ಚಳ್ಳಕೆರೆ : ಪ್ರಸ್ತುತ ದಿನಮಾನಗಳಲ್ಲಿ ಪ್ರತಿಯೊಬ್ಬರು ಪ್ಲಾಸ್ಟಿಕ್ ಬಳಸಿ ಮನುಷ್ಯನನ್ನು ಸಾಯುವ ಹಂತಕ್ಕೆ ತೆಗೆದುಕೊಂಡು ಹೋಗುತ್ತದೆ ಇದು ಅಲ್ಲದೆ ನಮ್ಮ ಪೌರಕಾರ್ಮಿಕರು ಪ್ಲಾಸ್ಟಿಕ್ ವಸ್ತುಗಳನ್ನು ಸುಡುವುದರಿಂದ ಬರುವ ವಾಸನೆಯಿಂದ ಮನುಷ್ಯನ ದೇಹಕ್ಕೆ ಸೇರಿ ಕ್ಯಾನ್ಸರ್ ಬರುತ್ತದೆ ಆದ್ದರಿಂದ ಕಾರ್ಮಿಕರು ಎಚ್ಚರದಿಂದ ಇರಬೇಕು ಎಂದು ಸ್ಥಾಯಿ ಸಮಿತಿಯ ಅಧ್ಯಕ್ಷ ಎಂ,ಜಿ, ರಾಘವೇಂದ್ರ ಹೇಳಿದರು.
ಅವರು ನಗರದ ನಗರಸಭೆ ಹಿಂಭಾಗದ ಸಮುದಾಯ ಭವನದಲ್ಲಿ ಆಯೋಜಿಸಿರುವ ಪ್ಲಾಸ್ಟಿಕ್ ಮುಕ್ತ ಅಭಿಯಾನಕ್ಕೆ ಚಾಲನೆ ಕೊಟ್ಟು ಮಾತನಾಡಿದರು, ಪ್ರಸ್ತುತ ದಿನಮಾನಗಳಲ್ಲಿ ಪ್ರತಿಯೊಬ್ಬರು ಪ್ಲಾಸ್ಟಿಕ್ ಬಳಸಿ ಇಡ್ಲಿ ಟೀ ಕುಡಿಯುವ ಗ್ಲಾಸ್ಗಳು ನೀರು ಕುಡಿಯುವ ಗ್ಲಾಸ್ಗಳು ತರಕಾರಿ ತೆಗೆದುಕೊಂಡು ಹೋಗುವ ಕವರುಗಳು ಇನ್ನು ಅನೇಕ ರೀತಿಯ ಅಡಿಗೆ ಪದಾರ್ಥಗಳನ್ನು ತೆಗೆದುಕೊಂಡು ಹೋಗುವ ಪ್ಲಾಸ್ಟಿಕ್ ಕವರ್ ನಲ್ಲಿರುವ ಕೆಮಿಕಲ್ ತಿನ್ನುವ ಆಹಾರಕ್ಕೆ ಆಗಲಿ ಅದರಿಂದ ಕ್ಯಾನ್ಸರ್ ನಂತಮ್ಮ ಕಾಯಿಲೆಗಳು ಉಲ್ಬಣ ಗೊಳ್ಳುತ್ತವೆ ಆದ್ದರಿಂದ ಎಲ್ಲಾರೂ ಪ್ಲಾಸ್ಟಿಕ್ ಮುಕ್ತ ನಗರಕ್ಕೆ ಪಣತೊಡಬೇಕು ಎಂದರು.
ನಗರಸಭೆ ಪೌರಾಯುಕ್ತ ರಾಮಕೃಷ್ಣಪ್ಪ ಮಾತನಾಡಿ, ಪ್ಲಾಸ್ಟಿಕ್ ಕವರ್ ಟೀ ಕುಡಿಯೋ ಗ್ಲಾಸ್ ನಲ್ಲಿ ಪ್ಲಾಸ್ಟಿಕ್ ಊಟ ಮಾಡುವ ತಟ್ಟೆಯಲ್ಲಿ ಪ್ಲಾಸ್ಟಿಕ್ ಇಂತಹ ಪ್ಲಾಸ್ಟಿಕ್ ಬಳಕೆಯಿಂದ ಕ್ಯಾನ್ಸರ್ ರೋಗಗಳು ಮನುಷ್ಯರ ದೇಹ ಸೇರುತ್ತವೆ ಎಂದು ಹೇಳಿದರು,
ಇನ್ನು ಈ ಸಂದರ್ಭದಲ್ಲಿ ಹೆಲ್ತ್ ಇನ್ಸ್ಪೆಕ್ಟರ್ ದಾದಾಪೀರ್ ಗಣೇಶ್, ಲಿಂಗರಾಜ್ ಹಾಗೂ ಪೌರಕಾರ್ಮಿಕರು ಉಪಸ್ಥಿತರಿದ್ದರು