ಚಳ್ಳಕೆರೆ : ಯಾರು ಗುಳೆ ಹೋಗದಂತೆ ನರೇಗಾ ಯೋಜನೆಯನ್ನು ಸದ್ಬಳಕೆ ಮಾಡಿಕೊಂಡು, ಯೋಜನೆಯ ಅನುಸಾರ ಕೆಲಸ ಮಾಡಿ, (ಜಮೀನು ಹೊಂದಿರುವ ಕೂಲಿ ಕಾರ್ಮಿಕರು ತಮ್ಮ ತಮ್ಮ ಜಮೀನುಗಳಲ್ಲಿ ಕೆಲಸ ಮಾಡಿಕೊಳ್ಳಲು ಅವಕಾಶವಿದೆ ) ಒಂದು ಕುಟುಂಬಕ್ಕೆ ಒಂದು ಅರ್ಥಿಕ ವರ್ಷಕ್ಕೆ 100 ದಿನಗಳ ಉದ್ಯೋಗ , ದಿನಕ್ಕೆ ಕೂಲಿ 316 ರೂಪಾಯಿಗಳು, ವರ್ಷಕ್ಕೆ (ಒಂದು ಕುಟುಂಬಕ್ಕೆ) 31,600 ರೂಪಾಯಿಗಳು ನೇರವಾಗಿ ಕೂಲಿಗಾರರ ಬ್ಯಾಂಕ್ ಖಾತೆಗೆ ಜಮಾವಾಗುವುದು ಎಂದು ಜಿಪಂ.ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎಂ.ಎಸ್.ದಿವಾಕರ್ ಹೇಳಿದ್ದಾರೆ.
ಅವರು ಮೊಳಕಾಲ್ಮುರು ತಾಲ್ಲೂಕು, ಕೋನಸಾಗರ ಗ್ರಾಮ ಪಂಚಾಯತಿ ವ್ಯಾಪ್ತಿಯ ನೇತ್ರಹಳ್ಳಿ ಗ್ರಾಮದಲ್ಲಿ ಸರ್ಕಾರಿ ಹಳ್ಳದಲ್ಲಿ ಹೂಳು ತೆಗೆಯುವ ಕಾಮಗಾರಿ ಪರೀವೀಕ್ಷಿಸಿ ಮಾತನಾಡಿದರು.
ಮಹಾತ್ಮ ಗಾಂಧಿ ನರೇಗಾ ಚಾಲನೆಯಲ್ಲಿರುವ ಕಾಮಗಾರಿ ಸ್ಥಳಕ್ಕೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಭೇಟಿ ನೀಡಿ ಕೂಲಿಗಾರರೊಂದಿಗೆ ಚರ್ಚೆ ನಡೆಸಿ ನಂತರ ಕೂಲಿ ಕಾರ್ಮಿಕರ ಕುಂದು -ಕೊರತೆಗಳನ್ನ, ಆರೋಗ್ಯ ಮತ್ತು ಸಕಾಲದಲ್ಲಿ ಕೂಲಿ ಪಾವತಿ ಆಗುತ್ತಿರುವ ಬಗ್ಗೆ ಸ್ಥಳಲ್ಲೇ ಮಾಹಿತಿ ಪಡೆದರು..
ಆರ್ಥಿಕವಾಗಿ ಕುಟುಂಬವು ಸದೃಢವಾಗಲು ಈ ಯೋಜನೆ ಸಹಕಾರಿ ಆಗುತ್ತದೆ, ಆದ್ದರಿಂದ ಎಲ್ಲರು ಈ ಯೋಜನೆಯನ್ನು ಸದ್ಬಳಕೆ ಮಾಡಿಕೊಂಡು, ಶ್ರಮವಹಿಸಿ, ನಿಯಮಾನುಸಾರ ಕೆಲಸ ಮಾಡಬೇಕೆಂದರು ಸೂಚಿಸಿದರು.