ಚಳ್ಳಕೆರೆ : ಬಯಲು ಸೀಮೆಯಲ್ಲಿ ಕಳೆದ ನಾಲ್ಕು ದಿನದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ತಾಲೂಕಿನ ಎನ್ ದೇವರಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಬರುವ ಬೊಗಳರಹಟ್ಟಿ ಯಿಂದ ಕಾಲೇದ ಹಟ್ಟಿ ಹೋಗುವ ರಸ್ತೆಯು ಅತಿಯಾದ ಮಳೆಯಿಂದ ಸುಮಾರು ಎರಡು ಕಿಲೋ ಮೀಟರ್ ನಷ್ಟು ಅಲ್ಲಲ್ಲಿ ಗುಂಡಿ ಬಿದ್ದು ನೀರು ನಿಂತ ಪರಿಣಾಮ ಶಾಲಾ ಮಕ್ಕಳು, ಪಾದಚಾರಿಗಳು, ವಾಹನ ಸವಾರರು, ರಸ್ತೆ ದಾಟಲು ಪರದಾಡುವಂತೆ ಆಗಿದೆ.
ಬೊಗಳರಹಟ್ಟಿ ಇಂದ ಕಾಲೇದ ಹಟ್ಟಿ ಹೋಗುವ ರಸ್ತೆ ಮಾರ್ಗವು ಗ್ರಾಮ ಪಂಚಾಯತಿ ಎಲ್ಲಿ ಬರುವ ನರೇಗಾ ಯೋಜನೆಯಲ್ಲಿ ಕಾಮಗಾರಿಯನ್ನು ಮಾಡಿದ್ದು ಕಳೆದ ಎರಡು ವರ್ಷಗಳಿಂದ ರಸ್ತೆಯು ತಗ್ಗು ಗುಂಡಿಗಳಿAದ ಕೂಡಿದ್ದು ಇದನ್ನು ಸಂಬAಧಪಟ್ಟ ಗ್ರಾಮ ಪಂಚಾಯಿತಿ ಅಧಿಕಾರಿಗಳ ಗಮನಕ್ಕೆ ತಂದರು ಯಾವುದೇ ಕ್ರಮವನ್ನು ಕೈಗೊಂಡಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.
ಅದೇ ರಿತಿಯಲ್ಲಿ ತಾಲೂಕಿನ ಸೂರನಹಳ್ಖಿ ಯಿಂದ ಬ್ರಿಡ್ಜ್ ಕಂ ಬ್ಯಾರೇಜ್ ವರೆಗೆ ಸುಮಾರು 3 ಕಿ.ಮೀ ರಸ್ತೆ ಕೆಸರು ಗದ್ದೆಯಾಗಿ ಗುಂಡಿಗಳು ಬಿದ್ದಿದ್ದು ಮಣ್ಣಿನ ರಸ್ತೆಗೆ ಡಾಂಬರ್ ರಸ್ತೆ ನಿರ್ಮಾಣ ಮಾಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಮಳೆಗಾಲ ಬಂದರೆ ಸಾಕು ರಸ್ತೆಯು ಕೆಸರು ಗದ್ದೆಯಂತಾಗಿ ಗುಂಡಿಗಳಿAದ ಕೂಡಿರುತ್ತದೆ ಇದರಿಂದ ಬೊಗಳರಹಟ್ಟಿ ಹಾಗೂ ಕಾಲೇದಹಟ್ಟಿ ಗ್ರಾಮದ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಾಲಾ ಕಾಲೇಜಿಗೆ ಹೋಗುವ ರಸ್ತೆ ಮಾರ್ಗವಾಗಿದ್ದು ಕೆಸರುಗದ್ದೆಯಿಂದ ಕೂಡಿರುವುದರಿಂದ ರಸ್ತೆ ದಾಟಲು ಕಿರಿಕಿರಿ ಉಂಟಾಗಿದೆ ಎಂದು ತಿಳಿಸಿದ್ದಾರೆ.
ಈ ರಸ್ತೆಯನ್ನು ಸಂಬAಧಪಟ್ಟ ಅಧಿಕಾರಿಗಳು ಆದಷ್ಟು ಬೇಗ ರಸ್ತೆಯನ್ನು ದುರಸ್ತಿ ಮಾಡಿಸಿ ಅಭಿವೃದ್ಧಿಪಡಿಸುವತ್ತ ಗಮನ ವಹಿಸಬೇಕು ಇಲ್ಲವಾದರೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವೂ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ಮಾಡುತ್ತೇವೆ ಎಂದು ಕೆಆರ್‌ಎಸ್ ಪಕ್ಷದ ಸಂಘಟನಾ ಕಾರ್ಯದರ್ಶಿಯಾದ ಬಾಲರಾಜ್ ಅವರು ಎಚ್ಚರಿಕೆ ನೀಡಿದ್ದಾರೆ