ಚಳ್ಳಕೆರೆ : ಶೇಂಗಾ ಬಿತ್ತನೆ ಬೀಜವನ್ನು ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ದರವನ್ನು ಕೃಷಿ ಇಲಾಖೆ ನಿಗದಿ ಮಾಡಿದ್ದು, ರೈತರು ಮಾರುಕಟ್ಟೆಯಲ್ಲಿ ಹೆಚ್ಚು ಖರೀದಿ ಮಾಡುತ್ತಿದ್ದು ಶೇಂಗಾ ಬಿತ್ತನೆ ಬೀಜದಲ್ಲಿ ಸರ್ಕಾರದಿಂದ ಮರು ಪರಿಶೀಲನೆ ನಡೆಸಿ ಕೃಷಿ ಇಲಾಖೆಯಿಂದ ಸಬ್ಸಿಡಿ ನೀಡುವ ಮೂಲಕ ರೈತರ ನೆರವಿಗೆ ಸರ್ಕಾರ ದಾವಿಸಬೇಕು ಎಂದು ಶಾಸಕ ಟಿ. ರಘುಮೂರ್ತಿ ವಿಧಾನಸಭೆ ಕಲಾಪದ ವೇಳೆ ಕೃಷಿ ಸಚಿವರಾದ ಚೆಲುವರಾಯಸ್ವಾಮಿಗೆ ಮತ್ತು ಸರ್ಕಾರಕ್ಕೆ ಮನವಿ ಮಾಡಿದರು.
ಬಜೆಟ್ ಅಧಿವೇಶನ ಆದ ನಂತರ ನಡೆಯುತ್ತಿರುವ ಚರ್ಚೆ ವೇಳೆ ಗಮನ ಸೆಳೆಯುವ ಪ್ರಶ್ನೋತ್ತರಗಳನ್ನ ಮಾತನಾಡಿದ ಶಾಸಕ ಟಿ.ರಘುಮೂರ್ತಿ ಅವರು ಚಿತ್ರದುರ್ಗ ಜಿಲ್ಲೆಯಲ್ಲಿ ಚಳ್ಳಕೆರೆ ವಿಧಾನಸಭಾ ಕ್ಷೇತ್ರ ಸೇರಿ ಮೊಳಕಾಲ್ಮುರು, ಹಿರಿಯೂರು, ಚಿತ್ರದುರ್ಗ, ಹೊಸದುರ್ಗ, ತಾಲ್ಲೂಕುಗಳು ಅಲ್ಲದೆ ತುಮಕೂರು ಜಿಲ್ಲೆ ರೈತರಿಗೆ ಸಬ್ಸಿಡಿ ನೀಡಿದರೆ ಹೆಚ್ಚಿನ ಅನುಕೂಲವಾಗುತ್ತದೆ.
ನಮ್ಮ ಕ್ಷೇತ್ರದಲ್ಲಿ ಹೆಚ್ಚು ಶೇಂಗಾ ಬೆಳೆಗಾರರಿದ್ದು ಗ್ರಾಮೀಣ ಭಾಗದಲ್ಲಿ 5900 ರೂ. ಬಿತ್ತನೆ ಬೀಜ ನೀಡುವ ಮೂಲಕ ಸರ್ಕಾರದ ದರಕ್ಕಿಂತ ಕಡಿಮೆ ದರದಲ್ಲಿ ಬಿತ್ತನೆ ಬೀಜ ಮಾರಾಟ ಮಾಡುತ್ತಿದ್ದಾರೆ, ಎಂದು ಸಚಿವರ ಗಮನಕ್ಕೆ ತಂದರು .
2019 -20ನೇ ಸಾಲಿನ ಬಜೆಟ್ ನಲ್ಲಿ ಮೊಳಕಾಲ್ಮೂರು, ಚಳ್ಳಕೆರೆ, ಶಿರಾ, ಮಧುಗಿರಿ, ಹಾಗೂ ಪಾವಗಡ ಕ್ಷೇತ್ರಕ್ಕೆ 50 ಕೋಟಿ ರೂ. ಹಣವನ್ನು ವಿಶೇಷವಾಗಿ ಈ 5 ತಾಲೂಕಿನ ಶೇಂಗಾ ಬೆಳೆ ಪ್ರೋತ್ಸಾಹ ನೀಡಲು ರೈತರಿಗೆ ನೆರವು ಆಗಬೇಕು.
ಪ್ರತಿ ಬಾರಿ ಸಹ ಶೇಂಗಾ ಬೆಲೆ ನಿಗಧಿಯಾದ ನಂತರ ಸಾಕಷ್ಟು ಬಾರಿ ಸಬ್ಸಿಡಿ ರೂಪದಲ್ಲಿ ಅಥವಾ ಖರೀದಿಯಲ್ಲಿ ರೈತರಿಗೆ ನೆರವು ನೀಡಿ ಬೆಲೆಯನ್ನು ಕಡಿಮೆ ಮಾಡಿದ್ದು ಈ ಬಾರಿ ಸಬ್ಸಿಡಿ ನೀಡಿ ರೈತರ ಪರವಾಗಿ ನಮ್ಮ ಸರ್ಕಾರ ನಿಲ್ಲಬೇಕು. ಚಿತ್ರದುರ್ಗ ಜಿಲ್ಲೆಯ ಜಿಲ್ಲಾಧಿಕಾರಿಗಳು ಮತ್ತು ರೈತರು ಸಭೆ ನಡೆಸಿ ಬೆಲೆ ಕಡಿಮೆ ಮಾಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿದ್ದು ಬೆಲೆ ನಿಗಧಿಪಡಿಸಿ ಎಂದು ಸಚಿವರಿಗೆ ಮನವಿ ಮಾಡಿದರು.
ಕೃಷಿ ಸಚಿವರಾದ ಚೆಲುವರಾಯಸ್ವಾಮಿ ಮಾತನಾಡಿ ಶಾಸಕರಾದ ಟಿ.ರಘುಮೂರ್ತಿ ಅವರು ಹೇಳಿರುವುದು ಉತ್ತಮ ಸಲಹೆಯಾಗಿದೆ. ಈಗಾಗಲೇ ಅರ್ಧದಷ್ಟು ಬೀಜ ಮಾರಾಟವಾಗಿದೆ ಬೆಲೆ ನಿಗದಿಕೆ ಒಂದು ಸಮಿತಿ ಇದ್ದು ಎಲ್ಲವನ್ನು ಅಧ್ಯಯನ ಮಾಡಿರುತ್ತಾರೆ. ಈಗ ಬೆಲೆ ಕಡಿಮೆ ಮಾಡುವುದು ಸೂಕ್ತವಲ್ಲ ಎಂದಾಗ ಶಾಸಕ ರಘುಮೂರ್ತಿ ಮಧ್ಯ ಪ್ರವೇಶಿಸಿ ಕಳೆದ 11 ವರ್ಷಗಳಿಂದ ಶಾಸಕನಾಗಿದ್ದು ಎಲ್ಲಾ ಸರ್ಕಾರಗಳಲ್ಲಿ ಸರ್ಕಾರ ಬೆಲೆ ನಿಗದಿ ಮಾಡಿ ನಂತರ ಪರಿಶೀಲಿಸಿ ಸಬ್ಸಿಡಿ ಹೆಚ್ಚಿಸಿ ನೆರವಾಗಿದ್ದು ದಯಮಾಡಿ ಪರಿಶೀಲಿಸಿ ಅನುಕೂಲ ಮಾಡಿಕೊಡಬೇಕು ಎಂದಾಗ ಸಚಿವರ ಪರಿಶೀಲಿಸುತ್ತೇನೆ ಎಂದು ಉತ್ತರ ನೀಡಿದರು.

ಬಾಕ್ಸ್
ನಮ್ಮ ಜಿಲ್ಲೆಯ ರೈತರಿಗೆ ಶೇಂಗಾ ಬಿತ್ತನೆ ಬೀಜದ ಬೆಲೆಯಲ್ಲಿ ಸಬ್ಸಿಡಿ ಹೆಚ್ಚಿಸಲು ಕೃಷಿ ಸಚಿವರಿಗೆ ಮನವಿ ಮಾಡಿದ್ದೇನೆ. ಸಚಿವರು ಸಹ ಪರಿಶೀಲಿಸುತ್ತೇನೆ ಎಂದಿದ್ದು ಬೆಲೆ ಕಡಿಮೆ ಮಾಡಿದರೆ ರೈತರಿಗೆ ಹೆಚ್ಚು ಅನುಕೂಲವಾಗುತ್ತದೆ.

ಟಿ.ರಘುಮೂರ್ತಿ.
ಶಾಸಕರು ಚಳ್ಳಕೆರೆ ವಿಧಾನ ಸಭಾ ಕ್ಷೇತ್ರ

Namma Challakere Local News
error: Content is protected !!