೆ ನಿತ್ಯ ವಚನಾಭಿಷೇಕ ಮತ್ತು ಆಗಸ್ಟ್ 8ರಂದು ಹೊಳಲ್ಕೆರೆ ಒಂಟಿಕAಬದ ಮುರುಘಾಮಠದಲ್ಲಿ ಶ್ರೀ ಜಗದ್ಗುರು ಮಲ್ಲಿಕಾರ್ಜುನ ಮಹಾಸ್ವಾಮಿಗಳ ಸ್ಮರಣೋತ್ಸವ ಹಾಗೂ ಶ್ರಾವಣಮಾಸದ ಚಿಂತನ ‘ನಿತ್ಯ ಕಲ್ಯಾಣ’ ಮೊದಲಾದ ಕಾರ್ಯಕ್ರಮಗಳ ಆಯೋಜನೆ ಬಗ್ಗೆ ಚರ್ಚಿಸಲು ದಿನಾಂಕ : 31-07-2023ರ ಸಂಜೆ 5 ಗಂಟೆಗೆ ಶ್ರೀ ಬಸವಪ್ರಭು ಸ್ವಾಮಿಗಳ ನೇತೃತ್ವದಲ್ಲಿ ಪೂರ್ವಸಿದ್ಧತಾ ಸಭೆಯನ್ನು ಕರೆಯಲಾಗಿದೆ. ಹಾಗಾಗಿ ಶ್ರೀಮಠದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ಸಲಹೆ ಸೂಚನೆಗಳನ್ನು ತಿಳಿಸಬೇಕಾಗಿ ಶ್ರೀಮಠದ ಪ್ರಕಟಣೆ ತಿಳಿಸಿದೆ.