ಚಳ್ಳಕೆರೆ : ರಾಜ್ಯದಲ್ಲಿ ಕಳೆದ ಮೂರು ದಿನಗಳ ಹಿಂದೆ ನಡೆದ ಕಾಮಕುಮಾರ ಜೈನ ಮುನಿಗಳ ಹತ್ಯೆ ಖಂಡಿಸಿ ಇಂದು ಚಳ್ಳಕೆರೆ ನಗರದ ಸಮಸ್ತ ಜೈನ್ ಸಮುದಾಯದವರು ಕಾಲ್ನಡಿಗೆಯ ಮೂಲಕ ತಾಲೂಕು ಕಛೇರಿಗೆ ದಾವಿಸಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದ್ದಾರೆ.
ಇನ್ನೂ ತಹಶಿಲ್ದಾರರಿಗೆ ಮನವಿ ಸಲ್ಲಿಸಿದ ಜೈನ್ ಸಮುದಾಯದ ಬಾಂಧವರು, ರಾಜ್ಯದಲ್ಲಿ ನಡೆದ ಹೇಯ ಕೃತ್ಯ ಈಡೀ ಮಾನವ ಸಮುದಾಯವನ್ನು ತಲೆ ತಗ್ಗಿಸುವಂತೆ ಮಾಡಿದೆ, ಪರರಿಗೆ ಶಾಂತಿ ಬಯಸುವ ಜೈನ ಧರ್ಮವು ಹಾಗೂ ಜೈನ ಗುರುಗಳು ಅಪಾಯದಲ್ಲಿದ್ದಾರೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯ ಸಮೀಪ ಹಿರೇಕೋಡಿ ಜೈನ ದಿಗಂಬಉ್ಪ ಮಹರಾಜರ ಕ್ರೂರ ರೀತಿಯ ಹತ್ಯೆ ಯಾಗಿರುವುದು ಇಡೀ ನಮ್ಮ ಜೈನ ಸಮಾಜವು ಅಘಾತಗೊಂಡಿದೆ. ಜೈನ ಮುನಿಗಳಿಗೆ ರಕ್ಷಣೆ ಇಲ್ಲದೆ ಕಾಮಕುಮಾರ’ ಮುನಿಗಳು, ಧರ್ಮಪಾಲನೆ ಮಾಡಿಕೊಂಡು ಇರುವವರು. ಈ ಘೋರಕೃತ್ಯದಿಂದಾಗಿ ಜೈನ್ ಸಮುದಾಯ
ಅಪಾಯದ ಛಾಯೆಯಿಂದ ಮುನಿ ಮಹರಾಜರನ್ನು ಘೋರವಾಗಿ ಹತ್ಯೆಗೈದಿರುವುದು ಖಂಡನೀಯ, ಈ ಹೇಯ ಕೃತ್ಯವನ್ನು ಮಾಡಿರುವಂತಹ ಹಂತಕರಿಗೆ ಖಂಡಿತವಾಗಿ ಸಂವಿಧಾನ ಪ್ರಕಾರ, ಕಾನೂನು ಬದ್ಧ ಹಾಗೂ ನ್ಯಾಯಯುತವಾದ ಕ್ರಮವನ್ನು ಕೈಗೊಂಡು ಕಠಿಣ ಶಿಕ್ಷೆಯನ್ನು ಕೊಡಿಸಬೇಕಾಗಿ ಪ್ರತಿಭಟಿಸಿದ್ದಾರೆ.
ಅಂಹಿಸೆ ಮತ್ತು ತ್ಯಾಗದ ಪ್ರತಿಪಾದಕರು ಮತ್ತು ಶಾಂತಿಪ್ರಿಯರು ಆಗಿರುವ ಮುನಿವೃಂದಕ್ಕೆ ಇಂತಹ ಕೃತ್ಯಗಳು ಮರುಕಳಿಸದಂತೆ ರಕ್ಷಣೆ, ಭದ್ರತೆ ಹಾಗೂ ಅಭಯ ಹಸ್ತವನ್ನು ನೀಡಬೇಕೆಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈದೇ ಸಂಧರ್ಭದಲ್ಲಿ ಕಿರಣ್ ಜೈನ್, ಇತರರ ಪ್ರತಿಭಟನಾಕಾರರು ಇದ್ದರು.

Namma Challakere Local News
error: Content is protected !!