ಚಳ್ಳಕೆರೆ : ತಾಲೂಕಿನ ಎಲ್ಲಾ ಕಛೇರಿಗಳಲ್ಲಿ ಇನ್ನು ಮುಂದೆ ಚೆಕ್ ಬರೆಯುವ ಪದ್ದತಿ ಇಲ್ಲದೆ ಖಜಾನೆ ಮೂಲಕ ಬಿಲ್ ಪಾವತಿ ಮಾಡುವ ವಿಧಾನ ಜಾರಿಯಾಗುತ್ತದೆ ಎಂದು ಚಳ್ಳಕೆರೆ ಖಜಾನೆ ಅಧಿಕಾರಿ ಏಳುಕೋಟಿ ಹೇಳಿದ್ದಾರೆ.
ಅವರು ನಗರದ ತಾಲೂಕು ಪಂಚಾಯಿತಿ ಸಭಾಗಂಣದಲ್ಲಿ ಆಯೋಜಿಸಿದ್ದ ತಾಲೂಕಿನ ನಲವತ್ತು ಪಿಡಿಓಗಳು ಹಾಗೂ ಕಂಪ್ಯೂಟರ್ ಆಪರೇಟರ್ ಗಳಿಗೆ ಆಯೋಜಿಸಿದ್ದ ತರಬೇತಿ ಕಾರ್ಯಗಾರದಲ್ಲಿ ಮಾತನಾಡಿದರು, ಅಧಿಕಾರಿಗಳು ಇನ್ನು ಮುಂದೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಚೆಕ್ ನೀಡುವ ಬದಲು ಖಜಾನೆ ಮೂಲಕ ಬಿಲ್ ಪಾವತಿಸಬೇಕು ಇದರಿಂದ ಅಕ್ರಮ ದಾರರಿಗೆ ಕಡಿವಾಣ ಹಾಕಿದಂತೆ ಹಾಗೂ ಖಜಾನೆಯಲ್ಲಿ ಪಾರದರ್ಶಕವಾಗಿ ವ್ಯವಾರ ವಹಿವಾಟು ನಡೆಯುತ್ತದೆ ಎಂದರು.
ಇದೇ ಸಂಧರ್ಭದಲ್ಲಿ ತಾಲೂಕು ಪಂಚಾಯಿತಿ ಇಓ ಹೊನ್ನಯ್ಯ, ಅಕ್ಷರ ದಾಸೋಹ ಅಧಿಕಾರಿ ತಿಪ್ಪೆಸ್ವಾಮಿ, ತಾಲೂಕಿನ ಎಲ್ಲಾ ನಲವತ್ತಯ ಗ್ರಾಮ ಪಂಚಾಯಿತಿಗಳ ಪಿಡಿಓಗಳು ಕಂಪ್ಯೂಟರ್ ಗಳ ಸಿಬ್ಬಂದಿ ಹಾಜರಿದ್ದರು.