ಚಳ್ಳಕೆರೆ : ಶಾಲೆಯ ಮಕ್ಕಳಿಗೆ ಪಾಠ ಬೋಧನೆ ಹಾಗೂ ಸಹ ಪಠ್ಯದ ಜೊತೆಗೆ ಪ್ರತಿ ಶನಿವಾರ ಬ್ಯಾಗ್ ರಹಿತ ಕಲಿಕೆಯನ್ನು ಕಲಿಸುವಂತೆ ರಾಜ್ಯ ಸರಕಾರ ಸೂಚಿಸಿರುವ ಹಿನ್ನೆಲೆಯಲ್ಲಿ ಈ ದಿನ ರಾಜ್ಯದ ಎಲ್ಲಾ ಶಾಲೆಗಳಲ್ಲಿ ಬ್ಯಾಗ್ ರಹಿತ ದಿನಾಚರಣೆ ಆಚರಿಸಿದರು.

ಅದರಂತೆ ಚಳ್ಳಕೆರೆ ತಾಲೂಕಿನ ಬಂಡೆಹಟ್ಟಿ ಗ್ರಾಮದ ರೈತರ ಹೊಲಕ್ಕೆ ಶಿಕ್ಷಕರು ಹಾಗೂ ಶಾಲಾ ಮಕ್ಕಳೊಂದಿಗೆ ಹೊಲಕ್ಕೆ ಭೇಟಿ ನೀಡಿ ರೈತರೊಟ್ಟಿಗೆ ಈಡಿ ದಿನ ಚಿಂತನ‌ ಮಂಥನ ನಡೆಸಿದರು.

ಇನ್ನೂ ಪ್ರಗತಿಪರ ರೈತರಾದ ಚಂದ್ರಶೇಖರ್ ಎಂಬುವರ ಕೃಷಿ ಹೊಂಡ ಹಾಗೂ ಮೆಕ್ಕೆಜೋಳ ಹಾಗೂ ಈರುಳ್ಳಿ ಬೆಳೆಯ ನಾಟಿ ಮಾಡುವ ಪದ್ಧತಿ ಮತ್ತು ಕಳೆ, ಗೊಬ್ಬರ ಔಷಧಿ ಸಿಂಪಡಣೆ ಬಗ್ಗೆ ಹಾಗೂ ಬೆಳೆ ಕಟಾವಣೆ ಬಗ್ಗೆ ಮತ್ತು ಅದರ ಉಪಯೋಗದ ಬಗ್ಗೆ ಸಂಪೂರ್ಣವಾಗಿ ರೈತರಿಂದ ಮಕ್ಕಳಿಗೆ ಪ್ರಾತ್ಯಕ್ಷಿಕೆ ವಿವರವಾಗಿ ನೀಡಿದರು.

ಹೊಲದಲ್ಲಿ ಅನೇಕ ರೀತಿಯ ಬೆಳೆಗಳನ್ನು ಬೆಳೆಯುವ ಪದ್ದತಿ ಮತ್ತು ನಾಟಿ ಮಾಡುವ ಬಗ್ಗೆ ಮತ್ತು ವಿಧಾನಗಳ ಬಗ್ಗೆ ಅನೇಕ ಬೆಳೆಗಳನ್ನು ಬೆಳೆಯುವ ಬಗ್ಗೆ ರೈತರು ನೈಜವಾಗಿ ತಿಳಿಸಿಕೊಟ್ಟರು.

ನಂತರ ಬಹುತೇಕ ಬುಡಕಟ್ಟು ಸಮುದಾಯದವರೇ ಇಲ್ಲಿ ಹೆಚ್ಚಿನದಾಗಿ ವಾಸ ಮಾಡುತ್ತಿರುವುದರಿಂದ ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಿಂದುಳಿದ ಪ್ರದೇಶವಾಗಿರುವುದರಿಂದ ಶಾಲೆಯ ಮಕ್ಕಳಿಗೆ ಶೈಕ್ಷಣಿಕವಾಗಿ ಸಬಲರಾಗಲು

ಅಗತ್ಯವಾಗಿರುವಂತಹ ಉಚಿತವಾಗಿ ನೋಟ್ ಬುಕ್ , ಪೆನ್ನು ಪೆನ್ಸಿಲ್ ಹಾಗೂ ಸಮವಸ್ತ್ರಗಳನ್ನು ಮತ್ತು ತಟ್ಟೆ ಲೋಟಗಳನ್ನು ಮತ್ತು ಶಾಲೆಗೆ ಅಗತ್ಯವಾಗಿ ಬೇಕಾಗಿರುವ ಪೀಠೋಪಕರಣಗಳನ್ನು ಶಾಲೆಗೆ ದಾನವಾಗಿ ನೀಡಬೇಕೆಂದು ಈದೇ ಸಂಧರ್ಭದಲ್ಲಿ ಎಸ್ ಡಿ ಎಂಸಿ ಪದಾಧಿಕಾರಿಗಳು ದಾನಿಗಳಲ್ಲಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕ ಆರ್.ನಾಗರಾಜ್ ಹಾಗೂ ಸಹಶಿಕ್ಷಕ ಎಚ್ .ಹನುಮಂತಪ್ಪ ಮತ್ತು ಶಾಲಾ ಮಕ್ಕಳು ರೈತರು ಮತ್ತು ಹೊಲದಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರು ಹಾಜರಿದ್ದರು

Namma Challakere Local News
error: Content is protected !!