ಚಳ್ಳಕೆರೆ : ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಹೀಗಾಗಿ ಬೀದಿ ನಾಯಿಗಳ ಸಂಖ್ಯೆ ನಿಯಂತ್ರಣ ಹಾಗೂ ರೇಬೀಸ್ ರೋಗ ತಡೆಗಟ್ಟಲು ನಗರಸಭೆ ವ್ಯಾಪ್ತಿಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈ ಗೊಳ್ಳುವ ಅನಿವಾರ್ಯವಿದೆ.
ಬೀದಿ ನಾಯಿಗಳ ಸಮೀಕ್ಷೆಗೆ ಪಶುಪಾಲನಾ ವಿಭಾಗ ಮುಂದಾಗಬೇಕಿದೆ, ಅದರಂತೆ ರಾಜ್ಯದಲ್ಲಿ ಸುದ್ದಿಯಾಗುವ ಬೀದಿನಾಯಿಗಳ ಹಾವಳಿಗೆ ಕಡಿವಾಣ ಹಾಕಲು ನಗರಸಭೆ ಯಾವೆಲ್ಲ ಕ್ರಮ ಕೈಗೊಳ್ಳುವುದೊ ಕಾದು ನೋಡಬೇಕಿದೆ,
ಹೀಗಾಗಿ ಬೀದಿ ನಾಯಿಗಳ ಸಂತಾನ ಸಂಖ್ಯೆ ನಿಯಂತ್ರಣ ಹಾಗೂ ರೇಬಿಸ್ ರೋಗ ತಡೆಗಟ್ಟಲು ನಗರಸಭೆ ವ್ಯಾಪ್ತಿಯ ನಗರದ 31 ವಾರ್ಡ್ಗಳಲ್ಲಿನ ವಲಯಗಳಲ್ಲಿನ ಬೀದಿ ನಾಯಿಗಳ ಸಮೀಕ್ಷೆಗೆ, ಪಶುಪಾಲನಾ ವಿಭಾಗ ಮುಂದಾಗಬೇಕಿದೆ.
ಇನ್ನೂ ನಗರಸಭೆಯ ವ್ಯಾಪ್ತಿಯಲ್ಲಿ ಬೀದಿನಾಯಿಗಳ ಸರ್ವೆ 2023 ಮೊಬೈಲ್ ಆಯಪ್ ಮೂಲಕ ಬೀದಿ ನಾಯಿ ಸಮೀಕ್ಷೆ ನಡೆಸುವ ಅಗತ್ಯವಿದೆ.
ಈಗಾಗಲೇ ಬೆಂಗಳೂರು ಮಹಾನಗರ ಪಾಲಿಕೆಗಳಲ್ಲಿ ಮೊಬೈಲ್ ಆಯಪ್‌ನಲ್ಲಿ ಬೀದಿ ನಾಯಿ ಫೋಟೋ ತಗೆದು ಫೋಟೋ ಅಪ್ಲೋಡ್ ಮಾಡಲಾಗುತ್ತದೆ. ಸಮೀಕ್ಷೆ ನಂತರ ನಾಯಿಗಳಿಗೆ ಸಂತಾನಹರಣ ಶಸ್ತ್ರ ಚಿಕಿತ್ಸೆ ಮತ್ತು ಆಂಟಿರೇಬೀಸ್ ಲಸಿಕೆ ನೀಡಲಾಗಿದೆಯೇ ಅಥವಾ ಇಲ್ಲವೇ ಎಂಬುವುದನ್ನು ಮಾಹಿತಿ ಅಪ್ಲೋಡ್ ಮಾಡಲಾಗುತ್ತದೆ.
ಸಂತಾನ ಹರಣ ಚಿಕಿತ್ಸೆ ಆಗದೇ ಇದ್ದರೇ, ಸಮೀಕ್ಷೆ ಮೂಲಕ ಮುಂದಿನ ದಿನಗಳಲ್ಲಿ ಬೀದಿ ನಾಯಿಗಳಿಗೆ ಚಿಕಿತ್ಸೆ ನೀಡಲಾಗುತ್ತದೆ. 2019 ನೇ ಸಾಲಿನಲ್ಲಿ ಬಿಬಿಎಂಪಿಯಿAದ ನಡೆದ ಸಮೀಕ್ಷೆಯಲ್ಲಿ ಸುಮಾರು 3.10 ಲಕ್ಷ ಬೀದಿ ನಾಯಿಗಳಿವೆ ಎಂಬುದು ವರದಿಯಾಗಿದೆ.
ಅದರಂತೆ ಪ್ರತಿವಾರ್ಡಗಳಲ್ಲಿ ಹತ್ತರಿಂದ ಇಪ್ಪತ್ತು ಬೀದಿನಾಯಿಗಳು ಕಾಣ ಸಿಗುತ್ತವೆ ಆದ್ದರಿಂದ ಮುಂದೆ ದೊಡ್ಡ ಅನಾವುತ ತಪ್ಪಿಸಲು ಚಳ್ಳಕೆರೆ ನಗರಸಭೆ ಮುಂದಾಗುವೂದೊ ಕಾದು ನೋಡಬೇಕಿದೆ.