ಚಳ್ಳಕೆರೆ : ಇಂದಿನ ಯುವ ಪೀಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ತಂಬಾಕು ಸೇವನೆಗೆ ಬಲಿಯಾಗುತ್ತಿರುವುದು ಅಭಿವೃದ್ಧಿಗೆ ಮಾರಕ ವಾಗುತ್ತದೆ, ಯುವ ಜನರು ನಮ್ಮ ಸಂಸ್ಕೃತಿಯನ್ನು ಮರೆತು ಪಾಶ್ಚಿಮಾತ್ಯ ರಾಷ್ಟçಗಳನ್ನು ಅನುಸರಿಸುವ ಭರದಲ್ಲಿ ಮಾದಕ ಸೇವನೆಗಳಗೆ ಮಾರು ಹೋಗುತ್ತಿದ್ದಾರೆ ಎಂದು ವಕೀಲರಾದ ಮಧುಮತಿ ಹೇಳಿದ್ದಾರೆ.
ಅವರು ನಗರದ ಶ್ರೀ ಸಾಯಿ ಚೇತನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಸಂಘದ ವತಿಯಿಂದ ಹಮ್ಮಿಕೊಂಡ ಸ್ಯಸ್ಥಾö್ಯ ಸಮಾಜ ನಿರ್ಮಾಣದಲ್ಲಿ ಗುಟ್ಕಾ, ತಂಬಾಕು ದುಷ್ಪರಿಣಾಮಗಳ ಪಾತ್ರ ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು, ಚಟಕ್ಕೆ ಈಡಾದ ವ್ಯಕ್ತಿ ಯಾವುದೇ ಅಪಾಯವನ್ನು ಲೆಕ್ಕಿಸುವುದೇ ಇಲ್ಲ. ಈ ಚಟಕ್ಕೆ ದಾಸನಾದನ್ನು ಬದುಕಿ ಉಳಿಯುವುದೇ ಕಷ್ಟಕರ ಅದ್ದರಿಂದ ಪ್ರತಿಯೊಬ್ಬರೂ ಸಹ ಇಂತಹ ಚಟಗಳಿಂದ ದೂರವಿರಲು ಪ್ರಯತ್ನಿಸಬೇಕು ಎಂದರು.
ಸಂಸ್ಥೆಯ ಕಾರ್ಯದರ್ಶಿಯಾದ ಎಂ.ಸರಸ್ವತಮ್ಮ ಮಾತನಾಡಿ, ಇಂದಿನ ಸಮಾಜದಲ್ಲಿ ಯುವ ಜನತೆ ಮಾದಕ ವ್ಯಸನಿಗಳಾಗಿ ಆರೋಗ್ಯವಂತ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ, ಸುಸ್ಥಿರ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರ ಪಾತ್ರ ಅಗತ್ಯ ಆದ್ದರಿಂದ ನಾವು ಸುಸ್ಥಿರ ಸಮಾಜ ನಿರ್ಮಾಣ ಕಾರ್ಯದಲ್ಲಿ ಪಾಲ್ಗೊಳ್ಳಬೇಕು ಎಂದರು.
ಇದೇ ಸಂದAರ್ಭದಲ್ಲಿ ರಂಜಿತ್ ಕುಮಾರ್, ಅಲ್ಪಸಂಖ್ಯಾತ ಶಾಲೆಯ ಶಿಕ್ಷಕರಾದಂತಹ ಬಶೀರ್, ನಿರ್ಮಲಾ, ಜಯಶ್ರೀ, ಶಿಲ್ಪಾ, ಸರೋಜಾ ಮುಂತಾದವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು