ನಾಯಕನಹಟ್ಟಿ : ಕರ್ನಾಟಕ ಸಾರ್ವತ್ರಿಕ ವಿಧಾನಸಭಾ ಚುನಾವಣೆ 2023ರಲ್ಲಿ ಮತದಾರರ ಸೇರ್ಪಡೆ 80 ವಯಸ್ಸಿನವರನ್ನು ಮತ್ತು ವಿಕಲಚೇತನರನ್ನು ಗುರುತಿಸುವುದು,ಮನೆ ಮನೆ ಭೇಟಿ ಮಾಡುವುದು ಸೇರಿದಂತೆ, ಚುನಾವಣೆ ಕೆಲಸ ಕಾರ್ಯಗಳನ್ನು ದಿನಾಂಕ. 11-4-2023 ರಿಂದ
10-5-2023 ರ ವರೆಗೆ ಕರ್ತವ್ಯವನ್ನ ಎಲ್ಲಾ ಮತಗಟ್ಟೆ ಅಧಿಕಾರಿಗಳು ಮತ್ತು ಬಿ ಎಲ್ ಓ ಶಿಕ್ಷಕರು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ರಜಾ ಅವಧಿಯಲ್ಲಿ ಚುನಾವಣೆ ಕಾರ್ಯ ನಿರ್ವಹಿಸಿರುವ ನೌಕರರಿಗೆ ಕೆಸಿಎಸ್ ಆರ್ ನಿಯಮದಂತೆ ಗಳಿಕೆ ರಜೆ ಮಂಜೂರು ಮಾಡಿಕೊಡಬೇಕೆಂಬ ಸರ್ಕಾರಿ ಆದೇಶ ಇದ್ದರೂ ಕೂಡ ಅದನ್ನ ಮತಗಟ್ಟೆ ಅಧಿಕಾರಿ, ಬಿಎಲ್ ಒ ಗಳಾಗಿ ಕೆಲಸ ನಿರ್ವಹಿಸಿರುವ ಶಿಕ್ಷಕರಿಗೆ ಸಂಬAಧಿಸಿದ ಬಿಇಒ ಅವರು ಮಂಜೂರು ಮಾಡಿಲ್ಲ ಎನ್ನುವ ಆರೋಪವನ್ನು ಶಿಕ್ಷಕರು ಮಾಡುತ್ತಿದ್ದಾರೆ. ಅಷ್ಟೇ ಅಲ್ಲ ನಮ್ಮನ್ನು ಈ ಕರ್ತವ್ಯದಿಂದ ಬಿಡುಗಡೆಗೊಳಿಸುವಂತೆ ಕೂಡ ಶಿಕ್ಷಕರು ಬಿಇಒಗೆ ಒತ್ತಾಯಿಸುತ್ತಿದ್ದಾರೆ. ಶಿಕ್ಷಕರಾದ ನಾವುಗಳು ಮಕ್ಕಳ ಪಾಠ ಪ್ರವಚನದ ಹಿತದೃಷ್ಟಿಯಿಂದ ಅಲ್ಲದೆ ಕೋರ್ಟ್ ಆದೇಶದಂತೆ ಶಿಕ್ಷಕರು ಬೋಧನೆ ಬಿಟ್ಟು ಅನ್ಯ ಕಾರ್ಯಗಳನ್ನು ಮಾಡುವಂತಿಲ್ಲ ಎಂದು ಆದೇಶಿಸುವುದರಿಂದ ನಮ್ಮನ್ನು ಈ ಕರ್ತವ್ಯದಿಂದ ವಿಮುಕ್ತಿಗೊಳಿಸಿ ಬೇರೆ ಇಲಾಖೆಯವರನ್ನು ನೇಮಿಸಿ ಕೊಳ್ಳಬೇಕೆನ್ನುವಂತೆ ಶಿಕ್ಷಕರು ಒತ್ತಾಯ ಮಾಡುತ್ತಿದ್ದಾರೆ.
ಪಟ್ಟಣದ ಒಳಮಠದ ಸಮುದಾಯ ಭವನದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ನಾಯಕನಹಟ್ಟಿ ಮತ್ತು ತಳಕು ಹೋಬಳಿಯ ಬಿ ಎಲ್ ಒ ಶಿಕ್ಷಕರು ಮನವಿಯನ್ನ ಸಹ ಬಿಇಒ ಗೆ ಮತ್ತು ತಹಶೀಲ್ದಾರ್ ಗೆ ನೀಡಿದ್ದೇವೆ ಎಂದು ಶಿಕ್ಷಕರು ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.
ಗ್ರಾಮೀಣ ಪ್ರದೇಶದಲ್ಲಿ ಸರ್ಕಾರಿ ಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರು ಇತ್ತೀಚಿಗೆ ಜರುಗಿದ ವಿಧಾನಸಭಾ ಚುನಾವಣೆ ಕಾರ್ಯ ನಿರ್ವಹಿಸಿ ಯಶಸ್ವಿಗೊಳಿಸಿದ್ದಾರೆ.
ಪ್ರಸಕ್ತ ಸಾಲಿನ ಪಾಠಪ್ರವಚನಗಳು ಸುಗಮವಾಗಿ ಸಾಗಬೇಕಾದರೆ ಶಿಕ್ಷಕರನ್ನ ಮೊದಲು ಚುನಾವಣೆ ಕೆಲಸದಿಂದ ಮುಕ್ತಗೊಳಿಸಬೇಕು. ಕಾರ್ಯನಿರತ ಶಿಕ್ಷಕರ ಮೊದಲ ಕರ್ತವ್ಯವೆಂದರೆ ಶಾಲೆಗಳಲ್ಲಿ ಮಕ್ಕಳಿಗೆ ಆಟ ಪಾಠ ಶಿಸ್ತು ಕಲಿಸುವುದು, ಮಕ್ಕಳ ಬೌಧಿಕ ಮಟ್ಟ ಹೆಚ್ಚಳಕ್ಕೆ ಶ್ರಮಿಸುವಂತಹದ್ದಾಗಿದೆ. ಅದ ಬಿಟ್ಡು ಇನ್ನೂ ಮುಂಬರುವ ಚುನಾವಣೆ ಕೆಲಸಗಳಿಗೂ ಅವರನ್ನ ಬಳಸಿಕೊಳ್ಳುವುದು ಮುಂದುವರೆದರೆ ಅವರಿಂದ ಮಕ್ಕಳ ಶಿಕ್ಷಣ ಕುಂಠಿತವಾಗುವುದಿಲ್ಲವೇ.. ಇದು ಮಾನ್ಯ ಹೈಕೋರ್ಟ್ ಮತ್ತು ಸರ್ಕಾರದ ಅದೇಶದ ಸ್ಪಷ್ಟ ಉಲ್ಲಂಘನೆ ಅಲ್ಲವೇ.. ಇದಕ್ಕೆ ಉತ್ತರಿಸುವವರು ಯಾರು..ಎಂದಿದ್ದಾರೆ.