ನಾಯಕನಹಟ್ಟಿ:: ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ನೇತೃತ್ವ ವಹಿಸಿದ ರಾಜ್ಯ ಸರ್ಕಾರದ 2023-2024ನೇ ಸಾಲಿನ ಬಜೆಟ್ ಎಲ್ಲಾ ವರ್ಗದ ಜನರನ್ನು ಒಳಗೊಂಡ ಬಜೆಟ್ ಆಗಿದೆ. ಜನಸಾಮಾನ್ಯರಿಗೆ ಪೂರಕವಾದ ಬಜೆಟ್ ಎಂದು ರಾಜ್ಯ ಸಂಚಾಲಕರು ಹಾಗೂ ಕೆಪಿಸಿಸಿ ಎಸ್ ವಿಭಾಗ ವಕೀಲರಾದ
ಟಿ. ಮಲ್ಲೇಶ್ ಹೇಳಿದ್ದಾರೆ.

ಅವರು ಭಾನುವಾರ ಪಟ್ಟಣದ ಪರಿವೀಕ್ಷಣ ಮಂದಿರದಲ್ಲಿ ಕಾಂಗ್ರೆಸ್ ಪಕ್ಷದ ಹೋಬಳಿಯ ಮುಖಂಡರು ಹಾಗೂ ದಲಿತ ಮುಖಂಡರು ಆಯೋಜಿಸಿದ್ದ ಜನ್ಮದಿನ ಆಚರಣೆಯಲ್ಲಿ ಕೇಕ್ ಕತ್ತರಿಸಿ ಮಾತನಾಡಿದ್ದಾರೆ.

ಸಿದ್ದರಾಮಯ್ಯನವರ 14ನೇ ಬಜೆಟ್ ಜನಸಾಮಾನ್ಯರಿಗೆ ಪೂರಕವಾಗಿ ಬಯಲು ಸೀಮೆ ಚಿತ್ರದುರ್ಗ ಜಿಲ್ಲೆಗೆ ಮೆಡಿಕಲ್ ಕಾಲೇಜ್ ನೀಡಿರುವುದು ಸಂತೋಷದ ವಿಷಯ. ಮುಂಬರುವ ಜಿಲ್ಲಾ ಪಂಚಾಯತ್ ತಾಲೂಕು ಪಂಚಾಯತಿ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯುವುದು ಖಚಿತ.

ಆದ್ದರಿಂದ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳು ರಾಜ್ಯದ ಪ್ರತಿಯೊಬ್ಬರಿಗೂ ಯೋಜನೆ ಅನುಕೂಲವಾಗುತ್ತದೆ.ಕಾಂಗ್ರೆಸ್ ಪಕ್ಷ ನುಡಿದಂತೆ ನಡೆಯುವ ಪಕ್ಷ ಮೊಳಕಾಲ್ಮೂರು ಕ್ಷೇತ್ರದಲ್ಲಿ ಈ ಬಾರಿ ಉತ್ತಮವಾದ ಸರಳ ಸಜ್ಜನಿಕೆಯ ನಮ್ಮ ನೆಚ್ಚಿನ ಶಾಸಕ ಎಂ.ವೈ. ಗೋಪಾಲಕೃಷ್ಣರವರು ಉತ್ತಮವಾಗಿ ಕ್ಷೇತ್ರದ ಅಭಿವೃದ್ಧಿ ಕೆಲಸಗಳನ್ನು ಮಾಡುವರು ಎಂದು ಹೇಳಿದರು.

ಇದೇ ವೇಳೆ ಎನ್ ದೇವರಹಳ್ಳಿ ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷ ಕಾಟಯ್ಯ ವರವು, ತೊರೆಕೋಲ್ಮನಹಳ್ಳಿ ಆರ್. ಬಸವರಾಜ್, ನಾಯಕನಹಟ್ಟಿ ಮಾಜಿ ಗ್ರಾಮ ಪಂಚಾಯತಿ ಸದಸ್ಯ ಹೊಸಹಳ್ಳಿ ತಿಪ್ಪೇಸ್ವಾಮಿ, ಡಾ. ಓಬನಾಯಕ, ಎತ್ತಿನಹಟ್ಟಿ ಓಬಳೇಶ್, ಬಿ.ಕಾಟಯ್ಯ ಗ್ರಾಮ ಪಂಚಾಯತಿ ಉಪಾಧ್ಯಕ್ಷರು ಮಲ್ಲೂರಹಳ್ಳಿ, ಗುಂತುಕೋಲಮ್ಮನಹಳ್ಳಿ ವಕೀಲ ಮಲ್ಲೇಶ್ ,ದಾಸರ ಮುತ್ತೈನಹಳ್ಳಿ ಬಿಒಆರ್ ಓಬಣ್ಣ‌, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪರಿಶಿಷ್ಟ ಜಾತಿ ವಿಭಾಗ ಎಂ. ದುರುಗೇಶ್, ಹಿರೇಹಳ್ಳಿ, ಗುಂತಕೋಲಮ್ಮನಹಳ್ಳಿ ಯುವ ಮುಖಂಡ ಎಸ್ ಶಿವತಿಪ್ಪೇಸ್ವಾಮಿ, ಚೌಳಕೆರೆ ಶಿವರಾಜ್, ಸೋಶಿಯಲ್ ಮೀಡಿಯಾ ಮಧು ತೊರೆಕೋಲಮ್ಮನಹಳ್ಳಿ, ಸೇರಿದಂತೆ ಮುಂತಾದವರು ಇದ್ದರು.

About The Author

Namma Challakere Local News
error: Content is protected !!