ಚಳ್ಳಕೆರೆ : ಪ್ರಕಾಶ್ ಸ್ಪಾಂಜ್ ಐರನ್ ಅಂಡ್ ಪವರ್ ಪ್ರೆöÊವೈಟ್ ಲಿಮಿಟೆಡ್ ಹಾಗೂ ಶ್ರೀ ಬಸವೇಶ್ವರ ವೈದ್ಯಕೀಯದಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ

ಚಳ್ಳಕೆರೆ : ಸಾಮಾಜ ಸೇವೆಯಲ್ಲಿ ಪ್ರತಿಯೊಬ್ಬ ಮನುಷ್ಯ ತೊಡಬೇಕು ಅಂತಹ ಮಹತ್ವದ ಕಾರ್ಯ ಕಳೆದ ಹಲವು ವರ್ಷಗಳಿಂದ ನಿರಂತರವಾಗಿ ಸಾಮಾಜಮುಖಿ ಕಾರ್ಯದಲ್ಲಿ ಆರೋಗ್ಯ ತಪಾಸಣೆ ಶಿಬಿರಗಳನ್ನು ಆಯೋಜಿಸುವುದು ಶ್ಲಾಘನೀಯ ಕಾರ್ಯ ಎಂದು ಸಾಣೀಕೆರೆ ಗ್ರಾಮಪಂಚಾಯಿತಿ ಅಧ್ಯಕ್ಷೆ ಶೃತಿ ಚಂದ್ರಕಾAತ್ ಹೇಳಿದ್ದಾರೆ.
ತಾಲೂಕಿನ ಕಾಪರಹಳ್ಳಿ ಮತ್ತು ಜಡೆಕುಂಟೆ ಗ್ರಾಮದ ನಿವಾಸಿಗಳಿಗೆ ಉಚಿತ ಆರೋಗ್ಯ ತಪಾಸಣೆಯನ್ನು ಪ್ರಕಾಶ್ ಸ್ಪಾಂಜ್ ಐರನ್ ಅಂಡ್ ಪವರ್ ಪ್ರೆöÊವೈಟ್ ಲಿಮಿಟೆಡ್ ಹಾಗೂ ಶ್ರೀ ಬಸವೇಶ್ವರ ವೈದ್ಯಕೀಯ ಕಾಲೇಜು ಆಸ್ಪತ್ರೆ, ಚಿತ್ರದುರ್ಗ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ”ಉಚಿತ ಆರೋಗ್ಯ ತಪಾಸಣಾ ಶಿಬಿರ”ದಲ್ಲಿ ಪಾಲ್ಗೊಂಡು, ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ,
ಸಾಮಾಜಮುಖಿ ಕಾರ್ಯದಲ್ಲಿ ತೋಡಗುವ ಮೂಲಕ ಪ್ರತಿ ವರ್ಷವೂ ಕೂಡ ಉಚಿತ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಿ ಸಾರ್ವಜನಿಕರ ಆರೋಗ್ಯ ಕಾಪಾಡುವ ಪುಣ್ಯದ ಕಾರ್ಯ ಎಂದರು.
ಶಿಬಿರದಲ್ಲಿ ಸಾಮಾನ್ಯ ವೈದ್ಯಕೀಯ, ಕೀಲು ಮತ್ತು ಮೂಳೆ, ಕಿವಿ, ಮೂಗು, ಗಂಟಲು, ಮಕ್ಕಳ ತಜ್ಞರು, ಕಣ್ಣು ಮತ್ತು ದಂತ ತಜ್ಞರು ಭಾಗವಹಿಸಿ ಚಿಕಿತ್ಸೆ ಮತ್ತು ಔಷದೋಪಚಾರ ಮಾಡಿದರು. ಶಿಬಿರದಿಂದ ಸುಮಾರು 300 ಜನ ಚಿಕಿತ್ಸೆ ಪಡೆದುಕೊಂಡರು.
ಸAಯೋಜಕರಾದ ಪ್ರಕಾಶ್ ಸ್ಪಾಂಜ್ ಐರನ್ ಅಂಡ್ ಪವರ್ ಪ್ರೆöÊ.ಲಿ. ಮುಖ್ಯಸ್ಥರಾದ ಎಸ್.ಕೆ.ರಾಜೇಂದ್ರ ಕುಮಾರ್ ಮಾತನಾಡಿ, ನಿರಂತರವಾಗಿ ಉಚಿತ ಆರೋಗ್ಯ ತಪಾಸಣೆ ಶಿಬಿರಗಳು ನಡೆಯುತ್ತಿವೆ ಮತ್ತು ನುರಿತ ವೈಧ್ಯರುಗಳಿಂದ ಮನುಷ್ಯನ ದೇಹದ ಕಾಲು, ಕಿವಿ, ಹೊಟ್ಟೆ, ಈಗೇ ಹಲವು ಭಾಗಗಳನ್ನು ಕಡಿಮೆ ವೆಚ್ಚದಲ್ಲಿ ಶಸ್ತçಚಿಕಿತ್ಸೆ ಮಾಡುವ ಮೂಲಕ ಜನರ ಸೇವೆಗೆ ಸಿದ್ದರಿದ್ದೆವೆ ಎಂದರು.
ಈ ಸಂದರ್ಭದಲ್ಲಿ ಡಾ.ನಾಗರಾಜ್, ಎಸ್.ಬಿ.ರುದ್ರಪ್ಪ, ಎಸ್.ಮಂಜುನಾಥ್, ಶಶಿಕಾಂತ್ ದೇಶ್ಪಾಂಡೆ, ಬಿ.ಕೆ.ನಾಗರಾಜ ನಾಯ್ಕ. ಮತ್ತು ಸಿಬ್ಬಂಧಿ ವರ್ಗ. ಮುಖ್ಯ ಶಿಕ್ಷಕಿ ರಂಗಮ್ಮ, ಇತರರು ಇದ್ದರು.

Namma Challakere Local News
error: Content is protected !!